Advertisement

ಕ್ಷೀರಪಥದ ಅಮೋಘ ಚಿತ್ರ ಬಿಡುಗಡೆಗೊಳಿಸಿದೆ ನಾಸಾ..!

11:57 AM Apr 16, 2021 | Team Udayavani |

ವಾಷಿಂಗ್ಟನ್ : ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲಾದ ಮಿಲ್ಕಿ ವೇ ಗೆಲಾಕ್ಸಿಯ ಚಿತ್ರವೊಂದನ್ನು ನಾಸಾ (NASA – National Aeronautics and Space Administration) ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ. ನಾಸಾ ಬಿಡುಗಡೆಗೊಳಿಸಿದ ಈ ಕುತೂಹಲಕಾರಿ ಚಿತ್ರ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ.

Advertisement

ಓದಿ : ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

ನಾವು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲ್ಪಟ್ಟ ಮಿಲ್ಕಿ ವೇ ಗ್ಯಾಲಕ್ಸಿಯ ಚಿತ್ರವನ್ನು ನಾವು ಇಲ್ಲಿ ಪ್ರಕಟಿಸಿದ್ದೇವೆ. ಈ ಚಿತ್ರ ಎಲ್ಲವನ್ನೂ ವರ್ಣಿಸುತ್ತದೆ. ನಾವು ವಾಸಿಸುವ ಭೂಮಿಯೂ ಇದೇ ಮಿಲ್ಕಿ ವೇ ನಲ್ಲಿದೆ. ಎಂದು ನಾಸಾ ಅಡಿ ಟಿಪ್ಪಣಿಯೊಂದಿಗೆ ಈ ಚಿತ್ರವನ್ನು ಹಂಚಿಕೊಂಡಿದೆ.

ಇನ್ನು, ಕ್ಷೀರಪಥವು ನಮ್ಮ ಸೌರವ್ಯೂಹವನ್ನು ಒಳಗೊಂಡಿರುವ ಒಂದು  ನೀಹಾರಿಕೆ ಅಥವಾ  ಗ್ಯಾಲಕ್ಸಿ. ‘ಮಿಲ್ಕೀ ವೇ ಪದ ಲ್ಯಾಟಿನ್ ನ ‘ವಿಯಾ ಲಾಕ್ಟಿಯಾ’ ಎಂಬ ಪದದಿಂದ ಬಂದಿದೆ. ಈ ಗ್ಯಾಲಕ್ಸಿಯ ಆಕಾಶದಲ್ಲಿ ಅದರ ಗೋಚರತೆಯನ್ನು ನೋಡಿ, ಮಂದವಾಗಿ ಪ್ರಜ್ವಲಿಸುವ ಅದರ ಪಟ್ಟಿಯನ್ನು ಅನುಸರಿಸಿ ಕ್ಷೀರಪಥ ಅಥವಾ ಹಾಲು-ದಾರಿ/ಹಾಲಿನ ದಾರಿ, ಎಂಬ ಹೆಸರು ಎಂದು ಹೇಳಲಾಗುತ್ತದೆ.

ಭಾರತದಲ್ಲಿ ಅದನ್ನು “ಆಕಾಶಗಂಗೆ” ಎಂದು ಕರೆಯುವ ರೂಢಿಯೂ ಕೂಡ ಇದೆ. ಆಕಾಶದಿಂದ ಭೂಮಿಗೆ ಇಳಿಯುತ್ತಿರುವ ಗಂಗಾನದಿ /ಗಂಗಾಮಾತೆ ಎಂದು ಪ್ರಾಚೀನರು ಭಾವಿಸಿದ್ದರು. ಪೌರಾಣಿಕ ಕಥೆಯಲ್ಲಿ ಗಂಗೆಯು ವಿಷ್ಣುಸ್ವರೂಪ ತ್ರಿವಿಕ್ರಮನ ಪಾದದಲ್ಲಿ ಹುಟ್ಟಿ ಸ್ವರ್ಗದಲ್ಲಿ ಹರಿಯುವಳು. ನಂತರ ಬ್ರಹ್ಮನ ಕಲಶಸೇರಿ, ಕೈಲಾಸ ವಾಸಿಯಾದ ಶಿವನ ಜಟೆಯಲ್ಲಿದ್ದು, ನಂತರ ಭಗೀರಥನ ಪ್ರಯತ್ನದಿಂದ ಭೂಮಿಗೆ ಹರಿಯುವಳು. ಹಾಗಾಗಿ ಭಾರತದ ಪ್ರಾಚೀನರು ಈ ನಕ್ಷತ್ರಲೋಕದ ಬೆಳಕಿನ ಪಟ್ಟಿಯನ್ನು ಆಕಾಶಗಂಗೆ ಎಂದು ಕರೆದರು ಎಂದು ಹೇಳಲಾಗುತ್ತದೆ.

Advertisement

ಓದಿ : ಅಂಚೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತಕ್ಕೆ ವಿಧಿಸುವ ದಂಡ ಪ್ರಮಾಣ ಇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next