Advertisement
ಈ ಮಧ್ಯೆ, ಚಿಂಚೋಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರೆ, ಸಿದ್ದರಾಮಯ್ಯನವರು ತಾಕತ್ತಿದ್ದರೆ ತಾವು ಸಿಎಂ ಆಗ್ತೀನೆ ಎಂದು ಬಹಿರಂಗವಾಗಿ ಹೇಳಲಿ ಎಂದು ಈಶ್ವರಪ್ಪನವರಿಗೆ ಸವಾಲು ಹಾಕಿದ್ದಾರೆ. ಇದೇ ವೇಳೆ, ಬಿಜೆಪಿ ನಾಯಕರೂ ಕಾಂಗ್ರೆಸ್ ವಿರುದ್ಧ ಟೀಕೆಗಳ ಸುರಿಮಳೆ ಸುರಿಸಿದ್ದಾರೆ. ಉಭಯ ಕ್ಷೇತ್ರಗಳಲ್ಲಿ ಭಾನುವಾರ ನಡೆದ ರಾಜಕೀಯ ವಾಕ್ಸಮರದ ಸಣ್ಣ ಝಲಕ್ ಇಲ್ಲಿದೆ.
ಚಿಂಚೋಳಿ: “ಅಬ್ ಏಕ್ ಬಾರ್ ಮೋದಿ ಸರ್ಕಾರ್” ಎಂದು ತನಗೆ ತಾನೇ ಹೇಳಿಕೊಳ್ಳುವ ಮೋದಿ, ಕಾಂಗ್ರೆಸ್ ಪಕ್ಷ 40 ಸೀಟು ಗೆಲ್ಲುತ್ತದೆಯೇ ಎಂದು ಟೀಕಿಸುತ್ತಾನೆ. ಒಂದು ವೇಳೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅದಕ್ಕಿಂತ ಜಾಸ್ತಿ ಸೀಟು ಬಂದರೆ ದಿಲ್ಲಿಯ ವಿಜಯಾ ಚೌಕ್‌ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ?’. ಇದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಪರಿಯಿದು. ಕಾಳಗಿ ತಾಲೂಕಿನ ಕೊಡದೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದರು. “ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದ ಕುರಿತು ಟೀಕಿಸುತ್ತಿರುವ ಮೋದಿ ಸ್ವಾತಂತ್ರ ಬಂದಾಗ ಇನ್ನೂ ಹುಟ್ಟೇ ಇರಲಿಲ್ಲ. “ಅಬ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ತನಗೆ ತಾನೇ ಹೇಳಿಕೊಳ್ಳುವ ಮೋದಿ, ಕಾಂಗ್ರೆಸ್ ಪಕ್ಷ 40 ಸೀಟು ಗೆಲ್ಲುತ್ತದೆಯೇ ಎಂದು ಟೀಕಿಸುತ್ತಾನೆ. ಒಂದು ವೇಳೆ, ಅದಕ್ಕಿಂತ ಜಾಸ್ತಿ ಸೀಟು ಬಂದರೆ ದಿಲ್ಲಿಯ ವಿಜಯಾ ಚೌಕ್‌ನಲ್ಲಿ ಮೋದಿ ನೇಣು ಹಾಕಿಕೊಳ್ಳುತ್ತಾನಾ?’ ಎಂದು ಕಿಡಿ ಕಾರಿದರು.
Related Articles
Advertisement
ಬಿಜೆಪಿಗೆ ಸೇಲ್ ಆದ ಜಾಧವ: ಇದೇ ವೇಳೆ, ಜಾಧವ ವಿರುದ್ಧವೂ ಏಕವಚನದಲ್ಲೇ ಟೀಕಾಪ್ರಹಾರ ನಡೆಸಿದ ಖರ್ಗೆ, “ಇಂತಹ ಮೋದಿಯ ಪಕ್ಷಕ್ಕೆ ಜಾಧವ ಸೇರಿದ್ದಾನೆ. ಅವನು ಸೇಲ್ ಆಗಿ ಓಡಿ ಹೋಗಿದ್ದಾನೆ. “ನನ್ನ ರಕ್ತದ ಪ್ರತಿಯೊಂದು ಕಣದಲ್ಲಿಯೂ ಕಾಂಗ್ರೆಸ್‌ನ ರಕ್ತ ಹರಿಯುತ್ತಿದೆ. ನಮ್ಮ ಕುಟುಂಬವೇ ಕಾಂಗ್ರೆಸ್. ನಾವು ಎಂದಿಗೂ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಸೇವಾಲಾಲ ಮಹಾರಾಜರ ಮೇಲೆ ಆಣೆ, ಪ್ರಮಾಣ ಮಾಡಿ, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಓಡಿ ಹೋದ.
ಕಾಂಗ್ರೆಸ್ ಪಕ್ಷದಿಂದ ನಿನಗೇನು ಅನ್ಯಾಯ ಆಗಿದೆ?. ಏನಾದರೂ ತೊಂದರೆ ಇದ್ದರೆ ಪಕ್ಷದ ವರಿಷ್ಠರ ಎದುರು, ಇಲ್ಲವೇ ನನ್ನ ಹತ್ತಿರ ಹೇಳಿಕೊಳ್ಳಬಹುದಿತ್ತಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತನ್ನನ್ನು ತಾನು ಬಿಜೆಪಿಗೆ ಮಾರಾಟ ಮಾಡಿಕೊಂಡ ಉಮೇಶ ಜಾಧವ ಚಿಂಚೋಳಿ ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾನೆ. ಈಗ ಅವನ ಮಗನನ್ನು ಉಪಚುನಾವಣೆಗೆ ನಿಲ್ಲಿಸಿದ್ದಾನೆ. ಈತನಿಗೆ ತಕ್ಕ ಪಾಠ ಕಲಿಸಬೇಕಾದರೆ ಸೋಲಿನ ರುಚಿ ಉಣಿಸಿ’ ಎಂದರು.