Advertisement

ಚಿತ್ರಪ್ರದರ್ಶನಕ್ಕಿಂತ ಮೊದಲು ರಾಷ್ಟ್ರಗೀತೆ ಕಡ್ಡಾಯವಲ್ಲ; ಸುಪ್ರೀಂ

01:53 PM Jan 09, 2018 | Team Udayavani |

ನವದೆಹಲಿ: ಚಿತ್ರಮಂದಿರಗಳಲ್ಲಿ ಪ್ರತಿ ಸಿನಿಮಾ ಪ್ರದರ್ಶನದ ಆರಂಭಕ್ಕೂ ಮೊದಲು ರಾಷ್ಟ್ರಗೀತೆ ಕಡ್ಡಾಯ ಎಂದು ಈ ಹಿಂದೆ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಮಂಗಳವಾರ ಪರಿಷ್ಕರಿಸಿದ್ದು, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಹೇಳಿದೆ.

Advertisement

ಚಿತ್ರಪ್ರದರ್ಶನಕ್ಕಿಂತ ಮೊದಲು ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತಾನು ಈ ಹಿಂದೆ ನೀಡಿರುವ ಆದೇಶದ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ನಿಯಮಾವಳಿ ರೂಪಿಸುವಂತೆ ಸೂಚಿಸಿದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ 2016ರ ನವೆಂಬರ್ ನಲ್ಲಿ ಆದೇಶ ನೀಡಿತ್ತು. ಅನಂತರದಲ್ಲಿ ಕೇಂದ್ರ ಸರಕಾರ ಕೂಡ ಸುಪ್ರೀಂ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿ, ವೈವಿಧ್ಯತೆಯುಳ್ಳ ಭಾರತದಂಥ ದೇಶದಲ್ಲಿ ರಾಷ್ಟ್ರಗೀತೆ ಜನರನ್ನು ಒಂದುಗೂಡಿಸುತ್ತದೆ ಎಂದಿತ್ತು. 

ಏತನ್ಮಧ್ಯೆ ಸಿನಿಮಾ ಹಾಲ್ ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಎಂಬ ಆದೇಶವನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಮನವಿ ಮಾಡಿತ್ತು.

ಕೇಂದ್ರಕ್ಕೆ ತರಾಟೆ: ಕಳೆದ ಅ. 23ರಂದು ಈ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ದೇಶಭಕ್ತಿ ವಿಚಾರದಲ್ಲಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರತಿಯೊಬ್ಬರು ತಮ್ಮ ಭುಜದ ಮೇಲೆ ದೇಶಭಕ್ತಿಯ ಸಂಕೇತವನ್ನು ಹೊಂದಿರಬೇಕು. ಈ ಮೂಲಕ ದೇಶಭಕ್ತಿ ಪ್ರದರ್ಶಿಸಬೇಕು ಎಂದು ಹೇಳುವುದು ಸರಿಯಲ್ಲ. ಅಲ್ಲದೆ ಈ ವಿಚಾರದಲ್ಲಿ ಜನರ ದೇಶಭಕ್ತಿ ಪರೀಕ್ಷಿಸುವುದೂ ಸರಿಯಲ್ಲ. ಇಂಥ ನಿರ್ಧಾರಗಳು ಕೋರ್ಟ್‌ ಕಡೆಯಿಂದಲೇ ಬರಬೇಕು ಎಂದು ಏಕೆ ಬಯಸುತ್ತೀರಿ ಎಂದು ಹೇಳುವ ಮೂಲಕ ಹಿಂದಿನ ಆದೇಶ ವಾಪಸ್‌ ತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿತ್ತು. ಆಗ ಕೇಂದ್ರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್‌ ಸಿನೆಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವುದು ಸರಿ ಎಂದೇ ವಾದ ಮಾಡಿ, ಇದು ಏಕತೆ ಸಾರುತ್ತದೆ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next