Advertisement
ಕೆಲ ದಿನಗಳ ಹಿಂದೆ ಎಐಎಡಿಎಂಕೆ ಸ್ಥಳೀಯ ನಾಯಕರೊಬ್ಬರ ಪರ ಹಾಕಲಾಗಿದ್ದ ಪ್ಲೆಕ್ಸ್ ಬಿದ್ದು ಮಹಿಳಾ ಟೆಕ್ಕಿ ಅಸುನೀಗಿದ್ದರು. ಈ ಪ್ರಕರಣ ವಿವಾದಕ್ಕೆ ಒಳಗಾದ ಬಳಿಕ ಸರಕಾರ ಕೋರ್ಟ್ ಮೊರೆ ಹೋಗಿದೆ. ನಗರಾಭಿವೃದ್ಧಿ ಆಯುಕ್ತ ಕೆ. ಭಾಸ್ಕರನ್ ಅರ್ಜಿ ಸಲ್ಲಿಸಿದ್ದು “ಎರಡು ರಾಷ್ಟ್ರಗಳ ನಾಯಕರು ಭೇಟಿಗಾಗಿ ಆಗಮಿಸುತ್ತಿದ್ದಾರೆ. ಸಂಪ್ರದಾಯ ಪ್ರಕಾರ ವಿದೇಶಾಂಗ ಸಚಿವಾಲಯ ಬ್ಯಾನರ್‌ಗಳನ್ನು ಕಟ್ಟಿ ಸ್ವಾಗತ ಮಾಡಬೇಕಿದೆ. ಅದರ ಜತೆಗೆ ರಾಜ್ಯ ಸರಕಾರದ ಹೊಣೆಯೂ ಇದೆ. ಹೀಗಾಗಿ, ಬ್ಯಾನರ್‌ಗಳಿಗೆ ಅನುಮತಿ ನೀಡಬೇಕು’ ಎಂದು ಅರಿಕೆ ಮಾಡಿಕೊಳ್ಳ ಲಾಗಿದೆ. ಅದರಿಂದ ಸಾರ್ವಜನಿಕರಿಗೆ ತೊಂದ ರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದೂ ಸರಕಾರ ಹೇಳಿಕೊಂಡಿದೆ.
ಈ ನಡುವೆ ಮಹಾ ಬಲಿಪುರಂನಲ್ಲಿ ನಡೆಯಲಿರುವ ಅನೌಪ ಚಾರಿಕ ಸಭೆಯ ಬಗೆಗಿನ ಸಿದ್ಧತೆಗಳನ್ನು ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್‌ಸೆಲ್ವಂ ಬುಧವಾರ ಪರಿಶೀಲನೆ ನಡೆಸಿದರು.