Advertisement

ಮಧ್ಯಪ್ರದೇಶ: 10 ಅಡಿ ಕೆಳಕ್ಕೆ ಬಿದ್ದ ಮಾಜಿ ಸಿಎಂ ಕಮಲ್ ನಾಥ್ ಪ್ರಯಾಣಿಸುತ್ತಿದ್ದ ಲಿಫ್ಟ್

08:56 AM Feb 22, 2021 | Team Udayavani |

ಇಂದೋರ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಪ್ರಯಾಣಿಸುತ್ತಿದ್ದ ಲಿಫ್ಟ್,  ತಾಂತ್ರಿಕ ದೋಷದಿಂದ  ಕೆಟ್ಟು, 10 ಅಡಿ ಕೆಳಕ್ಕೆ ಬಿದ್ದ ಘಟನೆ ಭಾನುವಾರ (ಫೆ.21) ನಡೆದಿದೆ. ಅದೃಷ್ಟವಶಾತ್ ಲಿಫ್ಟ್ ನಲ್ಲಿದ್ದ ಕಮಲ್ ನಾಥ್ ಹಾಗೂ ಇತರ ಕಾಂಗ್ರೆಸ್ ನಾಯಕರು ಅಲ್ಪದರಲ್ಲೇ ಪಾರಾಗಿದ್ದಾರೆ.

Advertisement

ಘಟನೆಯ ವಿವರ:  ಕಮಲ್ ನಾತ್ ಮತ್ತು ಇತರ ಕಾಂಗ್ರೆಸ್ ನಾಯಕರು, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮಂತ್ರಿ ರಾಮೇಶ್ವರ್ ಪಟೆಲ್ ಅವರನ್ನು ಭೇಟಿ ಮಾಡಲು ಇಂದೋರ್ ಗೆ ತೆರಳಿದ್ದರು. ಖಾಸಗಿ ಆಸ್ಪತ್ರೆ ತಲುಪಿದ ಬಳಿಕ ಎಲ್ಲಾ ನಾಯಕರು ಲಿಫ್ಟ್ ಏರಿದ್ದರು. ಆದರೇ ಕೆಲ ಸಮಯದಲ್ಲೇ ಲಿಫ್ಟ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ತೊಡಗಿದೆ.  ಮೆಲ್ಮುಖವಾಗಿ ಚಲಿಸುವ ಬದಲು 10 ಅಡಿ ಕೆಳ ಭಾಗಕ್ಕೆ ಬಿದ್ದಿದೆ.

ಇದನ್ನೂ ಓದಿ:  ಜನರು ಮಾಸ್ಕ್ ಧರಿಸದಿದ್ದರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ: ಉದ್ಧವ್ ಠಾಕ್ರೆ ಎಚ್ಚರಿಕೆ

ಕೂಡಲೇ ಕಮಲ್ ನಾಥ್ ಭದ್ರತಾ ವ್ಯಕ್ತಿಗಳು ಲಿಫ್ಟ್ ಕೆಟ್ಟು ನಿಂತ ಸ್ಥಳಕ್ಕೆ ಧಾವಿಸಿದ್ದಾರೆ. ಆದರೇ ಲಿಫ್ಟ್ ಬಾಗಿಲು ಕೂಡ ಬಂದ್ ಆಗಿದ್ದವು. ಕೂಡಲೇ ಲಿಫ್ಟ್ ಇಂಜಿನಿಯರ್ ಗೆ ಮಾಹಿತಿ ನೀಡಿ ಲಿಫ್ಟ್ ಬಾಗಿಲು ಒಡೆಯಲಾಗಿದೆ. ಅದೃಷ್ವಶಾತ್ ಕಮಲ್ ನಾಥ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತನಿಖೆಗೆ ಆದೇಶ: ಈ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಮಲ್ ನಾಥ್ ಆರೋಗ್ಯ ವಿಚಾರಿಸಿ  ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.

Advertisement

ಇದನ್ನೂ ಓದಿ:  ಕೋವಿಡ್ ಎರಡನೇ ಅಲೆ ಆತಂಕ: ಅಸಡ್ಡೆ ಬೇಡ

Advertisement

Udayavani is now on Telegram. Click here to join our channel and stay updated with the latest news.

Next