Advertisement

ಜೆಟ್‌ ಆಡಳಿತ ಮಂಡಳಿಗೆ ನರೇಶ್‌ ರಾಜೀನಾಮೆ

11:46 PM Mar 25, 2019 | mahesh |

ಹೊಸದಿಲ್ಲಿ: ಸಾಲದ ಸುಳಿಯಲ್ಲಿರುವ ಜೆಟ್‌ ಏರ್‌ವೇಸ್‌ನ ಆಡಳಿತ ಮಂಡಳಿಯಿಂದ ನರೇಶ್‌ ಗೋಯಲ್‌, ಪತ್ನಿ ಅನಿತಾ ಗೋಯಲ್‌ ಹೊರ ಬಂದಿದ್ದಾರೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಕಂಪೆನಿಯ ಆಡಳಿತ ಮಂಡಳಿಯನ್ನು ನಿರ್ವಹಿಸಲಿವೆ. ಈ ಬೆಳವಣಿಗೆಯಿಂದಾಗಿ ತಕ್ಷಣದ ಮೊತ್ತವಾಗಿ 1,500 ಕೋಟಿ ರೂ. ಸಂಸ್ಥೆಗೆ ದೊರೆಯಲಿದೆ.

Advertisement

ಗೋಯಲ್‌ ದಂಪತಿ ಜತೆಗೆ ಎತಿಹಾದ್‌ ವಿಮಾನಯಾನ ಸಂಸ್ಥೆಯ ನಾಮ ನಿರ್ದೇಶಿತ ನಿರ್ದೇಶಕ ಕೆವಿನ್‌ ನೈಟ್‌ ಕೂಡ ರಾಜೀನಾಮೆ ನೀಡಿದ್ದಾರೆ. ಎತಿ ಹಾದ್‌ ವಿಮಾನಯಾನ ಸಂಸ್ಥೆ ಜೆಟ್‌ನ ಶೇ.24ರಷ್ಟು ಷೇರನ್ನು ಖರೀದಿಸಿದೆ. ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ವಿಮಾನಯಾನ ಸಂಸ್ಥೆಯ ಆಸ್ತಿಯನ್ನು ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಜತೆಗೆ ಹೊಸ ಹೂಡಿಕೆದಾರರನ್ನು ಶೋಧಿಸಿ, ಅಂತಿಮ ಪಡಿಸಲಿದೆ. ಸಾವಿರಾರು ಮಂದಿಯ ಉದ್ಯೋಗ ನಷ್ಟವಾಗಕೂಡದು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next