Advertisement

ನರ್ತಕಿ ಮುಂದೆ ಭರ್ಜರಿ ಸಂಭ್ರಮ

10:30 AM Nov 06, 2017 | Team Udayavani |

ಧ್ರುವ ಸರ್ಜಾ ನಟಿಸಿರುವ, ಚೇತನ್‌ ಕುಮಾರ್‌ ನಿರ್ದೇಶನದ “ಭರ್ಜರಿ’ ಚಿತ್ರ 50 ದಿನ ಪೂರೈಸಿರೋದು ನಿಮಗೆ ಗೊತ್ತೇ ಇದೆ. ಈ ಖುಷಿಯನ್ನು ಭಾನುವಾರ ಚಿತ್ರತಂಡ ನರ್ತಕಿ ಚಿತ್ರಮಂದಿರದಲ್ಲಿ ಸಂಭ್ರಮಿಸಿತು. ಧ್ರುವ ಸರ್ಜಾ, ನಾಯಕಿ ರಚಿತಾ ರಾಮ್‌ ಹಾಗೂ ಚೇತನ್‌ ಕುಮಾರ್‌ ಸೇರಿದಂತೆ ಚಿತ್ರತಂಡ ಜೊತೆಯಾಗಿ ಕೇಕ್‌ ಕತ್ತರಿಸಿತು.

Advertisement

ತಮ್ಮ ನೆಚ್ಚಿನ ನಟ ಚಿತ್ರಮಂದಿರಕ್ಕೆ ಭೇಟಿ ಕೊಡುವ ವಿಷಯ ತಿಳಿದ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಕಟೌಟ್‌ ಅಕ್ಕಪಕ್ಕ ನಿಂತುಕೊಂಡು ತಮ್ಮ ನಟನನ್ನು ಕಣ್ತುಂಬಿಕೊಳ್ಳುವ ದೃಶ್ಯ ಕೂಡಾ ಕಂಡು ಬಂತು. ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸುವ ಮೂಲಕ ಚಿತ್ರ ಗೆದ್ದ ಸಂತಸ ವ್ಯಕ್ತಪಡಿಸಿದರು.

“ಭರ್ಜರಿ’ ಚಿತ್ರ ಬರೋಬ್ಬರಿ 71 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದೆ. ಮಲ್ಟಿಪ್ಲೆಕ್ಸ್‌ನ ಸ್ಕ್ರೀನ್‌ಗಳನ್ನೂ ಸೇರಿಸಿದರೆ 90ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ 50 ದಿನ ಪೂರೈಸಿರುವುದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. 50 ದಿನ ಪೂರೈಸಿದ ಚಿತ್ರ ಶತದಿನ ಆಚರಿಸುತ್ತಾ ಎಂದು ನೀವು ಕೇಳಿದರೆ ಖಂಡಿತಾ ಪೂರೈಸುತ್ತದೆ ಎಂಬ ಉತ್ತರ ಸಿಗುತ್ತದೆ. ಸುಮಾರು 12 ರಿಂದ 13 ಸೆಂಟರ್‌ಗಳಲ್ಲಿ “ಭರ್ಜರಿ’ 100 ದಿನ ಪೂರೈಸಲಿದೆ.

“ಭರ್ಜರಿ’ ಚಿತ್ರದಲ್ಲಿ ರಚಿತಾ ರಾಮ್‌ ಹಾಗೂ ಹರಿಪ್ರಿಯಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರವನ್ನು ಕನಕಪುರ ಶ್ರೀನಿವಾಸ್‌ ನಿರ್ಮಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ತಾರಾ, ಅವಿನಾಶ್‌, ಶ್ರೀನಿವಾಸಮೂರ್ತಿ, ಉದಯ್‌, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next