Advertisement

ಬಡವರಿಗೆ ಆರೋಗ್ಯ ಸೌಲಭ್ಯ

06:00 AM Jun 30, 2018 | Team Udayavani |

ನವದೆಹಲಿ: ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮಧ್ಯಮ ಹಾಗೂ ಬಡವರಿಗಾಗಿ ಆಧುನಿಕ ಆರೋಗ್ಯ ಸೇವೆ ಸೌಲಭ್ಯವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ವೃದ್ಧರಿ ಗಾಗಿನ ರಾಷ್ಟ್ರೀಯ ಕೇಂದ್ರದ ಸ್ಥಾಪನೆಗೆ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಆದ್ಯತೆ ನೀಡಿದೆೆ. ಮಧ್ಯಮ ಹಾಗೂ ಬಡ ವರ್ಗವನ್ನು ಗಮನದಲ್ಲಿಟ್ಟುಕೊಂಡು ಆಯು ಷ್ಮಾನ್‌ ಭಾರತ ಎಂಬ ಆರೋಗ್ಯ ವಿಮೆ ಯೋಜನೆಯನ್ನು ಸರ್ಕಾರ ಅಭಿವೃದ್ಧಿಪಡಿಸು ತ್ತಿದ್ದು, ಶೀಘ್ರದಲ್ಲೇ ಜಾರಿ ಘೋಷಣೆ ಮಾಡಲಿದೆ ಎಂದಿದ್ದಾರೆ.

Advertisement

ಸಬ್ಸಿಡಿ ತ್ಯಾಗ: ಕಳೆದ 9 ತಿಂಗಳಿನಲ್ಲಿ 42 ಲಕ್ಷ ಹಿರಿಯ ನಾಗರಿಕರು ಸ್ವ ಇಚ್ಛೆಯಿಂದ ರೈಲ್ವೆ ರಿಯಾಯಿತಿಗಳನ್ನು ತ್ಯಜಿಸಿದ್ದಾರೆ. ಅಲ್ಲದೆ 1.25 ಕೋಟಿ ಕುಟುಂಬಗಳು ಗ್ಯಾಸ್‌ ಸಬ್ಸಿಡಿಯನ್ನು ತೊರೆದಿವೆ ಎಂದು ಮೋದಿ ಹೇಳಿದ್ದಾರೆ. ಪ್ರಾಮಾಣಿಕತೆಯ ವಾತಾವರಣವೊಂದನ್ನು ದೇಶದಲ್ಲಿ ರೂಪಿಸಿದ್ದೇವೆ. ತಿಂಗಳಿಗೆ ಒಮ್ಮೆ ಒಬ್ಬ ಗರ್ಭಿಣಿಗಾದರೂ ಉಚಿತ ಚಿಕಿತ್ಸೆ ನೀಡಿದ ಎಂದು ವೈದ್ಯಕೀಯ ವಲಯಕ್ಕೆ ಕೇಳಿಕೊಂಡಿದ್ದೆ. ಈವರೆಗೆ 1.25 ಕೋಟಿ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅಟಲ್‌ ಆರೋಗ್ಯ ವಿಚಾರಿಸಿದ ಮೋದಿ: ಏಮ್ಸ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆರೋಗ್ಯ ವಿಚಾರಿಸಿದರು. ಕಾರ್ಯಕ್ರಮದ ನಂತರ ವಾಜಪೇಯಿ ದಾಖಲಾಗಿರುವ ವಾರ್ಡ್‌ಗೆ ತೆರಳಿ 10-15 ನಿಮಿಷಗಳವರೆಗೆ ಸಮಯ ವ್ಯಯಿಸಿದರು. ಜೂ.11 ರಂದು ಏಮ್ಸ್‌ಗೆ ದಾಖಲಾಗಿರುವ ವಾಜಪೇಯಿ, ಮೂತ್ರಕೋಶ ನಾಳ ಸೋಂಕು, ಹೃದಯ ರಕ್ತನಾಳ ಕಟ್ಟಿಕೊಳ್ಳುವಿಕೆ  ಸೇರಿದಂತೆ ಹಲವು ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎವರೆಸ್ಟ್‌ ಏರಿದ ವಿದ್ಯಾರ್ಥಿಗಳ ಭೇಟಿ: ಕಳೆದ ಮೇನಲ್ಲಿ ಮೌಂಟ್‌ ಎವರೆಸ್ಟ್‌ ಏರಿದ ಮಹಾರಾಷ್ಟ್ರದ 10 ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ಎಲ್ಲ ವಿದ್ಯಾರ್ಥಿಗಳನ್ನೂ ಮೋದಿ ಶಾಲು ಹೊದಿಸಿ ಸನ್ಮಾನಿಸಿದರು. ಪರ್ವತ ಏರಿದ ಅನುಭವವನ್ನು ಅವರು ಹಂಚಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next