Advertisement

ಸೋತು ಸುಣ್ಣವಾಗಿರುವ ಅಫ್ಘಾನ್ ಗೆ ಮತ್ತೊಂದು ಅಘಾತ

12:00 PM Jun 10, 2019 | keerthan |

ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಈಗಾಗಲೇ ಆಡಿದ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿರುವ ಅಫ್ಘಾನಿಸ್ಥಾನ ತಂಡಕ್ಕೆ ಮತ್ತೊಂದು ಅಘಾತ ಎದುರಾಗಿದೆ. ತಂಡದ ಸ್ಟಾರ್ ಬೌಲರ್ ರಶೀದ್ ಖಾನ್ ಗಾಯಗೊಂಡಿದ್ದಾರೆ. ಇದು ಅಫ್ಘಾನ್ ಪಾಳಯದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಶನಿವಾರ ಕಿವೀಸ್ ವಿರುದ್ಧ ನಡೆದ ಪಂದ್ಯದಲ್ಲಿ ರಶೀದ್ ಖಾನ್ ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಪಂದ್ಯದ 34ನೇ ಓವರ್ ವೇಳೆ ಈ ಘಟನೆ ನಡೆದಿದೆ. ರಶೀದ್ ಖಾನ್ ಬ್ಯಾಟಿಂಗ್ ಮಾಡುತ್ತಿದ್ದರು. ಕಿವೀಸ್ ಬೌಲರ್ ಲ್ಯೂಕಿ ಫರ್ಗುಸನ್ ಬಾಲ್ ಹಾಕುತ್ತಿದ್ದರು. ಫರ್ಗುಸನ್ ಎಸೆದ ಬೌನ್ಸರ್ ಬಾಲ್ ಸರಿಯಾಗಿ ಗುರುತಿಸದ ರಶೀದ್ ಖಾನ್ ಹೆಲ್ಮೆಟ್ ಗೆ ಬಾಲ್ ಬಡಿಯಿತು. ಕೂಡಲೇ ತಂಡದ ಫಿಸಿಯೋ ಮೈದಾನಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರು.

ಆದರೆ ಅಫ್ಘಾನ್ ಫೀಲ್ಡಿಂಗ್ ವೇಳೆ ರಶೀದ್ ಖಾನ್ ಮೈದಾನಕ್ಕಿಳಿಯಲಿಲ್ಲ. ಪಂದ್ಯದ ನಂತರ ಮಾತನಾಡಿದ ಅಫ್ಘಾನ್ ನಾಯಕ ಗುಲ್ಬದಿನ್ ನೈಬ್, ರಶೀದ್ ಗುಣಮುಖರಾಗಿದ್ದಾರೆ ಎಂದು ಅಫ್ಘಾನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದರು.

ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next