Advertisement

ಸೂರ್ಯನಲ್ಲಿಗೆ ನಾಸಾ ರೋಬೊಟ್‌

03:50 AM Feb 28, 2017 | Team Udayavani |

ವಾಷಿಂಗ್ಟನ್‌: ಉರಿಯುವ ಬೆಂಕಿಯ ಉಂಡೆ ಸೂರ್ಯನ ತಾಪಮಾನ ಹಾಗೂ ಏನೇನು ಗುಣಗಳನ್ನು ಒಳಗೊಂಡಿದೆ ಎನ್ನುವ ಮಾಹಿತಿಯನ್ನು ಇನ್ನಷ್ಟು ಕಲೆಹಾಕುವ ಸಾಹಸಕ್ಕೆ ನಾಸಾ ಬಾಹ್ಯಾಕಾಶ ವಿಜ್ಞಾನಿಗಳು ಮುಂದಾಗಿ­ದ್ದಾರೆ. ಇದಕ್ಕಾಗಿಯೇ ಸೂರ್ಯನಿಂದ ಸರಿ­ಸುಮಾರು 6 ದಶಲಕ್ಷ ಕಿಲೋ ಮೀಟರ್‌ ದೂರಕ್ಕೆ ರೊಬೋಟ್‌ ಒಂದನ್ನು ಕಳುಹಿಸಲು ನಿರ್ಧರಿಸಿದೆ.

Advertisement

ಭೂಮಿಯಿಂದ ಚಂದ್ರ, ಮಂಗಳನ ಅಂಗಳಕ್ಕೆ ನೌಕೆಯನ್ನು ಕಳುಹಿಸಿ, ಮನುಷ್ಯನನ್ನೂ ಕಳುಹಿಸಿ ಹೊಸ ಹೊಸ ಸಂಶೋಧನೆಯ ಮೂಲಕ ಅಚ್ಚರಿಯ ಜಗತ್ತಿನ ಪರಿಚಯ ಮಾಡಿಕೊಡು­ತ್ತಿರುವ ನಾಸಾ ವಿಜ್ಞಾನಿಗಳು ಈಗಾಗಲೇ ರೊಬೋಟ್‌ ಅಭಿವೃದ್ಧಿಗೆ ಆರಂಭಿಕ ಹೆಜ್ಜೆ ಇಟ್ಟಿದ್ದಾರೆ. ಭೂಮಿಯಿಂದ ಹೆಚ್ಚಾಕಡಿಮೆ 149 ದಶಲಕ್ಷ ಕಿಲೋಮೀಟರ್‌ ದೂರದಲ್ಲಿರುವ ಸೂರ್ಯನ ಅಧ್ಯಯನ ನಡೆಸಲಿಕ್ಕಾಗಿ ಸೋಲಾರ್‌ ಪ್ರೋಬ್‌ ಪ್ಲಸ್‌ ಯಂತ್ರವನ್ನು ರೊಬೋಟ್‌ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಸೂರ್ಯನ ಮೇಲ್ಪದರ ಸಂಪೂರ್ಣ ಅಧ್ಯಯನ ಈ ರೊಬೋಟ್‌ನಿಂದ ಸಾಧ್ಯವಾಗುತ್ತದೆನ್ನುವ ಉದ್ದೇಶವಂತೂ ಇಲ್ಲ. ಆದರೆ ಸಾಧ್ಯವಾಗುವಷ್ಟು ಸೂರ್ಯನ ಹತ್ತಿರಕ್ಕೆ ತೆರಳಿ ಪ್ರಮುಖ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವಂತೂ ನಡೆಯಲಿದೆ ಎಂದು ಗಾಡ್ಡಾರ್ಡ್‌ ಬಾಹ್ಯಾಕಾಶ ನೌಕಾ ಕೇಂದ್ರದಲ್ಲಿ ನಾಸಾ ವಿಜ್ಞಾನಿ ಎರಿಕ್‌ ಕ್ರಿಶ್ಚಿಯಾನ್‌ ಹೇಳಿದ್ದಾರೆ.

ನಾಸಾ ನೀಡುವ ಮಾಹಿತಿಯ ಪ್ರಕಾರ ಸೂರ್ಯ ಮೇಲ್ಮೆ„ನ ತಾಪಮಾನ 5,500 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ. ಹೊರ ವರ್ತುಲದಲ್ಲಿನ ಕುದಿಯುವ ತಾಪಮಾನ ಎರಡು ದಶಲಕ್ಷ ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ. ಈ ವ್ಯತ್ಯಾಸ ಯಾಕೆ ಎನ್ನುವುದನ್ನು ತಿಳಿದುಕೊಳ್ಳುವುದೇ ಒಂದು ಸವಾಲಾಗಿದೆ ಎಂದು ಕ್ರಿಶ್ಚಿಯಾನ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next