ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆ ದೇಶದಲ್ಲಿ 3ನೇ ಸ್ಥಾನ ಗಳಿಸಿದ್ದು ಜಲಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಹಿಮ್ಸ್‌ಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ.
ಲಕ್ಷ ರೂ.ನಗದು ಬಹುಮಾನ: ಕೇಂದ್ರದ ಜಲಶಕ್ತಿ ಸಚಿವಾಲಯದ ವತಿಯಿಂದ ಕಳೆದ ನ.11 ಮತ್ತು 12 ರಂದು 2019ನೇ ಸಾಲಿನ 2ನೇ ನ್ಯಾಷನಲ್ ವಾಟರ್ ಅವಾರ್ಡ್‌ನ ಪ್ರಶಸ್ತಿ ಪ್ರದಾನ ಸಮಾರಂಭ ವರ್ಚುವಲ್‌ವೇದಿಕೆಯಲ್ಲಿ ನಡೆಯಿತು. ಈ ಪ್ರಶಸ್ತಿ ಸಮಾರಂಭದಲ್ಲಿ ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದ ನೀರಿನ ಸಂರಕ್ಷಣೆ ಹಾಗೂ
ಉತ್ತಮ ನಿರ್ವಹಣೆಗಾಗಿ ಒಟ್ಟು 16 ವಿವಿಧ ವಿಭಾಗಗಳಾದ ಅತ್ಯುತ್ತಮ ರಾಜ್ಯ, ಜಿಲ್ಲೆ, ನಗರಸಭೆ, ಕಾರ್ಖಾನೆ, ಶಾಲೆ, ದಿನಪತ್ರಿಕೆ, ಸಂಸ್ಥೆ, ನಿವಾಸಿ ಕಲ್ಯಾಣ ಸಂಘಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಇನ್ನಿತರವಿಭಾಗಗಳಿಗೆ ಪ್ರಶಸ್ತಿಗಳನ್ನು ಘೋಷಣೆಮಾಡಲಾಯಿತು. ಅವುಗಳಲ್ಲಿ ಅತ್ಯುತ್ತಮ ಸಂಸ್ಥೆ, ನಿವಾಸಿ ಕಲ್ಯಾಣ ಸಂಘಗಳು,ಧಾರ್ಮಿಕ ಸಂಸ್ಥೆಗಳ ವಿಭಾಗದಲ್ಲಿ ಹಿಮ್ಸ್‌ಗೆ ಪ್ರಶಸ್ತಿ ಪತ್ರ, ಒಂದು ಲಕ್ಷ ರೂ. ನಗದು ಬಹುಮಾನ ಹಾಗೂ ಫಲಕವನ್ನು ನೀಡಲಾಗಿದೆ.
ವಿವಿಧ ಕಾರ್ಯಕ್ರಮ: ಸಾರ್ವಜನಿಕರಿಗೆ ನೀರಿನ ಮಹತ್ವದ ಅರಿವು ಮೂಡಿಸಲು ಜಾಥಾ ಹಾಗೂ ವಿವಿಧ ಹಳ್ಳಿಗಳಲ್ಲಿ ಸುಮಾರು1,000 ಕ್ಕೂ ಅಧಿಕ ಜನರಿಗೆ ಮುಂದೆ ನಾವೆಲ್ಲರೂ ನೀರಿನ ಅಭಾವದಿಂದ ಪಡಬೇಕಾಗಿರುವ ಸಂಕಷ್ಟದ ಕುರಿತಾದಹೋಮ್ ಇನ್ ಕನ್ವೀನಿಯೆಂಟ್ ಟ್ರೂಥ್ ಎಂಬ ಕಿರುಚಿತ್ರ ಪ್ರದರ್ಶನ, ವಿದ್ಯಾರ್ಥಿಗಳಿಗೆ ನೀರಿನ ಮಿತ ಬಳಕೆಯಲ್ಲಿ ನನ್ನ ಪಾತ್ರ ಎಂಬಕುರಿತಾದ ಪ್ರಬಂಧ ಸ್ಪರ್ಧೆ, ನೀರಿನ ಸಂರಕ್ಷಣೆಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಅವರು ತಿಳಿಸಿದ್ದಾರೆ.
ಹಿಮ್ಸ್ ಸಂಸ್ಥೆ ಆವರಣದಲ್ಲಿ ನೀರಿನ ಅಂತರ್ಜಲ ಮಟ್ಟ ಉತ್ತಮವಾಗಿದ್ದು ಹಾಗೂ ನೀರಿನ ಸಂರಕ್ಷಣೆಗೆ ಸಂಬಂಧಿಸಿದಕಾರ್ಯಕ್ರಮಗಳನ್ನು ಗುರುತಿಸಿ ಈ ಬಹುಮಾನವನ್ನು ಕೇಂದ್ರ ಸರ್ಕಾರ ನೀಡಿದೆ. ಪ್ರಶಸ್ತಿ ಸಮಾರಂಭದಲ್ಲಿಉಪರಾಷ್ಟ್ರಪತಿವೆಂಕಯ್ಯನಾಯ್ಡು, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖವತ್, ಕೇಂದ್ರ ಸಚಿವಾಲಯದಗಣ್ಯರು ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು.