Advertisement

ನಿಮ್ಮ ಪ್ರಯತ್ನದಿಂದ ನಮಗೆ ಸ್ಪೂರ್ತಿಯಾಗಿದ್ದೀರಿ : ಇಸ್ರೋಗೆ ನಾಸಾ ಟ್ವೀಟ್‌

10:45 AM Sep 09, 2019 | Team Udayavani |

ಬೆಂಗಳೂರು: ಭಾರತದ ಬಹು ನಿರೀಕ್ಷಿತ ಚಂದ್ರಯಾನ 2 ನ ವಿಕ್ರಮ್‌ ಲ್ಯಾಂಡರ್‌ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡರೂ ಯೋಜನೆಯು  ಶೇಕಡಾ 90ರಷ್ಟು ಯಶಸ್ವಿಯಾಗಿದೆ. ಭಾರತದ ವಿಜ್ಞಾನಿಗಳ ಸಾಧನೆಗೆ ವಿಶ್ವದೆಲ್ಲೆಡೆ ಮೆಚ್ಚುಗೆ ಕೇಳಿ ಬರುತ್ತಿದ್ದು, ಇದೀಗ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡಾ ಇಸ್ರೋ ಪ್ರಯತ್ನವನ್ನು ಅಭಿನಂಧಿಸಿದೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿರುವ ನಾಸಾ, ಅಂತರಿಕ್ಷ ನಿಜಕ್ಕೂ ಕಷ್ಟ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಇಸ್ರೋ ಪ್ರಯತ್ನವನ್ನು  ನಾವು ನಿಜಕ್ಕೂ ಪ್ರಶಂಸಿಸುತ್ತೇವೆ. ನಿಮ್ಮ ಈ ಪಯಣದಲ್ಲಿ ನೀವು ನಮ್ಮಗೆ ಸ್ಪೂರ್ತಿಯಾಗಿದ್ದೀರ. ಸೌರ ಮಂಡಲದ ಮುಂದಿನ ಯೋಜನೆಗಳಲ್ಲಿ ನಾವು ಜೊತೆಯಾಗಿ ಸಾಗುವ ಎಂದು ಬರೆದುಕೊಂಡಿದೆ.

ನಾಸಾದ ಈ ಟ್ವೀಟ್‌ ಗೆ ವಿಶ್ವದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next