Advertisement

ಮಂಗಳ ಸವಾಲಿಗೆ ನಾಸಾ ಸಿದ್ಧ

07:45 AM Oct 15, 2017 | Team Udayavani |

ನ್ಯೂಯಾರ್ಕ್‌: 2030ರೊಳಗೆ ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸುವ ಮಹತ್ವಾ ಕಾಂಕ್ಷೆ ಹೊತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ತನ್ನ ಈ ಪ್ರಯತ್ನದಲ್ಲಿ ದೈತ್ಯವಾದ ಸವಾಲೊಂದಕ್ಕೆ ಉತ್ತರ ಹುಡುಕುವಲ್ಲಿ ನಿರತವಾಗಿದೆ. 

Advertisement

ಅಂತರಿಕ್ಷ ಯಾನ ಕೈಗೊಳ್ಳುವ ಯಾವುದೇ ಜೀವಿ ಭೂಕಕ್ಷೆ ದಾಟುತ್ತಲೇ ನಭದಲ್ಲಿ ಅವ್ಯಾಹತವಾಗಿ ಹರಡಿರುವ ಗ್ಯಾಲಾಸ್ಟಿಕ್‌ ಕಾಸ್ಮಿಕ್‌ ಕಿರಣಗಳಿಗೆ (ಜಿಸಿಆರ್‌) ತುತ್ತಾಗುವು ದರಿಂದ ಅವುಗಳಿಂದ ಯಾತ್ರಿಕರನ್ನು ಪಾರು ಮಾಡುವ ಕವಚಗಳ ರಚನೆಯಲ್ಲಿ ನಾಸಾದ ಹ್ಯೂಮನ್‌ ಎಕ್ಸ್‌ಪ್ಲೊರೇಷನ್‌ ಸ್ಟ್ರಾಟೆಜಿಕ್‌ ಅನಾಲಿಸಿಸ್‌ ವಿಭಾಗ ತೊಡಗಿದೆ.

ಏನು ಈ ವಿಕಿರಣ?: ಭೂಮಿಯ ಕಕ್ಷೆ ದಾಟುತ್ತಲೇ ಎದುರಾಗುವ ಜಿಸಿಆರ್‌, ಸೋಲಾರ್‌ ಪಾರ್ಟಿಕಲ್‌ ಇವೆಂಟ್ಸ್‌ (ಎಸ್‌ಪಿಇ) ಹಾಗೂ ವ್ಯಾನ್‌ ಅಲ್ಲೆನ್‌ ಬೆಲ್ಟ್$Õ (ವಿಎಬಿ)ಗಳನ್ನು  ಒಳಗೊಂಡಿರುತ್ತವೆ. ಭೂಮಿಯಲ್ಲಿ ಯಾವುದೇ ವಿಕಿರಣ ಸೂಸುವ ವಸ್ತುವಿನ ಹೊರಬರುವ ವಿಕಿರಣಗಳಿಗಿಂತ ಅತ್ಯಂತ ಶಕ್ತಿಶಾಲಿಯಾಗಿರುತ್ತವೆ ಜಿಸಿಆರ್‌.  

ಗಾಢ ಪರಿಣಾಮಗಳು: ಈ ವಿಕಿರಣಗಳ ಪರಿಣಾಮಗಳ ಬಗ್ಗೆ ವಿವರಿಸಿರುವ ನಾಸಾ ಸ್ಪೇಸ್‌ ರೇಡಿಯೇಷನ್‌ ಎಲಿಮೆಂಟ್‌ ವಿಜ್ಞಾನಿ ಲೀಸಾ ಸೈಮನ್ಸನ್‌, ಅಂತರಿಕ್ಷದ ವಿಕಿರಣಗಳು ಖಗೋಳ ಯಾತ್ರಿಕರ ಅಣುಅಣುವನ್ನೂ ಅವರ ಅರಿವಿಲ್ಲದಂತೆ ಬೇಧಿಸಿ ಸಾಗುವುದರಿಂದ, ಅವರ ಡಿಎನ್‌ಎ ಮಾದರಿಗಳೇ ಬದಲಾಗುತ್ತವೆ. ಇದು, ಅನೇಕ ಗುಣ ಪಡಿ ಸಲಸಾಧ್ಯ ಎನ್ನುವಂಥ ಮಾರಕ ರೋಗ ಗಳಿಗೆ ಅವರನ್ನು ಒಳಪಡಿಸುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next