Advertisement

ಮಂಗಳನಲ್ಲಿ ವೃತ್ತ ಮಣ್ಣಿನ ದಿಬ್ಬ !ನಾಸಾದ ಎಂಆರ್‌ಒ ಆರ್ಬಿಟರ್‌ ನಲ್ಲಿ ಫೋಟೋ ಸೆರೆ

06:09 PM Mar 05, 2023 | Team Udayavani |

ವಾಷಿಂಗ್ಟನ್‌: ಮಂಗಳ ಗ್ರಹದ ಅಧ್ಯಯನ ನಡೆಸುತ್ತಿರುವ ನಾಸಾದ ಮಂಗಳ ವಿಚಕ್ಷಣ ಬಾಹ್ಯಾಕಾಶ ನೌಕೆಯ (ಎಂಆರ್‌ಒ )ಆರ್ಬಿಟರ್‌,ಗ್ರಹದಲ್ಲಿ ವಿಲಕ್ಷಣ ವೃತ್ತಾಕಾರದ ಮರಳಿನ ದಿಬ್ಬವಿರುವುದನ್ನು ಪತ್ತೆಹಚ್ಚಿದ್ದು, ಮರಳು ದಿಬ್ಬದ ಫೋಟೋವನ್ನೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಆರ್ಬಿಟರ್‌ನಲ್ಲಿ ಅಳವಡಿಸಲಾಗಿರುವ ಹೈರೈಸ್‌ ಕಲರ್‌ ಕ್ಯಾಮೆರಾ ಮೂಲಕ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಸಾಮಾನ್ಯವಾಗಿ ಮಂಗಳಗ್ರಹದಲ್ಲಿ ವಿಭಿನ್ನ ಗಾತ್ರ,ಆಕಾರದ ಮರಳು ದಿಬ್ಬಗಳು ಪತ್ತೆಯಾಗುತ್ತಲೇ ಇರುತ್ತವೆ. ಆದರೆ, ಈಗ ಪತ್ತೆಯಾಗಿರುವ ಮರಳು ದಿಬ್ಬ ಸಂಪೂರ್ಣ ವೃತ್ತಾಕಾರವಾಗಿರುವುದು ವಿಲಕ್ಷಣವಾಗಿದೆ.

ಅಲ್ಲದೇ,ವೃತ್ತಾಕಾರವಾಗಿದ್ದರೂ,ದಕ್ಷಿಣ ಭಾಗದಲ್ಲಿ ಅಲ್ಪಮಟ್ಟದಲ್ಲಿ ಕಿರಿದಾಗಿರುವುದು ಕಂಡುಬಂದಿದೆ. ಇದರಿಂದ ಮರಳು ದಕ್ಷಿಣಾಭಿಮುಖವಾಗಿ ಚಲಿಸಿದರೂ, ಗ್ರಹದಲ್ಲಿ ಗಾಳಿ ಬೀಸುವ ಮಾರ್ಗ ಬದಲಾವಣೆಯಿಂದ ಮರಳು ದಿಬ್ಬದ ರಚನೆ ಬದಲಾಗುತ್ತದೆ ಎಂಬುದು ತಿಳಿದುಬಂದಿದೆ ಎಂದು ಗ್ರಹಗಳ ಭೂ ವಿಜ್ಞಾನಿ ಆಲ್ಫೆ†ಡ್‌ ಮೆಕ್ವೆನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next