Advertisement

ಚೀನದ “ಶೌಚಾಲಯ ಕ್ರಾಂತಿ’ಗೆ ಮೋದಿಯ ಸ್ವತ್ಛ ಭಾರತ ಸ್ಫೂರ್ತಿ

06:30 AM Nov 30, 2017 | Team Udayavani |

ಬೀಜಿಂಗ್‌: ಪ್ರಧಾನಿ ನರೇಂದ್ರ ಮೋದಿ ಅವರ “ಸ್ವತ್ಛ ಭಾರತ’ದ ಕರೆ ನೆರೆಯ ಚೀನದವರೆಗೂ ತಲುಪಿದೆ!
ಆಶ್ಚರ್ಯವಾದರೂ ಇದು ಸತ್ಯ. ಪ್ರಧಾನಿ ಮೋದಿ ಅವರಿಂದಲೇ ಸ್ಫೂರ್ತಿ ಪಡೆದು ಈಗ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌  “ಸ್ವತ್ಛ ಚೀನ’ಕ್ಕಾಗಿ ಪಣ ತೊಟ್ಟಿದ್ದಾರೆ. ಚೀನದಾದ್ಯಂತ ಸ್ವತ್ಛ ಶೌಚಾ ಲಯ ಸ್ಥಾಪಿಸುವಂತೆ ಕರೆ ನೀಡಿದ್ದಾರೆ.

Advertisement

ಪ್ರಧಾನಿ ಹುದ್ದೆಗೇರಿದ ಅನಂತರ ಮೋದಿ ಅವರು ಆರಂಭಿಸಿದ ಅತಿದೊಡ್ಡ ಆಂದೋಲನವೇ “ಸ್ವತ್ಛ ಭಾರತ’. 2014ರಲ್ಲಿ ಈ ಯೋಜನೆ ಯನ್ನು ಘೋಷಿಸಿದ ಮೋದಿ, ತಾವು ಎಲ್ಲೇ ಹೋದರೂ ಭಾಷಣದಲ್ಲಿ ಸ್ವತ್ಛತೆಯ ಕುರಿತು ಒಂದೆರಡು ವಿಚಾರ ಪ್ರಸ್ತಾವಿಸದೇ ಇರುತ್ತಿರಲಿಲ್ಲ. ದೇವಾಲಯಗಳಿಗಿಂತಲೂ ಶೌಚಾಲಯ ಗಳ ಅಗತ್ಯತೆ ಹೆಚ್ಚಿದೆ ಎಂಬುದನ್ನೂ ಒತ್ತಿಹೇಳಿ ದ್ದರು. ಶೌಚಾಲಯಗಳನ್ನು ನಿರ್ಮಿಸಲು ಸರಕಾರದಿಂದಲೇ ಹಣಕಾಸಿನ ನೆರವು ನೀಡುವುದರಿಂದ ಹಿಡಿದು, ತ್ಯಾಜ್ಯ ಸಂಸ್ಕರಣೆ, ತ್ಯಾಜ್ಯದಿಂದ ರಸಗೊಬ್ಬರ ಉತ್ಪಾದನೆ ಅಥವಾ ವಿದ್ಯುತ್‌ ಉತ್ಪಾದನೆಯವರೆಗೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟರು. ಅದರ ಜತೆಗೆ ಬಯಲು ಶೌಚ ಮುಕ್ತ ಭಾರತ ನಿರ್ಮಾಣಕ್ಕೂ ಮುಂದಾದರು.

ಜಿನ್‌ಪಿಂಗ್‌ಗೂ ಮೋದಿ ಮಾದರಿ: ಪ್ರಧಾನಿ ಮೋದಿ ಅವರ ಸ್ವತ್ಛ ಭಾರತ ಆಂದೋಲನದಿಂದ ಪ್ರೇರಣೆಗೊಂಡು 2015ರಲ್ಲಿ ಚೀನ ಪ್ರಧಾನಿಯೂ ಪ್ರವಾಸಿ ತಾಣಗಳಲ್ಲಿ ಟಾಯ್ಲೆಟ್‌ ನಿರ್ಮಿಸುವಂಥ “ಶೌಚಾಲಯ ಕ್ರಾಂತಿ’ಗೆ ಕರೆಕೊಟ್ಟರು. ಈಗ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಇಡೀ ದೇಶದಲ್ಲೇ ಟಾಯ್ಲೆಟ್‌ ಕ್ರಾಂತಿ ನಡೆಯಬೇಕು ಎಂದು ಜನತೆಗೆ ಕರೆನೀಡಿದ್ದಾರೆ. “ಟಾಯ್ಲೆಟ್‌ ಎನ್ನುವುದು ಸಣ್ಣ ವಿಚಾರವಲ್ಲ. ನಾಗರಿಕ ಸಮಾಜವನ್ನು ನಿರ್ಮಿಸುವಂಥ ಪ್ರಮುಖ ಅಂಶ’ ಎಂದಿದ್ದಾರೆ ಜಿನ್‌ಪಿಂಗ್‌.

ಚೀನದ ಗ್ರಾಮೀಣ ಪ್ರದೇಶಗಳಲ್ಲಿ ಟಾಯ್ಲೆಟ್‌ನದ್ದೇ ಸಮಸ್ಯೆ. ಕೆಲವರು ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ತಾತ್ಕಾಲಿಕ ಟೆಂಟ್‌ ಥರ ಶೌಚಾಲಯ ನಿರ್ಮಿಸಿಕೊಂಡಿದ್ದರೆ, ಇನ್ನು ಕೆಲವರು ಸಣ್ಣ ಗುಂಡಿ ತೋಡಿ ಅಲ್ಲೇ ಶೌಚಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನು ಪ್ರವಾಸಿತಾಣಗಳಲ್ಲಂತೂ ಸೂಕ್ತ ಟಾಯ್ಲೆಟ್‌ಗಳಿಲ್ಲ, ಇದ್ದರೂ ಸ್ವತ್ಛವಾಗಿಲ್ಲ ಎಂಬ ದೂರುಗಳೇ ಹೆಚ್ಚು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಮೋದಿ ಮಾದರಿಯನ್ನು ಅನುಸರಿಸ ಹೊರಟಿದ್ದಾರೆ ಜಿನ್‌ಪಿಂಗ್‌.

ಅದರಂತೆ, ಈ ವರ್ಷದ ಅಕ್ಟೋ ಬರ್‌ ಅಂತ್ಯದವರೆಗೆ, ಚೀನದ ಪ್ರವಾಸಿ ತಾಣಗಳಲ್ಲಿ 68 ಸಾವಿರ ಶೌಚಾಲಯ ಗಳನ್ನು ನಿರ್ಮಿಸಲಾಗಿದೆ. ಇದು ಚೀನ ಹಾಕಿಕೊಂಡಿದ್ದ ಗುರಿಗಿಂತ ಶೇ.19.3ರಷ್ಟು ಹೆಚ್ಚು. 2018ರಿಂದ 2020ರ ಅವಧಿ ಯಲ್ಲಿ ಗ್ರಾಮೀಣ ಪ್ರದೇಶಗಳ ಪ್ರವಾಸಿ ಸ್ಥಳಗಳಲ್ಲಿ ಇನ್ನೂ 64 ಸಾವಿರ ಟಾಯ್ಲೆಟ್‌ಗಳನ್ನು ನಿರ್ಮಿಸುವ ಅಥವಾ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಚೀನ ರಾಷ್ಟ್ರೀಯ ಪ್ರವಾಸೋದ್ಯಮ ಆಡಳಿತವು ಹಾಕಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next