Advertisement
ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಹಾಗೂ ವಿಜಯ್ ಶೆಟ್ಟಿ ನೇತೃತ್ವದಲ್ಲಿ ನಡೆದ ಈ ವಿಹಾರಕೂಟದಲ್ಲಿ 2 ಬಸ್ಸುಗಳ ಮೂಲಕ 100ಕ್ಕೂ ಮಿಕ್ಕಿ ಸಮಾಜ ಬಾಂಧವರು ಉತ್ಸಾಹದಿಂದ ಭಾಗವಹಿಸಿದರು. ಬೆಳಗ್ಗೆ 8 ರಿಂದ ನಾಸಿಕ್‌ನಿಂದ ಹೊರಟು ದಿಂಡೋರಿ ತಾಲೂಕಿನ ಹೊಟೇಲ್ ರಾಜ್‌ಘಡದಲ್ಲಿ ಉಪಾಹಾರ ಮುಗಿಸಿ 11ರ ಹೊತ್ತಿಗೆ ವಿಹಾರಕೂಟದ ಸ್ಥಳಕ್ಕೆ ತಲುಪಿದರು.
ಕೂಟವನ್ನು ಆಯೋಜಿಸಲು ಹಾಗೂ ಸಂಘದ ಸದಸ್ಯರೆಲ್ಲರನ್ನೂ ಒಗ್ಗೊಡಿಸಿ ವಿಹಾರಕೂಟವನ್ನು ಯಶಸ್ವಿಗೊಳಿಸಲು ಸಂಘದ ಉಪಾಧ್ಯಕ್ಷ ಶಶಿಕಾಂತ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಸದಸ್ಯರುಗಳಾದ ರತ್ನಾಕರ ಶೆಟ್ಟಿ, ರಾಮಚಂದ್ರ ಶೆಟ್ಟಿ, ರವೀಂದ್ರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಹರಿಣಿ ಆಳ್ವ, ಉದಯ… ಶೆಟ್ಟಿ, ಅಶಿತ್ ಶೆಟ್ಟಿ, ಗಣೇಶ್ ಶೆಟ್ಟಿ ಸಹಕರಿಸಿದರು.
Related Articles
Advertisement
ನಾಸಿಕ್ ಬಂಟರ ಸಂಘದ ವಾರ್ಷಿಕ ವಿಹಾರಕೂಟ
ನಾಸಿಕ್: ನಾಸಿಕ್ ಬಂಟರ ಸಂಘದ ವತಿಯಿಂದ ಸಮಾಜ ಬಾಂಧವರಿಗಾಗಿ ವಾರ್ಷಿಕ ವಿಹಾರಕೂಟವು ನ 5ರಂದು ಕಲ್ವನ್ ತಾಲೂಕಿನ ಅತ್ಯಂತ ಆಕರ್ಷಣೀಯ ಅರ್ಜುನ್ ಆಣೆಕಟ್ಟು ಪರಿಸರದಲ್ಲಿ ಆಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಹಾಗೂ ವಿಜಯ್ ಶೆಟ್ಟಿ ನೇತೃತ್ವದಲ್ಲಿ ನಡೆದ ಈ ವಿಹಾರಕೂಟದಲ್ಲಿ 2 ಬಸ್ಸುಗಳ ಮೂಲಕ 100ಕ್ಕೂ ಮಿಕ್ಕಿ ಸಮಾಜ ಬಾಂಧವರು ಉತ್ಸಾಹದಿಂದ ಭಾಗವಹಿಸಿದರು. ಬೆಳಗ್ಗೆ 8 ರಿಂದ ನಾಸಿಕ್‌ನಿಂದ ಹೊರಟು ದಿಂಡೋರಿ ತಾಲೂಕಿನ ಹೊಟೇಲ್ ರಾಜ್‌ಘಡದಲ್ಲಿ ಉಪಾಹಾರ ಮುಗಿಸಿ 11ರ ಹೊತ್ತಿಗೆ ವಿಹಾರಕೂಟದ ಸ್ಥಳಕ್ಕೆ ತಲುಪಿದರು.
ಈ ಸಂದರ್ಭ ಸೇರಿದ್ದ ಸಮಾಜ ಬಾಂಧವರನ್ನುದ್ದೇಶಿಸಿ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಅವರು ಮಾತನಾಡಿ, ನಾಸಿಕ್ ಬಂಟರ ಸಂಘದಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಿದ್ದರೂ ಒಗ್ಗಟ್ಟಿನಲ್ಲಿ ಮಾದರಿಯಾಗಿದ್ದೇವೆ. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇಂದು ಭಾಗವಹಿಸಿರುವಂತೆಯೇ ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಘದ ಬಲವರ್ಧನೆಗೆ ಸಹಕಾರ ನೀಡಬೇಕು. ಇಂತಹ ಕಾರ್ಯಕ್ರಮಗಳಿಂದ ನಮ್ಮ ಯುವ ಪೀಳಿಗೆಗೆ ಹೆಚ್ಚಿನ ಉತ್ಸಾಹ ದೊರೆತು ಸಂಘದೊಂದಿಗೆ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದರು.
ಈ ಸಂದರ್ಭ ಮಕ್ಕಳು ಮಹಿಳೆಯರು, ಪುರುಷರೆಲ್ಲರಿಗೊ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಎಲ್ಲರೂ ಭಾಗವಹಿಸಿ ಸಂಭ್ರಮಿಸಿದರು. ವಿಹಾರಕೂಟವನ್ನು ಆಯೋಜಿಸಲು ಹಾಗೂ ಸಂಘದ ಸದಸ್ಯರೆಲ್ಲರನ್ನೂ ಒಗ್ಗೊಡಿಸಿ ವಿಹಾರಕೂಟವನ್ನು ಯಶಸ್ವಿಗೊಳಿಸಲು ಸಂಘದ ಉಪಾಧ್ಯಕ್ಷ ಶಶಿಕಾಂತ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಸದಸ್ಯರುಗಳಾದ ರತ್ನಾಕರ ಶೆಟ್ಟಿ, ರಾಮಚಂದ್ರ ಶೆಟ್ಟಿ, ರವೀಂದ್ರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಹರಿಣಿ ಆಳ್ವ, ಉದಯ… ಶೆಟ್ಟಿ, ಅಶಿತ್ ಶೆಟ್ಟಿ, ಗಣೇಶ್ ಶೆಟ್ಟಿ ಸಹಕರಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಲಿಂಗಪ್ಪ ಶೆಟ್ಟಿ ಮತ್ತು ರಾಜ್‌ಗೊàಪಾಲ… ಶೆಟ್ಟಿ ವಿಹಾರಕೂಟದಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನದ ಭೋಜನವನ್ನು ನಿತ್ಯಾನಂದ ಶೆಟ್ಟಿ ಚಂದ್ರಶೇಖರ ಶೆಟ್ಟಿ ದಂಪತಿಗಳು ಪ್ರಾಯೋಜಿಸಿದ್ದರು. ಸಂಘದ ಸದಸ್ಯರಾದ ಜಯಕರ ಶೆಟ್ಟಿ ಮತ್ತು ನಿತ್ಯಾನಂದ ಶೆಟ್ಟಿ ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನು ಮಾಡಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.