Advertisement

“ಕೃತಕ ಮಂಗಳ’ನಲ್ಲಿ ಜೀವನ! ಹೋಗಲು ರೆಡೀನಾ?

08:57 PM Aug 07, 2021 | Team Udayavani |

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ಜೀವಿಸುವ ಮನುಷ್ಯರ ಮೇಲೆ ಅಲ್ಲಿನ ವಾತಾವರಣ ಬೀರುವ ಪ್ರಭಾವಗಳನ್ನು ಅಧ್ಯಯನ ಮಾಡುವ ಸಲುವಾಗಿ, ವಿಶ್ವದ ಎಲ್ಲಾ ಖಗೋಳ ವಿಜ್ಞಾನ ಪ್ರಿಯರಿಗೊಂದು ರೋಚಕ ಅವಕಾಶವೊಂದನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಕಲ್ಪಿಸಿದೆ. ಭೂಮಿಯ ಮೇಲೆಯೇ ನಿರ್ಮಿಸಲಾಗುವ ಮಂಗಳನ ಪರಿಸರದ ಕೃತಕ ಅವತರಣಿಕೆಯಲ್ಲಿ ವರ್ಷ ಪೂರ್ತಿ ಜೀವಿಸಲು ಸಿದ್ಧವಿರುವ ಆಸಕ್ತರಿಂದ ಅರ್ಜಿಗಳನ್ನು ನಾಸಾ ಆಹ್ವಾನಿಸಿದೆ.

Advertisement

ಹೂಸ್ಟನ್‌ನಲ್ಲಿರುವ ಜಾನ್ಸನ್‌ ಸ್ಪೇಸ್‌ ಸೆಂಟರ್‌ನಲ್ಲಿ “ಮಾರ್ಸ್‌ ಡ್ನೂನ್‌ ಆಲ್ಫಾ’ ಎಂಬ ಸುಮಾರು 1,700 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ಮಂಗಳ ಗ್ರಹದ ಕೃತಕ ಪರಿಸರವನ್ನು ನಿರ್ಮಿಸಲಾಗಿದೆ. ನಾಸಾದಿಂದ ಆಯ್ಕೆಯಾಗುವ ನಾಲ್ಕು ಮಂದಿ ಈ ಪರಿಸರದಲ್ಲಿ ಒಂದು ವರ್ಷ ಜೀವಿಸಬೇಕಿದ್ದು, ಆ ಪರಿಸರದಲ್ಲಿ ಇವರು ಎದುರಿಸುವ ಸವಾಲುಗಳನ್ನು ಅಧ್ಯಯನ ಮಾಡಲಾಗುತ್ತದೆ.

ಎಲ್ಲ ಸವಾಲುಗಳೂ ಇಲ್ಲಿವೆ:

ಮಂಗಳನ ಪರಿಸರಕ್ಕೆ ಕಾಲಿಡುವ ಖಗೋಳ ವಿಜ್ಞಾನಿಗಳು ಅಲ್ಲಿ ಸಾಮಾನ್ಯವಾಗಿ, ಸೀಮಿತ ಮೂಲಸೌಕರ್ಯಗಳು, ಪರೀಕ್ಷಾ ಪರಿಕರಗಳ ವೈಫ‌ಲ್ಯ, ಮಂದಗತಿಯ ಸಂವಹನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಅವೆಲ್ಲವನ್ನೂ ನಾಸಾ ರೂಪಿಸಿರುವ “ಕ್ರೂé ಹೆಲ್ತ್‌ ಆ್ಯಂಡ್‌ ಪರ್ಫಾಮನ್ಸ್‌ ಎಕ್ಸ್‌ಪ್ರೊರೇಷನ್‌ ಅನಲಾಗ್‌’ ಹೆಸರಿನಲ್ಲಿ ಇಲ್ಲಿಯೇ ಅಧ್ಯಯನ ಮಾಡಲು ನಿರ್ಧರಿಸಲಾಗಿದೆ. 30-55 ರೊಳಗಿನ ವಯೋಮಾನದವರು, ಇಂಗ್ಲಿಷ್‌ ಭಾಷೆ ಬಲ್ಲವರು, ಉತ್ತರ ದೈಹಿಕ ಆರೋಗ್ಯ ಇರುವವರು ಹಾಗೂ ಧೂಮಪಾನದ ಅಭ್ಯಾಸ ಇಲ್ಲದವರು ಮಾತ್ರವೇ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಲಾಗಿದೆ.

ಶಿಲೆಯ ಮಾದರಿ ಸಂಗ್ರಹಿಸುವಲ್ಲಿ ರೋವರ್‌ ವಿಫ‌ಲ:

Advertisement

ಮಂಗಳನ ಅಂಗಳದಲ್ಲಿರುವ ನಾಸಾದ ಪರ್ಸೆವೆರೆನ್ಸ್‌ ರೋವರ್‌, ಅಲ್ಲಿನ ಶಿಲೆಗಳ ಮಾದರಿಯನ್ನು ಸಂಗ್ರಹಿಸುವ ಮೊದಲ ಯತ್ನದಲ್ಲಿ ವಿಫ‌ಲವಾಗಿದೆ. ಮೇಲ್ಮೆಯನ್ನು ಕೊರೆದು ಶಿಲೆಯನ್ನು ತೆಗೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ರೊಬೋಟ್‌ವೊಂದು ಮಂಗಳನ ಮೇಲ್ಮೆ„ಯನ್ನು ಕೊರೆದಿರುವುದು ಇದೇ ಮೊದಲು. ಶಿಲೆಯ ಸಂಗ್ರಹ ಸಾಧ್ಯವಾಗಿದ್ದರೆ ಭವಿಷ್ಯದಲ್ಲಿ ವಿಜ್ಞಾನಿಗಳಿಗೆ ಈ ಗ್ರಹದ ಕುರಿತು ಹೆಚ್ಚಿನ ಅಧ್ಯಯನಕ್ಕೆ ನೆರವಾಗುತ್ತಿತ್ತು. ಮುಂದಿನ ಯತ್ನಗಳಲ್ಲಾದರೂ ರೋವರ್‌ ಯಶಸ್ವಿಯಾಗಬಹುದು ಎಂಬ ವಿಶ್ವಾಸವನ್ನು ನಾಸಾ ವ್ಯಕ್ತಪಡಿಸಿದೆ. 2030ರೊಳಗಾಗಿ ಕಲ್ಲುಗಳ 30 ಮಾದರಿಗಳನ್ನು ಭೂಮಿಗೆ ತರಲು ನಾಸಾ ಉದ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next