ಹೊಸದಿಲ್ಲಿ: ಎರಡನೇ ವಿಶ್ವಯುದ್ಧದ ನಂತರ ವಿಶ್ವ ಎದುರಿಸುತ್ತಿರುವ ಸವಾಲು ಈ ಕೋವಿಡ್ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
15ನೇ ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ಮಾನವ ಇತಿಹಾಸದಲ್ಲಿ ಮಹತ್ವದ ತಿರುವು ಎಂದು ಅಭಿಪ್ರಾಯಪಟ್ಟರು.
ಕೋವಿಡ್ ನಂತರದ ಜಗತ್ತಿನಲ್ಲಿ ‘ವರ್ಕ್ ಫ್ರಮ್ ಎನಿವೇರ್’ ಹೊಸ ಸಾಮಾನ್ಯವಾಗಿದೆ. ಜಿ 20 ವರ್ಚುವಲ್ ಸೆಕ್ರೆಟರಿಯೇಟ್ ರಚಿಸುವಂತೆ ಪಿಎಂ ಮೋದಿ ಹೇಳಿದರು.
ಇದನ್ನೂ ಓದಿ:ಚತುರ್ಮುಖೀ ಸಂಪುಟ! ನಾಲ್ವರ ಸುತ್ತ ಗಿರಕಿ ಹೊಡೆಯುತ್ತಿರುವ ಪುನಾರಚನೆ ಸಂಕಟ
ಜಿ 20 ಶೃಂಗಸಭೆ ಸುಗಮವಾಗಿ ಸಾಗಲು ನಾವು ಡಿಜಿಟಲ್ ಸೌಲಭ್ಯವನ್ನು ಭಾರತದ ಐಟಿ ತಂತ್ರಜ್ಞಾನಗಳ ಮೂಲಕ ಒದಗಿಸಿದ್ದೇವೆ. ಕೋವಿಡ್-19 ಸಾಂಕ್ರಮಿಕ ಸಂಕಷ್ಟದಿಂದ ಹೊರಬರಲು ಸಾಮೂಹಿಕ ಪ್ರಯತ್ನ ನಡೆಸಬೇಕು. ಇದರಿಂದ ನಮ್ಮ ಸಮಾಜಕ್ಕೆ ಕೂಡ ಸ್ಫೂರ್ತಿ ದೊರಕುತ್ತದೆ. ಭೂಮಿಯ ಮೇಲೆ ಬಲವಾದ ನಂಬಿಕೆ ಆರೋಗ್ಯಕರ ಮತ್ತು ಸುಖಜೀವನ ನಡೆಸಲು ಸಾಧ್ಯವಿದೆ ಎಂದಿದ್ದಾರೆ.
ಇದೇ ವೇಳೆ ಕೋವಿಡೋತ್ತರ ಜಗತ್ತಿಗಾಗಿ ಹೊಸ ಗ್ಲೋಬಲ್ ಇಂಡೆಕ್ಸ್ ನ್ನು ಅಭಿವೃದ್ಧಿಪಡಿಸುವುದಕ್ಕೂ ಮೋದಿ ಸಲಹೆ ನೀಡಿದ್ದು, ವ್ಯಾಪಕ ಪ್ರತಿಭೆಗಳ ಸೃಷ್ಟಿ, ಸಮಾಜದ ಎಲ್ಲಾ ಭಾಗಗಳಿಗೂ ತಂತ್ರಜ್ಞಾನ ತಲುಪುವಂತೆ ಮಾಡುವ ಬಗ್ಗೆ ಮಾತನಾಡಿದ್ದು, ಇವುಗಳ ಆಧಾರದಲ್ಲಿ ಹೊಸ ಜಗತ್ತಿಗೆ ಜಿ-20 ಅಡಿಪಾಯ ಹಾಕಬಹುದೆಂದು ಹೇಳಿದ್ದಾರೆ.