ತಾವರಗೇರಾ: ಪಟ್ಟಣದ ವಸತಿ ರಹಿತ ಕುಟುಂಬದ ನಿವಾಸಿ ಶಕುಂತಲಾ ನಾಲ್ತವಾಡ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿಗುಣಮಟ್ಟದ ಮನೆ ನಿರ್ಮಿಸಿಕೊಂಡ ಹಿನ್ನೆಲೆಯಲ್ಲಿರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಜಿಲ್ಲಾ ಧಿಕಾರಿ ವಿಕಾಸ್‌ಕಿಶೋರ್ ಸುರಳ್ಕರ್ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ, ಅಭಿನಂದಿಸಿದರು.
ಪಟ್ಟಣದ ಶಕುಂತಲಾ ಮಲ್ಲಪ್ಪ ನಾಲ್ತವಾಡಕುಟುಂಬ 2016 ಮತ್ತು 2017ನೇ ಸಾಲಿನಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ
ಗುಣಮಟ್ಟದ ಮನೆ ನಿರ್ಮಾಣ ಮಾಡಿಕೊಂಡಿದ್ದು,ಇವರಿಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಸಚಿವಾಲಯ ನೀಡುವ ವಾರ್ಷಿಕ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಪುರಸ್ಕಾರಕ್ಕೆ ರಾಜ್ಯದ 3 ಕುಟುಂಬಗಳು ಆಯ್ಕೆಯಾಗಿದ್ದು, ಅದರಲ್ಲಿ ಪಟ್ಟಣದ ಶಕುಂತಲಾ ನಾಲ್ತವಾಡ ಅವರು ಕುಟುಂಬ ಕೂಡ ಒಂದು.
ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫೆರೆನ್ಸ್ ನಡೆಸಿದ ನಂತರ ಕೊಪ್ಪಳ ಜಿಲ್ಲಾಧಿಕಾರಿಗಳಿಂದ ನಾಲ್ತವಾಡ ಕುಟುಂಬಕ್ಕೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಸರ್ಕಾರದ ಯೋಜನೆ ಲಾಭ ಪಡೆದು ಗುಣಮಟ್ಟದ ಮನೆ ನಿರ್ಮಿಸಿಕೊಂಡಿದ್ದಾರೆ. ಸದ್ಯ ಮನೆಯಲ್ಲಿ ಈಕುಟುಂಬ ವಾಸವಿದ್ದು, ಸರ್ಕಾರದ ಸಹಾಯಧನದ ಜೊತೆಗೆ ಸ್ವಂತ ಹಣ ಖರ್ಚು ಮಾಡಿದ್ದಾರೆ.
ನೂತನ ನಿವಾಸ ನಿರ್ಮಾಣಕ್ಕೆ ಮತ್ತು ಈ ಪ್ರಶಸ್ತಿ ಲಭಿಸಲು ಪಟ್ಟಣ ಪಂಚಾಯತ್ ಅಧಿ ಕಾರಿಗಳು, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ. ಜನರು ಸರ್ಕಾರದ ಯೋಜನೆ ಲಾಭಪಡೆದುಕೊಳ್ಳಬೇಕು. ನಮ್ಮ ಕುಟುಂಬದಿಂದ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತಿದ್ದೇವೆ ಎನ್ನುತಾರೆ ಶಕುಂತಲಾ ಮಲ್ಲಪ್ಪ ನಾಲ್ತವಾಡ. ಈ ಬಗ್ಗೆ ಪಪಂ ನೂತನ ಅಧ್ಯಕ್ಷರಾದ ವಿಕ್ರಮ್ ರಾಯ್ಕರ್ ಮಾತನಾಡಿ, ನಮ್ಮ ಪಪಂ ಮತ್ತುತಾವರಗೇರಾ ಪಟ್ಟಣವನ್ನು ದೇಶಕ್ಕೆ ಪರಿಚಯಿಸಿ ಕುಟುಂಬಕ್ಕೆ ರಾಷ್ಟ್ರೀಯ ಪುರಸ್ಕಾರ ಸಿಕ್ಕಿರುವುದು ಸಂತೋಷವಾಗಿದೆ. ಇವರಂತೆ ಬಡ ಕುಟುಂಬಗಳು ಸರ್ಕಾರದ ಯೋಜನೆ ಲಾಭ ಪಡೆಯಬೇಕುಎಂದು ಅಭಿಪ್ರಾಯಿಸಿದರು.
ಪ್ರಶಸ್ತಿ ವಿತರಣೆ ವೇಳೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ತಾವರಗೇರಾ ಪಪಂ ಮುಖ್ಯಾಧಿಕಾರಿ ಶಂಕರ ಕಾಳೆ, ಜಿಲ್ಲಾ ನಗರಾಭಿವೃದ್ಧಿ ತಜ್ಞರು, ಪಪಂ ಆರೋಗ್ಯ ಅಧಕಾರಿ ಪ್ರಾಣೇಶ, ಶ್ಯಾಮೂರ್ತಿ ಕಟ್ಟಿಮನಿ ಮತ್ತು ಕುಟುಂಬ ಸದಸ್ಯರು ಇದ್ದರು.
ಸರ್ಕಾರದ ಯೋಜನೆಯ ಲಾಭ ಪಡೆದು, ದೇಶದಲ್ಲೇ ಉತ್ತಮ ಮನೆನಿರ್ಮಾಣ ವರ್ಗದ ರಾಷ್ಟ್ರೀಯ ಪುರಸ್ಕಾರಕ್ಕೆನಾಲ್ತವಾಡ ಕುಟುಂಬ ಆಯ್ಕೆಯಾಗಿದ್ದು, ಸಮಾಜಕ್ಕೆ ಮಾದರಿಯಾಗಿದೆ.
–ಶಂಕರ ಕಾಳೆ, ಪಪಂ ಮುಖ್ಯಾಧಿಕಾರಿ
ಸ್ಥಳೀಯ ಪಪಂ ಆಡಳಿತ ಮತ್ತುಸರ್ಕಾರದ ಅನುದಾನದೊಂದಿಗೆಮನೆ ನಿರ್ಮಿಸಿಕೊಂಡಿದ್ದೇವೆ. ಅಧಿಕಾರಿಗಳು,ನಮ್ಮ ಸಂಬಂಧಿಕರು, ಸ್ನೇಹಿತರು ಸಹಕಾರ ನೀಡಿದ್ದಾರೆ.
–ಶಕುಂತಲಾ, ಯೋಜನೆಯ ಫಲಾನುಭವಿ