ಬಂಟ್ವಾಳ: ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ, ಬೀದಿ ದೀಪ, ಹೈಮಾಸ್ಟ್ ಲೈಟ್ ಯೋಜನೆಗಳನ್ನು ಜಿ.ಪಂ. ಅನುದಾನದಲ್ಲಿ ಅನುಷ್ಠಾನಿಸುವ ಕೆಲಸ ನಿರಂತರ ಮಾಡುತ್ತಿದ್ದು, ಸ್ಥಳೀಯರ ಆವಶ್ಯಕತೆಗೆ ತಕ್ಕಂತೆ ಅಭಿವೃದ್ಧಿ ನಡೆದಿದೆ ಎಂದು ಗೋಳ್ತಮಜಲು ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಹೇಳಿದರು.
ಅವರು ಜ. 17ರಂದು ನರಿಕೊಂಬು ಗ್ರಾಮ ನಾಟಿಬೀದಿ ಶ್ರೀ ಕೋದಂಡ ರಾಮಚಂದ್ರ ಹನುಮಂತ, ಗರುಡ, ಆರ್ಯಕಾತ್ಯಾಯಿನಿ ದೇವಸ್ಥಾನ ವಠಾರದಲ್ಲಿ ಜಾತ್ರೆ ಪ್ರಯುಕ್ತ 1.25 ಲಕ್ಷ ರೂ. ವೆಚ್ಚದಿಂದ ನಿರ್ಮಿಸಿದ್ದ ಹೈಮಾಸ್ಟ್ ಲೈಟ್ಸ್ವಿಚ್ ಹಾಕುವ ಮೂಲಕ ಉದ್ಘಾಟಿಸಿ, ಮುಂದಿನ ಯೋಜನೆಯಲ್ಲಿ ಏರಮಲೆ ಕಾಡೆದಿ ಭದ್ರಕಾಳಿ ಕ್ಷೇತ್ರಕ್ಕೂ ಹೈಮಾಸ್ಟ್ ಲೈಟ್ ಒದಗಿಸುವ ಬಗ್ಗೆ ಸಂಘಟಕರ ಮನವಿಯಂತೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾತಿ ಆಗುತ್ತಿದ್ದಂತೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಮಾತನಾಡಿ, ಯೋಜನೆಗಳನ್ನು ಅನುಷ್ಠಾನಿ ಸುವಲ್ಲಿ ಗೋಳ್ತಮಜಲು ಜಿ.ಪಂ. ಸದಸ್ಯರು ಪ್ರಥಮ ಸ್ಥಾನದಲ್ಲಿ ದ್ದಾರೆ. ಅವರು ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆಗಳಲ್ಲಿ ವಿವಿಧ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ನೀಡಿದ್ದನ್ನು ಸ್ಮರಿಸಿದರು.
ಗ್ರಾ.ಪಂ. ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ತ್ರಿವೇಣಿ ಕೇದಿಗೆ, ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಅಂತರ, ಜಿನರಾಜ ಕೋಟ್ಯಾನ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಣಿ ಮಜಲು, ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ ಬಂಗೇರ ನಾಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವ ಶಾಂತಿ ನಾಟಿ, ಪುರೋಹಿತ ಎಸ್. ಚಂದ್ರ ಶೇಖರ ಕಾರಂತ, ಶ್ರೀನಿವಾಸ ನಾಟಿ, ಎಂ. ಕೃಷ್ಣಪ್ಪ ನಾಯ್ಕ ದರ್ಖಾಸು, ಸುರೇಶ್ ಕುಲಾಲ್ ನಾಟಿ, ಬಿ. ಕೃಷ್ಣಪ್ಪ ಪೂಜಾರಿ ನಾಟಿ ಬೀದಿ, ಜಯಂತಿ ಎಂ.ಎಸ್. ನಾಟಿ, ಇಂದಿರಾ ಭಾಗೀರಥಿಕೋಡಿ, ಪ್ರಮುಖರಾದ ಸುರೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದ್ದರು.
ಶಾಸಕರು, ಸಂಸದರ ಶ್ರಮ
ಜಿ.ಪಂ.ಗೆ ಬರುವ ಅನುದಾನ ಸೀಮಿತವಾಗಿದ್ದು, ಶಾಸಕರಿಗೆ, ಸಂಸದರಿಗೆ ಹೆಚ್ಚಿನ ಅನುದಾನ ದೊರಕಿಸಿಕೊಡಲು ಸಾಧ್ಯವಾಗು ತ್ತದೆ. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲು ಅವರ ಶ್ರಮ ಸಾಧನೆಗಳಿಂದ ಅನೇಕ ಅಭಿವೃದ್ಧಿ ಕೆಲಸಗಳು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿವೆ.
–
ಕಮಲಾಕ್ಷಿ ಕೆ. ಪೂಜಾರಿ
ಜಿ.ಪಂ. ಸದಸ್ಯೆ