Advertisement

ತೈಲ ಆಮದಿಗೆ ಕಡಿವಾಣ

07:30 AM Aug 11, 2018 | Team Udayavani |

ಹೊಸದಿಲ್ಲಿ: ನಾಲ್ಕು ವರ್ಷಗಳ ಅವಧಿಯಲ್ಲಿ ಎಥನಾಲ್‌ ಉತ್ಪಾದನೆಯ ಪ್ರಮಾಣವನ್ನು ಮೂರು ಪಟ್ಟು ಹೆಚ್ಚಿಸಿ, ತೈಲ ಆಮದಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿ ದ್ದಾರೆ. ಇದರಿಂದ ಬರೋಬ್ಬರಿ 12,000 ಕೋಟಿ ರೂ. ಮೌಲ್ಯದ ತೈಲ ಆಮದು ಕಡಿತಗೊಳಿಸ ಬಹುದು. ಅಲ್ಲದೆ, ಕಬ್ಬು ಸಂಸ್ಕರಣೆ ಯಿಂದ ಸಾಧ್ಯವಾಗುವ ಎಥನಾಲ್‌ ಅನ್ನು ಪೆಟ್ರೋಲ್‌ ಜತೆ ಮಿಶ್ರಣ ಮಾಡಿ ಬಳಕೆ ಮಾಡುವ ಉದ್ದೇಶ ಹೊಂದಿದ್ದಾರೆ. ಇದರಿಂದ ಕಬ್ಬು ಬೆಳೆಗೂ ಉತ್ತೇಜನ ಸಿಗಲಿದೆ ಎನ್ನುವ ಲೆಕ್ಕಾಚಾರ ಪ್ರಧಾನಿ ಮೋದಿ ಅವರದ್ದಾಗಿದೆ.

Advertisement

ವಿಶ್ವ ಜೈವಿಕ ಇಂಧನ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ 12 ಜೈವಿಕ ಇಂಧನ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆ ಇದ್ದು, ಇದಕ್ಕಾಗಿ 10,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಈ ಮೂಲಕ ನಗರ ಪ್ರದೇಶಗಳಲ್ಲಿನ ತ್ಯಾಜ್ಯ ಹಾಗೂ ವ್ಯವಸಾಯ ಕ್ಷೇತ್ರದಲ್ಲಿನ ತ್ಯಾಜ್ಯಗಳಿಂದ ಇಂಧನ ಉತ್ಪಾದಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜೈವಿಕ ಇಂಧನಗಳ ಬಳಕೆ, ಉತ್ಪಾದನೆಯಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗಲಿದೆ. ಈ ಮೂಲಕ ಶುದ್ಧ ಪರಿಸರವನ್ನೂ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ರೈತರಿಗೆ ಹೆಚ್ಚುವರಿ ಆದಾಯವೂ ಬರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ ಎಂದಿದ್ದಾರೆ ಪ್ರಧಾನಿ ಮೋದಿ.

Advertisement

Udayavani is now on Telegram. Click here to join our channel and stay updated with the latest news.

Next