Advertisement

ಮೋದಿ ಭೇಟಿಯಿಂದ ಬಲ ಇಮ್ಮಡಿ: ಬಿಜೆಪಿ ಮುಖಂಡರ ಅಭಿಮತ

01:57 AM Apr 15, 2019 | sudhir |

ಮಂಗಳೂರು: ಮತದಾನಕ್ಕೆ ಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಮಂಗಳೂರಿಗೆ ಭೇಟಿ ನೀಡಿರುವುದು ಕರಾವಳಿ ಬಿಜೆಪಿ ಪಾಳಯದಲ್ಲಿ ಹೊಸ ಹುಮ್ಮಸ್ಸು ತುಂಬಿರುವುದು ಖಚಿತ ಎಂದಿದ್ದಾರೆ ಹಲವು ಬಿಜೆಪಿ ಹಿರಿಯ ಮುಖಂಡರು ಮತ್ತು ಶಾಸಕರು.

Advertisement

ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಿ ದ್ದರಿಂದ ಕಾರ್ಯಕರ್ತರಲ್ಲಿ ಉತ್ಸಾಹ ದುಪ್ಪಟ್ಟಾಗಿದೆ. ಕಾರ್ಯಕರ್ತರನ್ನು ಬಡಿದೆ ಬ್ಬಿಸಿದ ಪರಿಣಾಮಕಾರಿ ರ್ಯಾಲಿ ಎಂದರೆ ತಪ್ಪಾಗಲಾರದು.

ಅದರಲ್ಲೂ ಮಹಿಳಾ ಕಾರ್ಯಕರ್ತರ ಸ್ಪಂದನೆ ನೋಡಿ ತುಂಬಾ ಸಂತಸ ವಾಗಿದೆ. ನೆರೆದ ಜನ ಸ್ತೋಮ ನೋಡಿ ಮೋದಿ ಅವರೂ ಬಹಳ ಖುಷಿಯಲ್ಲಿದ್ದರು. ಅವರ ಮುಖದಲ್ಲಿ ಸಂತೋಷ ಕಾಣುತ್ತಿತ್ತು ಎಂದಿದ್ದಾರೆ ಮಾಜಿ ಶಾಸಕ ಎನ್‌. ಯೋಗೀಶ್‌ಭಟ್‌.

ಪ್ರಧಾನಿ ಮೋದಿ ಭೇಟಿ ಕರಾವಳಿಯ ಬೂತ್‌ ಮಟ್ಟದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ ಎಂದು ಹೇಳಿರುವ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಉಭಯ ಜಿಲ್ಲೆಗಳ ಲೋಕಸಭಾ ಕ್ಷೇತ್ರ
ಗಳಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಮೈದಾನ ದಲ್ಲಿ ಮೋದಿ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಸುಮಾರು ಒಂದೂವರೆ ಲಕ್ಷ ಮಂದಿ ಆಗಮಿಸ ಬಹುದೆಂದು ನಿರೀಕ್ಷಿಸ ಲಾಗಿತ್ತು. ಆದರೆ 2 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಮೋದಿ ಅವರ ಈವರೆಗಿನ ಕಾರ್ಯಕ್ರಮಗಳಲ್ಲಿ ಮೊನ್ನೆಯ ರ್ಯಾಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಇದು ನಮ್ಮ ಅಭ್ಯರ್ಥಿಗಳಿಗೆ ಅನುಕೂಲ ವಾಗಲಿದೆ ಎಂದಿದ್ದಾರೆ.

ಭಾರತದ ಅಭಿವೃದ್ಧಿಯ ದೃಷ್ಟಿ ಯೆಡೆಗೆ ಪ್ರಧಾನಿ ಅವರ ಮಂಗಳೂರಿನ ಕಾರ್ಯಕ್ರಮ ಸಾಕ್ಷಿಯಾಯಿತು. ಮೋದಿ ಅವರು ತಮ್ಮ ಭಾಷಣದಲ್ಲಿ ಕೆಳ ಮಟ್ಟದ ರಾಜಕಾರಣದ ಮಾತು ಗಳನ್ನಾಡಲಿಲ್ಲ. ಬದಲಾಗಿ ಭವಿಷ್ಯದ ಭಾರತದ ನಿರ್ಮಾಣದ ಬಗ್ಗೆ ಮಾತ ನಾಡಿದ್ದರು. ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ ಕಲ್ಪನೆ ಅವರದ್ದು. ಮೋದಿ ಕಾರ್ಯಕ್ರಮದಿಂದ ಜಿಲ್ಲೆಯ ಜನರಿಗೆ
ಸ್ವಯಂಸ್ಫೂರ್ತಿ ಬಂದಿದೆ. ಮಂಗಳೂರಿ ನಲ್ಲಿ ನಡೆಯುವ ರ್ಯಾಲಿಗಳಿಗೆ ಸಾಮಾನ್ಯ ವಾಗಿ ನಗರವಾಸಿಗಳು ಬರುವುದಿಲ್ಲ. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮೋದಿ ನಾಯ ಕತ್ವದ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ. ಜಾತಿ ರಾಜಕಾರಣವನ್ನು ಒಡೆದು ರಾಷ್ಟ್ರನಿರ್ಮಾಣ ಸಂದೇಶ ಮೋದಿ ಅವರ ರ್ಯಾಲಿಯಿಂದ ಹೊಮ್ಮಿದೆ ಎಂಬುದು ಮಾಜಿ ವಿಧಾನಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್‌ರ ಅಭಿಪ್ರಾಯ.

Advertisement

ಪ್ರಧಾನಿ ಭೇಟಿಯು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಶಕ್ತಿಯನ್ನು ತುಂಬಿದೆ. ಅವರ ಮಾತುಗಳು ಜನರನ್ನು ಮೋಡಿ ಮಾಡಿವೆ. ಅವರು ಮತ್ತೂಮ್ಮೆ ಪ್ರಧಾನಿ ಆಗುವುದರಲ್ಲಿ ಸಂಶಯವಿಲ್ಲ. ಮೋದಿ ಅವರು ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲ ಅವರ ಮಾತು ಕೇಳಲು ಬರುವ ಜನರ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. ಎ.13ರ ಕಾರ್ಯಕ್ರಮ ಅದ್ಭುತ. ದಾಖಲೆ ಸಂಖ್ಯೆಯ ಜನ ಸೇರಿದ್ದರು.

ದಕ್ಷಿಣಕನ್ನಡ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ, ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು ಗೆಲ್ಲುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದವರು ಶಾಸಕರಾದ ರಾಜೇಶ್‌ ನಾಯ್ಕ.

ಮಾಜಿ ವಿಧಾನಪರಿಷತ್‌ ಸದಸ್ಯ ಮೋನಪ್ಪ ಭಂಡಾರಿ ಪ್ರತಿಕ್ರಿಯಿಸುತ್ತಾ, ನೆಹರೂ ಮೈದಾನದಲ್ಲಿ ಶನಿವಾರ ನಡೆದ ಮೋದಿ ರ್ಯಾಲಿಗೆ ಆಗಮಿಸಿದ ಜನರನ್ನು ನೋಡಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ ಎಂಬ ಭರವಸೆ ಬಲವಾಗಿದೆ. ಪ್ರಧಾನಿ ಅವರು ಮೀನುಗಾರರಿಗೆ ನೀಡಿರುವ ಭರವಸೆ ಖಂಡಿತ ಈಡೇರಲಿದೆ ಎಂದರು.

ಮೋದಿ ಅವರ ಭೇಟಿ ಪಕ್ಷ, ಕಾರ್ಯಕರ್ತರು ಹಾಗೂ ಮತ ದಾರರಲ್ಲಿ ಪ್ರೇರಣೆ, ಉಲ್ಲಾಸವನ್ನು ಮೂಡಿಸಿದೆ. ಇಂದು ನಾನು ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಜನರು ಮೋದಿ ಆಗಮನದ ಬಗ್ಗೆ ಉಲ್ಲೇಖ ಮಾಡುತ್ತಿದ್ದಾರೆ. ಈ ಬಾರಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವುದು ಖಂಡಿತ ಎಂದು ಹೇಳಿದ್ದಾರೆ ಶಾಸಕ ವೇದವ್ಯಾಸ ಕಾಮತ್‌.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಹೊಸ ಹುರುಪು
ಮೋದಿ ಭೇಟಿಯ ಎಫೆಕ್ಟ್ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೇಲೂ ಬೀಸಿದೆ. ಅದನ್ನು ಸ್ಪಷ್ಟ ಮಾತುಗಳಲ್ಲಿ ವಿವರಿಸಿದ ಬಿಜೆಪಿ ಹಿರಿಯ ನಾಯಕ ಎಂ. ಸೋಮಶೇಖರ ಭಟ್‌, ಪ್ರಧಾನಿ ಮೋದಿಯವರ ಭೇಟಿಯಿಂದ ಬಿಜೆಪಿ ಕಾರ್ಯಕರ್ತರ ಮನೆ ಮನೆ ಪ್ರಚಾರಕ್ಕೆ ಮತ್ತಷ್ಟು ಹುರುಪು ತುಂಬಿದಂತಾಗಿದೆ ಎಂದಿದ್ದಾರೆ.

“ನರೇಂದ್ರ ಮೋದಿಯವರ ಭೇಟಿ ಪರಿಣಾಮ ಬಿಜೆಪಿಯವರಲ್ಲಿ ಹೊಸ ಆವೇಶ ಕಂಡುಬಂದಿದೆ. ಇಂದು ರವಿವಾರವೂ ಆದ ಕಾರಣ ಎಲ್ಲ ಬೂತುಗಳಲ್ಲಿ 20-25-30 ಕಾರ್ಯಕರ್ತರು ಮನೆಮನೆಗಳಿಗೆ ಭೇಟಿ ನೀಡಿ ಪ್ರಚಾರ ಮಾಡಿದರು.ಯುವತಿಯರು ಮತ್ತು ಯುವಕರು ಉತ್ಸಾಹದ ಭರದಲ್ಲಿ ಮೋದಿ, ಮೋದಿ, ಮೋದಿ ಎಂದು ಉದ್ಗರಿಸುತ್ತ ಪ್ರಚಾರ ಮಾಡುವುದು ಕಂಡುಬಂದಿತು. ಉತ್ತಮ ಪ್ರತಿಸ್ಪಂದನ ಜನರಿಂದ ತೋರಿಬರುತ್ತಿದೆ. ಇದು ಮತಗಳಾಗಿಯೂ ಪರಿವರ್ತನೆಯಾಗುತ್ತದೆಂಬ ಆಶಯ ನನ್ನದು’ ಎಂದಿದ್ದಾರೆ.

ಮಂಗಳೂರಿನ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಸಹ, ಪ್ರಧಾನಿ ಭೇಟಿಯಿಂದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಲು ಕಾರಣವಾಗಿದೆ. ಅವರ ಭಾಷಣಕ್ಕೆ ಅಪಾರ ಜನಸ್ಪಂದನ ವ್ಯಕ್ತವಾಗಿದ್ದು, ಹೊಸ ವಿಶ್ವಾಸ ಮೂಡಿದೆ. 1861 ಬೂತ್‌ಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದು, ಬಿಜೆಪಿ ಪಕ್ಷ ಕರಾವಳಿ ಭಾಗದಲ್ಲಿ ದಾಖಲೆಯ ಅಂತರದಲ್ಲಿ ಜಯಗಳಿಸಲಿದೆ. ಪ್ರಧಾನಿಯ 5 ವರ್ಷದ ಅಭಿವೃದ್ಧಿ ಕರಾವಳಿ ಜನರ ಮನಗೆದ್ದಿದೆ ಎಂಬುವುದಕ್ಕೆ ನೆರೆದ ಮೋದಿ ಅಭಿಮಾನಿಗಳೇ ಸಾಕ್ಷಿ ಎಂದು ತಿಳಿಸಿದ್ದಾರೆ.

ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ್‌ ಹೆಗ್ಡೆ, ಮಂಗಳೂರಿನಲ್ಲಿ ನಡೆದ ಮೋದಿ ಕಾರ್ಯಕ್ರಮದಿಂದ ಕರಾವಳಿಯುದ್ದಕ್ಕೂ ಮೋದಿ ಹವಾ ಹರಡಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಗಿಂತ ಈ ಬಾರಿ ಮೋದಿಯ ಅಲೆ ಅಬ್ಬರ ಜೋರಾಗಿದೆ. ಸಾಮಾನ್ಯ ಕೂಲಿ ಕಾರ್ಮಿಕನಿಂದ ಹಿಡಿದು ಐಟಿ ಉದ್ಯೋಗಿಗಳು ಮೋದಿ ಹವಾದಿಂದ ಪ್ರೇರಿತರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಮಂಗಳೂರು ಭೇಟಿಯ ಅನಂತರ ರಾಷ್ಟ್ರೀಯ ವಿಚಾರಗಳು ಹೆಚ್ಚು ಚರ್ಚಿತವಾಗುತ್ತಿವೆ. ಯುವಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಇದು ಬಿಜೆಪಿಗೆ ಅನುಕೂಲವಾಗಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಲೆಗೆ ಕಾರಣವಾಗಲಿದೆ ಎಂಬುದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರ ಅಭಿಮತ.

Advertisement

Udayavani is now on Telegram. Click here to join our channel and stay updated with the latest news.

Next