Advertisement

ತುಮ್ಮಿನಕಟ್ಟಿ ಗ್ರಾಪಂಗೆ ರಾಷ್ಟ್ರೀಯ ಪುರಸ್ಕಾರ

04:13 PM Apr 07, 2021 | Team Udayavani |

ಹಾವೇರಿ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಘನತ್ಯಾಜ್ಯ ವಸ್ತುಗಳನ್ನೇ ಬಳಸಿ ವಿಶಿಷ್ಟ ಉದ್ಯಾನವನ ನಿರ್ಮಿಸಿ ಗಮನಸೆಳೆದಿದ್ದ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮಪಂಚಾಯಿತಿ, ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯ ನೀಡುವ ದೀನ ದಯಾಳ ಉಪಾಧ್ಯಾಯಪಂಚಾಯತ್‌ ಸಶಕ್ತೀಕರಣ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿದೆ.

Advertisement

ಗ್ರಾಮದ ನೈರ್ಮಲ್ಯ, ಸಮರ್ಪಕ ತ್ಯಾಜ್ಯ ಸಂಗ್ರಹಣೆ ಮತ್ತುವಿಲೇವಾರಿ, ಸಾರ್ವಜನಿಕ ಸೇವೆ, ಕುಡಿಯುವ ನೀರಿನ ಪೂರೈಕೆಸೇರಿದಂತೆ ಸಮಗ್ರ ಕಾರ್ಯ ನಿರ್ವಹಣೆ ಮಾಡಿದ ಗ್ರಾಪಂಗಳನ್ನು

ಗುರುತಿಸಿ ಕೇಂದ್ರ ಸರಕಾರದ ಪಂಚಾಯತ್‌ ರಾಜ್‌ ಸಚಿವಾಲಯಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತಿದ್ದು, 2019-20ನೇ ಸಾಲಿನ ಪುರಸ್ಕಾರಕ್ಕೆ ತುಮ್ಮಿನಕಟ್ಟಿ ಗ್ರಾಪಂ ಅನ್ನು ಆಯ್ಕೆ ಮಾಡಲಾಗಿದೆ. ಏ.24ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸ್ವಚ್ಛತೆಗೆ ಆದ್ಯತೆ: ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿಸಂಗ್ರಹಿಸಲು ಗ್ರಾಪಂ ವ್ಯಾಪ್ತಿಯ ಎಲ್ಲ ಕುಟುಂಬಗಳಿಗೆ ಎರಡು ಕಸ ಸಂಗ್ರಹ ಡಬ್ಬಗಳನ್ನು ನೀಡಲಾಗಿದೆ. ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯ ಆಶಯಗಳನ್ನು ಇಲ್ಲಿ ಪರಿಣಾಮಕಾರಿಯಾಗಿಅನುಷ್ಠಾನ ಮಾಡಲಾಗುತ್ತಿದೆ. ಅಲ್ಲದೇ ಗ್ರಾಪಂ ವ್ಯಾಪ್ತಿಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲುಇನ್ಸಿನರೇಟರ್‌ ಯಂತ್ರ ಉಚಿತವಾಗಿ ನೀಡಲಾಗಿದೆ. ಇದರ ಬಳಕೆ ಕುರಿತು ಮಹಿಳೆಯರು, ಯುವತಿಯರಿಗೆ ಕಾರ್ಯಾಗಾರನಡೆಸಲಾಗಿದೆ. ಇದಲ್ಲದೇ ಗ್ರಾಪಂ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಘಟಕ ಆರಂಭಿಸಿ ಸಮರ್ಪಕ ರೀತಿಯಲ್ಲಿ ವಿಲೇವಾರಿಮಾಡಲಾಗುತ್ತಿದೆ. ಜತೆಗೆ ಸಾರ್ವಜನಿಕರಿಗೆ ಗ್ರಾಪಂನಿಂದ ಸಮರ್ಪಕವಾಗಿ ಸೇವೆ ನೀಡಲಾಗುತ್ತಿದೆ. ಇವೆಲ್ಲದರ ಮೌಲ್ಯಮಾಪನ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗ್ರಾಮ ಪಂಚಾಯಿತಿಯಿಂದ “ಎಸೆಯುವ ಮುನ್ನ ಆಲೋಚಿಸಿ’ ಎಂಬ ಜಾಗೃತಿ ಅಭಿಯಾನ ಕೈಗೊಳ್ಳುವ ಮೂಲಕ ಗ್ರಾಮಸ್ಥರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲಾಯಿತು. ಪಿಡಿಒ ಎಂ.ಅಂಬಿಕಾ ಹಾಗೂ ಆಡಳಿತ ಮಂಡಳಿಯ ಶ್ರಮದಿಂದ ಈ ಕಾರ್ಯ ಸಾಧ್ಯವಾಗಿದೆ ಎಂಬ ಅಭಿಪ್ರಾಯ ಗ್ರಾಮಸ್ಥರಿಂದ ವ್ಯಕ್ತವಾಗುತ್ತಿದೆ

Advertisement

10 ಲಕ್ಷ ರೂ. ನಗದು ಪುರಸ್ಕಾರ :

ಕೇಂದ್ರ ಸರ್ಕಾರದ ಪಂಚಾಯತ್‌ ರಾಜ್‌ ಸಚಿವಾಲಯ ನೀಡುವ ದೀನದಯಾಳಉಪಾಧ್ಯಾಯ ಪಂಚಾಯತ್‌ ಸಶಕ್ತೀಕರಣ ರಾಷ್ಟ್ರೀಯ ಪುರಸ್ಕಾರದ 2019-20ನೇ ಸಾಲಿನಪ್ರಶಸ್ತಿಗೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿಗ್ರಾಪಂ ಉತ್ತರ ಕರ್ನಾಟಕ ಭಾಗದಿಂದಆಯ್ಕೆಯಾಗಿರುವ ಏಕೈಕ ಗ್ರಾಮ ಪಂಚಾಯಿತಿ.ಆ ಮೂಲಕ 10 ಲಕÒ‌ ರೂ. ನಗದು ಪುರಸ್ಕಾರಕ್ಕೆ ತುಮ್ಮಿನಕಟ್ಟಿ ಗ್ರಾಪಂ ಭಾಜನವಾಗಿದೆ.

ಕಣ್ಮನ ಸೆಳೆಯುವ ಉದ್ಯಾನವನ :  ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ತುಮ್ಮಿನಕಟ್ಟಿ ಗ್ರಾಪಂ ಆವರಣದಲ್ಲಿ ಘನತ್ಯಾಜ್ಯವಸ್ತುಗಳನ್ನೇ ಬಳಸಿಕೊಂಡು ವಿಶಿಷ್ಟ ಉದ್ಯಾನನಿರ್ಮಿಸಲಾಗಿದೆ. ನಿರುಪಯುಕ್ತ ಬಿಸಾಕಿದಟೈಯರ್‌, ಹಳೆ ಬಾಟಲ್‌ಗ‌ಳನ್ನೇ ಬಳಸಿ ಸುಂದರಕಲಾಕೃತಿಗಳನ್ನಾಗಿ ಮಾಡಲಾಗಿದೆ. ಪ್ಲಾಸ್ಟಿಕ್‌ ಮತ್ತು ಗಾಜಿನ ಬಾಟಲಿಗಳು, ಖಾಲಿ ಡಬ್ಬಗಳು, ಹಳೆಯಟೈರ್‌ಗಳನ್ನು ಸಂಗ್ರಹಿಸಿ, ಅದಕ್ಕೆ ಬಣ್ಣ ಬಳಿದು ಅಲ್ಲಲ್ಲಿ ಸಸಿಗಳನ್ನು ನೆಡಲಾಗಿದೆ. ಉತ್ಪತ್ತಿಯಾಗುವಕಸದ ಪ್ರಮಾಣ ತಗ್ಗಿಸುವುದರೊಂದಿಗೆಸಾಧ್ಯವಾದಷ್ಟು ತ್ಯಾಜ್ಯ ವಸ್ತು ಮರುಬಳಸಿಕೊಳ್ಳಲು ನಿರ್ಧರಿಸಿ, ಗ್ರಾಪಂ ಸಿಬ್ಬಂದಿ ಬಳಸಿಕೊಂಡು ತಾಜ್ಯ ವಸ್ತುಗಳನ್ನು ಸಂಗ್ರಹಿಸಿ ಒಂದೂವರೆ ಎಕರೆ ಜಾಗದಲ್ಲಿ ರೂಪುಗೊಂಡ ಈ ಉದ್ಯಾನವನ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ನಮ್ಮ ಗ್ರಾಪಂ ಆಯ್ಕೆಯಾಗಿರುವುದು ಖುಷಿಯಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಗ್ರಾಪಂ ಆಡಳಿತ ಮಂಡಳಿ, ಗ್ರಾಮದ ಜನರ ಸಹಕಾರದಿಂದ ಇದು ಸಾಧ್ಯವಾಗಿದೆ. ಇದರಿಂದ ಇನ್ನಷ್ಟು ಸಾ ಧಿಸುವ ಉತ್ಸಾಹ ಬಂದಿದೆ. ಜನರಿಗೆ ತಲುಪಿಸಲು, ಸ್ವಚ್ಛ ಭಾರತ ಯೋಜನೆ ಸಾಕಾರಗೊಳಿಸಿ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ. ಎಂ.ಅಂಬಿಕಾ, ತುಮ್ಮಿನಕಟ್ಟಿ ಗ್ರಾಪಂ ಪಿಡಿಒ.

Advertisement

Udayavani is now on Telegram. Click here to join our channel and stay updated with the latest news.

Next