Advertisement

ಮುನಗನಹಳ್ಳಿಗೆ ಮಕ್ಕಳ ಸ್ನೇಹಿ ಗ್ರಾಪಂ ರಾಷ್ಟ್ರ ಪ್ರಶಸ್ತಿ

01:40 PM Apr 02, 2021 | Team Udayavani |

ಚಿಂತಾಮಣಿ: ಮಕ್ಕಳ ಕಾಳಜಿ ಬಗ್ಗೆ ಆದ್ಯತೆ ನೀಡಿ, ಮಕ್ಕಳ ಸಮಸ್ಯೆ ಬಗೆಹರಿಸುವುದು. ಮಕ್ಕಳ ಗ್ರಾಮ ಸಭೆ ನಡೆಸುವುದು. ಶಾಲೆಯಿಂದ ಹೊರ ಉಳಿದ ಮಕ್ಕಳನ್ನು ಶಾಲೆಗೆಸೇರಿಸುವುದು. ಅಂಗನವಾಡಿ ಕೇಂದ್ರಗಳಿಗೆ ಹಾಗೂ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು.ಆಟದ ಮೈದಾನ ನಿರ್ಮಾಣ ಸೇರಿದಂತೆ ಮಕ್ಕಳಸರ್ವಾಂಗೀಣ ಅಭಿ ವೃದ್ಧಿಗೆ ಶ್ರಮಿಸಿದ ಗ್ರಾಪಂಗಳಿಗೆ ಭಾರತಸರ್ಕಾರ ನೀಡುವ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಪ್ರಶಸ್ತಿತಾಲೂಕಿನ ಮುನಗನಹಳ್ಳಿ ಗ್ರಾಪಂಗೆ ಲಭಿಸಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

Advertisement

ರಾಜ್ಯಕ್ಕೆ ಏಕೈಕ ಗ್ರಾಪಂ: ಭಾರತ ಸರ್ಕಾರ ನೀಡುವ ಮಕ್ಕಳ ಸ್ನೇಹಿ ಗ್ರಾಪಂ ಪುರಸ್ಕಾರ ಪ್ರಶಸ್ತಿಗೆ ರಾಜ್ಯದಿಂದ ಆರ್ಜಿ ಸಲ್ಲಿಸಿದ್ದ ಹಲವು ಗ್ರಾಪಂಗಳ ಪೈಕಿ ತಾಲೂಕಿನ ಮುನಗನಹಳ್ಳಿ ಗ್ರಾಪಂಗೆಪ್ರಶಸ್ತಿ ದೊರೆತಿರುವುದು ಮುನಗನಹಳ್ಳಿ ಗ್ರಾಪಂ ರಾಜ್ಯಕ್ಕೆ ಮಾದರಿಯಾಗಿದೆ.

ಶ್ರಮಕ್ಕೆ ತಕ್ಕ ಪ್ರತಿಫ‌ಲ: ಗ್ರಾಪಂ ವ್ಯಾಪ್ತಿಯಲ್ಲಿ ಹತ್ತು ಹಳ್ಳಿಗಳಿದ್ದು, 8 ಕಿರಿಯ ಪ್ರಾಥಮಿಕ ಪಾಠ ಶಾಲೆಗಳು, ನಾಲ್ಕುಹಿರಿಯ ಪ್ರಾಥಮಿಕ ಪಾಠ ಶಾಲೆಗಳಲ್ಲಿ 327ವಿದ್ಯಾರ್ಥಿಗಳಿದ್ದು, ಯಾವ ಗ್ರಾಮದಲ್ಲೂ ಮಕ್ಕಳುಶಾಲೆಯಿಂದ ಹೊರಗೆ ಉಳಿಯದಂತೆ ಎಲ್ಲಾ ಆರ್ಹ ಮಕ್ಕಳನ್ನುಶಾಲೆಗೆ ಸೇರಿಸುವುದು. ಮಕ್ಕಳೇ ಶಾಲೆಗೆ ಸೇರುವಂತೆ ಆಕರ್ಷಿಸುವುದು. ಶಾಲೆ ಕಟ್ಟಡಗಳಿಗೆ ಸುಣ್ಣ- ಬಣ್ಣ ಬಳಿದು ರಂಗು ನೀಡಿದಗ್ರಾಪಂ ಆಡ ಳಿತ, ಗ್ರಾಪಂನ ಎಲ್ಲಾಗ್ರಾಮಗಳ ಶಾಲೆಗಳಲ್ಲಿ ಶೇ. 100ರಷ್ಟುಮಕ್ಕಳನ್ನು ಶಾಲೆಗೆ ಕಳುಹಿಸುವ ಜೊತೆಗೆ ಅವರಿಗೆ ಮೂಲ ಸೌಲಭ್ಯವನ್ನುಕಲ್ಪಿಸಿದೆ. ಅಲ್ಲದೆ, ಶೇ.100ರಷ್ಟುಹಾಜರಾತಿ ಕಾಪಾಡಿಕೊಳ್ಳಲು ಗ್ರಾಪಂ ಆಡಳಿತ ಸಕ್ರಿಯವಾಗಿಕಾರ್ಯನಿರ್ವಹಿಸಿದ ಪರಿ ಣಾಮ,ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಲು ಕಾರಣ ಎಂದು ಗ್ರಾಪಂ ಆಡಳಿತ ವರ್ಗ, ಆಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ನರೇಗಾ ಯೋಜನೆ ಬಳಕೆ: ಮುನಗನಹಳ್ಳಿ ಗ್ರಾಪಂ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟ ಗ್ರಾಪಂ ಆಡಳಿತ ಮಂಡಳಿ,ಕಳೆದ ಕೆಲ ವರ್ಷಗಳಿಂದ ಗ್ರಾಪಂ ವ್ಯಾಪ್ತಿ ಎಲ್ಲಾ ಶಾಲಾಕಟ್ಟಡಗಳಿಗೆ ಸುಣ್ಣ- ಬಣ್ಣ ಬಳಿದು, ನರೇಗಾ ಯೋಜನೆಯಡಿಆಟದ ಮೈದಾನ, ಉದ್ಯಾನವನ ನಿರ್ಮಾಣ ಮಾಡಿದೆ. ಅದರಜೊತೆಗೆ ಗ್ರಾಪಂ ವ್ಯಾಪ್ತಿ ಹತ್ತು ಗ್ರಾಮಗಳಲ್ಲಿ 287 ಮಕ್ಕಳಿಗೆ 10ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡಿ, ಅವುಗಳನ್ನುಮಾದರಿ ಕೇಂದ್ರಗಳನ್ನಾಗಿಸಿದೆ. ಶಾಲೆ ಗಳಿಗೆ ಕಾಂಪೌಂಡ್‌, ಶೌಚಾಲಯಗಳನ್ನು ನಿರ್ಮಾಣ ಮಾಡಿದ ಗ್ರಾಪಂ ಆಡಳಿತ,ಮಕ್ಕಳ ಆರೋಗ್ಯದತ್ತ ಕಾಳಜಿವಹಿಸಿ, ಶೇ.100ರಷ್ಟು ಮಕ್ಕಳಿಗೆ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾಗಿದೆ.

ದಾನಿಗಳ ನೆರವು: ಗ್ರಾಪಂ ವ್ಯಾಪ್ತಿಯ ಎಲ್ಲಾ ಶಾಲೆ ಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ದಾನಿಗಳ ಮೂಲಕಶುದ್ಧಕುಡಿಯುವ ನೀರಿನ ಘಟಕಗಳು, ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ಬೇಕಾದ ಪೀಠೊ ಪಕರಣಗಳು ಸೇರಿದಂತೆಮೂಲ ಸೌಕರ್ಯಗಳನ್ನು ಕಲ್ಪಿಸಿದೆ. ಮುನಗನಹಳ್ಳಿ ಗ್ರಾಪಂಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗ ಮಕ್ಕಳ ಬಗ್ಗೆಕಾಳಜಿವಹಿಸಿದೆ. ಇದರಿಂದ ಮುನಗನಹಳ್ಳಿಗೆ ಮಕ್ಕಳ ಸ್ನೇಹಿ ಗ್ರಾಪಂ ರಾಷ್ಟ್ರಿಯ ಪ್ರಶಸ್ತಿ ಲಭಿಸಿದೆ.

Advertisement

ಈಗ ರಾಷ್ಟ್ರಿಯ ಮಕ್ಕಳಸ್ನೇಹಿ ಪ್ರಶಸ್ತಿ ಲಭಿಸಿರುವುದು ನಮ್ಮ ಕಾರ್ಯಕ್ಕ ಪ್ರೋತ್ಸಾಹನೀಡಿದಂತಾಗಿದೆ. ಆದ್ದರಿಂದ ಇದೇ ರೀತಿ ದುಡಿದುಗ್ರಾಮಗಳ ಅಭಿವೃದ್ಧಿಪಡಿಸಿ, ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲು ಶ್ರಮಿಸುತ್ತೇವೆ. -ಕವಿತಾ, ಪಿಡಿಒ, ಮುನುಗನಹಳ್ಳಿ

ಗ್ರಾಪಂ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ನರೇಗಾ ಯೋಜನೆಯಡಿ ಒಂದು ವರ್ಷಕ್ಕೆ ಒಂದುವರೆ ಕೋಟಿ ರೂ. ಅನುದಾನ ವೆಚ್ಚ ಮಾಡಿ

ಕಾಂಪೌಂಡ್‌, ಶಾಲಾ ಆವರಣದಲ್ಲಿ ಉದ್ಯಾನ ವನ, ಮಳೆ ನೀರು ಕೋಯ್ಲು, ಆಟದ ಮೈದಾನಗಳ ಅಭಿವೃದ್ಧಿ, ಶಾಲೆಗಳಿಗೆ ಅಡುಗೆ ಕೊಠಡಿ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಹಲವು ಕಾರ್ಯಗಳನ್ನು ಕೈಗೊಂಡಿದ್ದೇವು. ●ಎಸ್‌.ವಿ.ಸುಮಾ, ಮಾಜಿ ಅಧ್ಯಕ್ಷೆ, ಮುನುಗನಹಳ್ಳಿ ಗ್ರಾಪಂ

ಮುನುಗನಹಳ್ಳಿ ಗ್ರಾಪಂಗೆ ರಾಷ್ಟ್ರಿಯ ಮಕ್ಕಳ ಸ್ನೇಹಿ ಪ್ರಶಸ್ತಿ ಬಂದಿರುವುದುಸಂತಸದ ವಿಚಾರ. ಇದ ರಂತೆ ತಾಲೂಕಿನಎಲ್ಲಾ ಗ್ರಾಪಂ ಗಳು ಒಂದಲ್ಲಾ ಒಂದುರೀತಿಯಲ್ಲಿ ಸಾಧನೆ ಮಾಡಿ ರಾಜ್ಯ,ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯಬೇಕು. ಮುನುಗನಹಳ್ಳಿ ಆಡಳಿತ ವರ್ಗ ಮತ್ತು ಅಧಿಕಾರ ವರ್ಗಕ್ಕೆ ಅಭಿನಂದನೆ. ●ಮಂಜುನಾಥ್‌, ತಾಪಂ ಇಒ, ಚಿಂತಾಮಣಿ

 

-ಶ್ರೀನಿವಾಸ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next