Advertisement

ಮೆನ್ನಬೆಟ್ಟು ಗ್ರಾ.ಪಂ.ಗೆ ರಾಷ್ಟ್ರೀಯ ಪುರಸ್ಕಾರ

09:43 PM Oct 01, 2019 | mahesh |

ಕಿನ್ನಿಗೋಳಿ: ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ 2019ನೇ ಸಾಲಿನ ರಾಷ್ಟ್ರೀಯ ಪುರಸ್ಕಾರವಾದ ದೀನ ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರ ಗೌರವಕ್ಕೆ ಪಾತ್ರವಾಗಿದೆ.

Advertisement

2017-18ನೇ ಸಾಲಿನ ಸಾಧನೆಗಳನ್ನು ಗುರುತಿಸಿ ಭಾರತ ಸರಕಾರದ ಗ್ರಾಮೀಣಾ ಭಿವೃದ್ಧಿ ಇಲಾ ಖೆಯೂ ಈ ಪುರಸ್ಕಾರಕ್ಕೆ ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನ್ನು ಆಯ್ಕೆ ಮಾಡಿದೆ. ದ.ಕ. ಜಿಲ್ಲೆ ಯಲ್ಲಿಯೇ ಈ ಸಾಲಿನ ಪ್ರಶಸ್ತಿ ಪಡೆದ ಏಕೈಕ ಗ್ರಾ. ಪಂ.ಇದಾಗಿದೆ. ಸ್ವಚ್ಛತೆ, ಕುಡಿಯುವ ನೀರು, ಬೀದಿ-ದೀಪ ನಿರ್ವಹಣೆ ಮತ್ತು ಇತರ ಮೂಲ ಸೌಕರ್ಯಗಳನ್ನು ಪಂಚಾಯತ್‌ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಒದಗಿಸಿರುವುದಕ್ಕೆ ಈ ಗ್ರಾ.ಪಂ. ನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಪ.ಜಾತಿ/ ಪ. ಪಂಗಡ, ಹಿರಿಯ ನಾಗರಿಕರು ಮತ್ತು ಮಹಿಳೆಯರ ಸೇವೆಗಳನ್ನು ಸಕಾಲದಲ್ಲಿ ನಿಜ ಫಲಾನುಭವಿಗಳಿಗೆ ತಲುಪಿಸಿರುವುದನ್ನು ಮೌಲ್ಯಮಾಪನ ಸಮಿತಿ ಕಂಡುಕೊಂಡಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯತ್‌ ಪ್ರಕೃತಿ ವಿಕೋಪ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳು, ಸಂಪನ್ಮೂಲ ವೃದ್ಧಿಗಾಗಿ ಜಾರಿ ಮಾಡಿದ ನೂತನ ಆವಿಷ್ಕಾರಗಳು ಪುರಸ್ಕಾರ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ಒರಿಸ್ಸಾದಿಂದ ಆಗಮಿಸಿದ ರಾಷ್ಟ್ರೀಯ ಮೌಲ್ಯಮಾಪನ ತಂಡ ಎರಡು ದಿನ ಮೊಕ್ಕಾಂ ಇದ್ದು ಪಂಚಾಯತ್‌ ಆಡಳಿತವನ್ನು ವಿಶ್ಲೇಷಿಸಿತ್ತು. ಸಮಾಜದ ಸಹಭಾಗಿತ್ವದಲ್ಲಿ ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳನ್ನು ಅಭಿವೃದ್ಧಿ ಪಡಿಸಿರುವುದನ್ನು ಮೌಲ್ಯ ಮಾಪಕರು ಗುರುತಿಸಿದ್ದರು. ಜಿಲ್ಲೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಐದು ತಾ| 14 ಗ್ರಾ. ಪಂ.ಗಳನ್ನು ತಂಡ ಮೌಲ್ಯಮಾಪನ ನಡೆಸಿತ್ತು. ಅದರಲ್ಲಿ ಮೆನ್ನಬೆಟ್ಟುr ಗ್ರಾಮ ಪಂಚಾಯತ್‌ ಆಯ್ಕೆಯಾಯಿತು.

ದೀನ ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತೀಕರಣ ಪುರಸ್ಕಾರ 2010ರಿಂದ ಜಾರಿಯಲ್ಲಿದೆ.  ಪಂಚಾ ಯತ್‌ರಾಜ್‌ ಸಂಸ್ಥೆಗಳ ಉತ್ತಮ ಆಡಳಿತ ವನ್ನು ಪ್ರೋತ್ಸಾಹಿಸುವುದಕ್ಕಾಗಿ ಪುರಸ್ಕಾರ ನೀಡಲಾಗುತ್ತಿದೆ. ಪುರಸ್ಕಾರವು ನಗದು ಬಹುಮಾನವನ್ನು ಒಳಗೊಂಡಿದೆ.

ಸ್ವಚ್ಛತೆ ಆದ್ಯತೆ
ಕಸ ತ್ಯಾಜ್ಯ ನಿರ್ವವಹಣೆಗೆ ಚೆನ್ನಾಗಿ ನಡೆಯುತ್ತಿದೆ. ತೆರಿಗೆ ಸಂಗ್ರಹ ಶೇ. 85ರಿಂದ ಹೆಚ್ಚಿದೆ. ನೀರಿನ ಬಿಲ್‌ ಸಮರ್ಪಕವಾಗಿ ಸಂಗ್ರಹಿಸಲಾಗುತ್ತದೆ. ಪರಿಶಿಷ್ಟ ಜಾತಿ ಕಾಲನಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ 9 ಬಾವಿಗಳನ್ನು ಮಾಡಲಾಗಿದೆ, ಪ್ಲಾಸ್ಟಿಕ್‌ ಬ್ಯಾನರ್‌, ಬಂಟಿಂಗ್‌, ಫ್ಲೆಕ್ಸ್‌ಗಳಿಗೆ ಅವಕಾಶ ಇಲ್ಲ. ಗ್ರಾ.ಪಂ. ವ್ಯಾಪ್ತಿ ಯಲ್ಲಿ ಸ್ವತ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
– ಸರೋಜಿನಿ ಗುಜರನ್‌, ಅಧ್ಯಕ್ಷರು, ಮೆನ್ನಬೆಟ್ಟು ಗ್ರಾ. ಪಂ.

Advertisement

ಸಹಕಾರದಿಂದ ಉತ್ತಮ ಕಾರ್ಯ
ಸಾರ್ವಜನಿಕರಿಗೆ ಉತ್ತಮ ಕೆಲಸ ಮಾಡಿ ಕೊಡುವ ಸಿಬಂದಿ ಇದ್ದಾರೆ. ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಬೆಂಬ ಲಿಸುವ ಜನತೆ ಇದ್ದಾರೆ. ಈ ನಿಟ್ಟಿನಲ್ಲಿ ಮೆನ್ನಬೆಟ್ಟು ಗ್ರಾ.ಪಂ. ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದು ಸಾಧ್ಯ ಆಗುತ್ತಿದೆ.
 - ಡಾ| ರಮ್ಯಾ ಕೆ.ಎಸ್‌. , ಗ್ರಾ.ಪಂ. ಅಭಿವೃದ್ದಿ ಅಧಿಕಾರಿ

ಇ-ಆಡಳಿತ ಜಾರಿ
ಮತದಾರರ ಪಾಲ್ಗೊಳ್ಳುವಿಕೆ, ಪಂಚಾಯತ್‌ ಕೈಗೆತ್ತಿಕೊಂಡ ಭಿನ್ನ ಕಾರ್ಯಕ್ರಮಗಳು ಮತ್ತು ಪರಿಣಾಮಕಾರಿ ಇ-ಆಡಳಿತವನ್ನು ಮೌಲ್ಯಮಾಪ ನಕ್ಕಾಗಿ ಆಗಮಿಸಿದ ರಾಜ್ಯದ ಮತ್ತು ಒರಿಸ್ಸಾದ ರಾಷ್ಟ್ರೀಯ ಪರಿಣಿತರ ತಂಡ ಮನಗಂಡಿದೆ. ದಾಖಲೆಗಳನ್ನು ನಿರ್ವಹಿಸುವಲ್ಲಿ ಮೆನ್ನಬೆಟ್ಟು ಗ್ರಾ.ಪಂ. ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕದ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಗಮನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next