Advertisement
ವಾಹನಗಳಲ್ಲಿ ಹೆಚ್ಚುವರಿ ಲೈಟ್, ಹಾರ್ನ್ಗಳ ಅಳವಡಿಕೆ, ಸೂಕ್ತ ದಾಖಲೆ ಇಲ್ಲದವರು ಸಹಿತ ಒಟ್ಟು 115 ಪ್ರಕರಣ ದಾಖಲಿಸಿ 65 ಸಾವಿರ ರೂ. ದಂಡ ವಸೂಲು ಮಾಡಲಾಯಿತು. ಸಂಚಾರ ಪೊಲೀಸ್ ಠಾಣೆಯಲ್ಲಿ 80 ಪ್ರಕರಣ ದಾಖಲಾಗಿ 40 ಸಾವಿರ ರೂ. ದಂಡ ವಸೂಲು ಮಾಡಲಾಯಿತು. ನಗರ ಪೊಲೀಸ್ ಠಾಣೆಯಲ್ಲಿ 35 ಪ್ರಕರಣ ದಾಖಲಾಗಿ 25 ಸಾವಿರ ರೂ.ದಂಡ ಸಂಗ್ರಹವಾಯಿತು.
ಈ ಅಭಿಯಾನಕ್ಕಾಗಿ ಜಿಲ್ಲೆಯಾ ದ್ಯಂತ 50ಕ್ಕೂ ಅಧಿಕ ಮಂದಿ ಹಿರಿಯ ಪೊಲೀಸರು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಶಾಲಾ- ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮ ಆಯೋಜಿಸುವಂತೆ ಸೂಚನೆ ನೀಡಿದ್ದಾರೆ. ಯಾವುದೇ ಶಾಲೆ ಅಥವಾ ಕಾಲೇಜಿನ ಕ್ಯಾಂಪಸ್‌ಗಳಲ್ಲಿ ಮಾದಕ ವಸ್ತುಗಳ ಬಳಕೆ ಪ್ರಕರಣ ಕಂಡುಬಂದರೆ ಆ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್‌ಪಿ ಟಿ.ಆರ್. ಜೈಶಂಕರ್, ಸಂಚಾರ ಪೊಲೀಸ್ ಠಾಣೆಯ ನಿರೀಕ್ಷಕ ಅಬ್ದುಲ್ ಖಾದರ್, ನಗರ ಠಾಣೆಯ ಪೊಲೀಸ್ ನಿರೀಕ್ಷಕ ಶಕ್ತಿವೇಲು ಉಪಸ್ಥಿತರಿದ್ದರು. ನಿಯಮ ಉಲ್ಲಂಘಿಸಿದರೆ ಕ್ರಮ
ಮಾದಕ ವಸ್ತುಗಳ ಸಾಗಾಟ ನಿಯಂತ್ರಣ ಹಾಗೂ ಸುವ್ಯವಸ್ಥಿತ ಸಂಚಾರ ನಿಯಮ ಪಾಲನೆಯ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮುಂದಿನ ದಿನಗಳಲ್ಲಿಯೂ ಜಿಲ್ಲೆಯ ವಿವಿಧೆಡೆ ಇದೇ ರೀತಿ ದಿಢೀರ್ ಕಾರ್ಯಾಚರಣೆ ನಡೆಸಲಾಗುವುದು. ವಾಹನಗಳ ಮಾಡಿಫೈ ಸಹಿತ ಸಂಚಾರ ನಿಯಮ ಉಲ್ಲಂ ಸುವವರ ಮೇಲೆ ಕ್ರಮ ಜರಗಿಸಲಾಗುವುದು.
-ಎನ್.ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಡುಪಿ