Advertisement

ನ್ಯಾಷನಲ್‌ ಗ್ರಿಡ್‌ಗೆ ಪ್ಯಾನ್‌, ತೆರಿಗೆದಾರರ ಮಾಹಿತಿ ಲಿಂಕ್‌

11:30 PM Jun 22, 2017 | Team Udayavani |

ನವದೆಹಲಿ: ಯುಪಿಎ 2ರ ಅವಧಿಯ, ಅಂದಿನ ಗೃಹ ಸಚಿವ ಪಿ.ಚಿದಂಬರಂ ಅವರ ಕನಸಿನ ನ್ಯಾಷನಲ್‌ ಇಂಟಲಿಜೆನ್ಸ್‌ ಗ್ರಿಡ್‌ ಅನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಗೃಹ ಇಲಾಖೆ ನಿರ್ಧರಿಸಿದೆ. 

Advertisement

ಇದರಲ್ಲಿ ಪ್ಯಾನ್‌ ನಂಬರ್‌ ಮತ್ತು ಆದಾಯ ತೆರಿಗೆದಾರರ ಎಲ್ಲಾ ವಿವರಗಳನ್ನು ಜೋಡಣೆ ಮಾಡಲು ತೀರ್ಮಾನಿಸಿದೆ. ಈಗಾಗಲೇ ಆದಾಯ ತೆರಿಗೆ ಇಲಾಖೆ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಸದ್ಯದಲ್ಲೇ ಈ ಎಲ್ಲಾ ಮಾಹಿತಿ ಈ ಗ್ರಿಡ್‌ಗೆ ದೊರೆಯಲಿದೆ.
 
ತೆರಿಗೆದಾರರ ಹೆಸರು, ವೈಯಕ್ತಿಕ ಮಾಹಿತಿ, ತಂದೆ ಹೆಸರು, ಲಿಂಗ, ಹುಟ್ಟಿದ ದಿನಾಂಕ, ಭಾವಚಿತ್ರ ಮತ್ತು ಹೆಬ್ಬೆರಳಿನ ಅಚ್ಚನ್ನು ನ್ಯಾಷನಲ್‌ ಇಂಟಲಿಜೆನ್ಸ್‌ ಗ್ರಿಡ್‌ಗೆ ನೀಡಲಾಗುತ್ತದೆ. ಸದ್ಯದ ಮಾಹಿತಿಯ ಪ್ರಕಾರ ದೇಶದಲ್ಲಿ 25 ಕೋಟಿ ಪ್ಯಾನ್‌ ಹೊಂದಿದವರು ಇದ್ದಾರೆ. ಇವರಲ್ಲಿ ಐದು ಕೋಟಿ ಮಂದಿ ಮಾತ್ರ ಆದಾಯ ತೆರಿಗ ಪಾವತಿಸುತ್ತಿದ್ದಾರೆ. 
ನ್ಯಾಷನಲ್‌ ಗ್ರಿಡ್‌ ಇನ್ನೂ ಆರಂಭಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇಂಥ ಹಲವಾರು ವಿಭಾಗಗಳನ್ನು ಸೇರಿಸಲಾಗುತ್ತದೆ. 

ಈ ಮಾಹಿತಿಗಳನ್ನು ಕೇಂದ್ರದಲ್ಲಿರುವ ಎಲ್ಲಾ ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ 10 ತನಿಖಾ ಸಂಸ್ಥೆಗಳು ಮತ್ತು 21 ಸೇವಾ ಸಂಸ್ಥೆಗಳನ್ನು ಜೋಡಣೆ ಮಾಡಲಾಗುತ್ತದೆ. ಉಳಿದ 1950 ಸಂಸ್ಥೆಗಳನ್ನು ನಂತರದ ದಿನಗಳಲ್ಲಿ ಜೋಡಣೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next