Advertisement

ಯು/ಎ ಸರ್ಟಿಫಿಕೇಟ್‌ ಪಡೆದ “ನಟಸಾರ್ವಭೌಮ’

11:12 AM Jan 19, 2019 | |

ಪವರ್​ಸ್ಟಾರ್​ ಪುನೀತ್‍ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ನಟಸಾರ್ವಭೌಮ’ ಸಿನಿಮಾದ ಪೋಸ್ಟರ್, ಟೀಸರ್​ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ ಅಪ್ಪು ಅಭಿನಯದ “ಅಂಜನಿಪುತ್ರ’ ಸಿನಿಮಾದ ನಂತರ ಈ ಚಿತ್ರ ತೆರೆ ಕಾಣುತ್ತಿದ್ದು, ಇದೀಗ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಸರ್ಟಿಫಿಕೇಟ್‌ ನೀಡಿದೆ.

Advertisement

ಹೌದು, ಯಾವುದೇ ಕಟ್ಸ್‌ ಹಾಗೂ ಮ್ಯುೂಟ್ಸ್‌ ಇಲ್ಲದೆ ಸೆನ್ಸಾರ್ ಮಂಡಳಿ “ನಟಸಾರ್ವಭೌಮ’ನಿಗೆ ಯು/ಎ ಸರ್ಟಿಫಿಕೇಟ್‌ ಕೊಟ್ಟಿದೆ. ಇನ್ನು ಅಪ್ಪು ಮೊದಲ ಬಾರಿಗೆ ಫೋಟೋ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್ ನಿರ್ಮಾಣದ ಈ ಸಿನಿಮಾವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಿದ್ದಾರೆ.

ಪುನೀತ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್​ ಹಾಗೂ ಮಲಯಾಳಂ ಚೆಲುವೆ ಅನುಪಮ ಪರಮೇಶ್ವರನ್​​​​ ನಟಿಸಿದ್ದಾರೆ. ಇಮಾನ್‌ ಡಿ ಸಂಗೀತ ಹಾಗೂ ವೈದಿ ಛಾಯಾಗ್ರಹಣ ಚಿತ್ರಕ್ಕಿದ್ದು, ಫೆಬ್ರವರಿ 7 ರಂದು ಚಿತ್ರ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next