Advertisement
ಎ. 9ರಂದು ಚಿತ್ರದುರ್ಗ, ಮೈಸೂರಿನಲ್ಲಿ ಪ್ರಚಾರ ಭಾಷಣ ಮಾಡಿ ಕೊಯಮತ್ತೂರಿಗೆ ತೆರಳುವರು. ಎ.12ರಂದು ಗಂಗಾವತಿ ರ‍್ಯಾಲಿ ಬಳಿಕ ಕೋಯಿಕ್ಕೋಡ್‌ಗೆ ತೆರಳುವರು. ಎ.13ರಂದು ಮಂಗಳೂರು ಮತ್ತು ಬೆಂಗಳೂರಿನಲ್ಲಿ ರ್ಯಾಲಿ ನಡೆಸುವರು.
ರಾಜ್ಯದ ಮೈತ್ರಿ ಸರಕಾರದಲ್ಲಿ ಪರಸ್ಪರ ಅಪನಂಬಿಕೆ, ಒಳಜಗಳ ತಾರಕಕ್ಕೇರಿದ್ದು, ಚುನಾವಣೆ ಬಳಿಕ ಪತನವಾಗಲಿದೆ ಎಂದು ಆರ್. ಅಶೋಕ್ ಭವಿಷ್ಯ ನುಡಿದರು.
ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡ ಸಂವಾದ ಸಭೆಗಳಲ್ಲಿ ಮೋದಿ ಘೋಷಣೆ ಕೂಗಿದವರ ಮೇಲೆ ಕೇಸು ದಾಖಲಿಸಲಾಯಿತು. ಹಾಸನದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಪುಟ್ಟೇಗೌಡ ಮನೆಯಲ್ಲಿ ನಡೆದ ಸಭೆಯಲ್ಲಿ ಮತ್ತು ಶುಕ್ರವಾರ ಮೈಸೂರಿನ ಜೆಡಿಎಸ್ ಸಭೆಯಲ್ಲಿ ಸಚಿವರ ಎದುರೇ ಮೋದಿ ಘೋಷಣೆ ಕೇಳಿ ಬಂದಿದೆ. “ಮೋದಿ’ ಘೋಷಣೆ ಸರ್ವವ್ಯಾಪಿಯಾಗಿದೆ ಎಂದರು.
Related Articles
ಮಂಡ್ಯದಲ್ಲಿ ಕಾಂಗ್ರೆಸ್‌ನವರು ಜೆಡಿಎಸ್‌ನ್ನು ಸೋಲಿಸಲು ಪಣ ತೊಟ್ಟಿ¨ªಾರೆ. ಮಂಡ್ಯದ ಚುನಾವಣ ಪ್ರಚಾರಕ್ಕೆ ಸಿದ್ದರಾಮಯ್ಯ ಬಂದರೆ ಮೂರು ಪೈಸೆಯ ಲಾಭವಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮಂಡ್ಯಕ್ಕೆ ಕಾಲಿಡಬಾರದು ಎಂಬು ದನ್ನು ಸ್ವತಃ ದೇವೇಗೌಡರೇ ಸೂಚ್ಯ ವಾಗಿ ಹೇಳಿದ್ದಾರೆ. ಮೈಸೂರಿನಲ್ಲಿ ಜಿ.ಟಿ. ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿ ಸೋತರೆ ನಾವು ಜವಾಬ್ದಾರರಲ್ಲ ಎನ್ನುವ ಮೂಲಕ ಸೋಲಿನ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ವೀರಪ್ಪ ಮೊಲಿ ಸ್ಪರ್ಧಿಸುತ್ತಿರುವ ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ನವರು ಕಾಂಗ್ರೆಸ್‌ನ್ನು ಬೆಂಬಲಿಸುತ್ತಿಲ್ಲ ಎಂದು ಟೀಕಿಸಿದರು.
Advertisement
ಮುಖ್ಯಮಂತ್ರಿ ಕುಮಾರಸ್ವಾಮಿ ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹಾಗಾಗಿ ಹಣ ಚೆಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಅವರ ಆಪ್ತ ಗುತ್ತಿಗೆದಾರರ ಮನೆ ಯಲ್ಲಿ 11.50 ಕೋಟಿ ರೂ. ಮೊತ್ತವನ್ನು ಐಟಿ ಅಧಿಕಾರಿಗಳು ಪತ್ತೆ ಮಾಡಿರುವುದು ಇದಕ್ಕೆ ನಿದರ್ಶನ ಎಂದರು.
142 ಅಪರಾಧ ಪ್ರಕರಣಗಳನ್ನು ರಾಜ್ಯ ಸರಕಾರ ವಾಪಸ್ ಪಡೆದಿರು ವುದು ಚುನಾವಣೆ ವೇಳೆ ಒಂದುಧರ್ಮವನ್ನು ಓಲೈಸಲು ಮಾಡಿದ ರಾಜಕಾರಣ ಎಂದರು.
ಚಪ್ಪರ ಮುಹೂರ್ತನಗರದ ನೆಹರೂ ಮೈದಾನದಲ್ಲಿ ಎ. 13ರಂದು ನಡೆಯಲಿರುವ ಮೋದಿ ರ್ಯಾಲಿಗೆ ಸಂಬಂಧಿಸಿದ ಚಪ್ಪರ ಮುಹೂರ್ತವನ್ನು ಆರ್. ಅಶೋಕ್ ನೆರವೇರಿಸಿದರು.
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು, ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಪ್ರತಾಪ್‌ಸಿಂಹ ನಾಯಕ್, ಗೋಪಾಲ ಕೃಷ್ಣ ಹೇರಳೆ, ಹರಿಕೃಷ್ಣ ಬಂಟ್ವಾಳ್, ಜಿತೇಂದ್ರ ಕೊಟ್ಟಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಡ್ರಾಮಾ ಕಂಪೆನಿ
ರಾಹುಲ್ ಗಾಂಧಿ ಟೆಂಪಲ್ ರನ್ ಮಾಡುತ್ತಿದ್ದಾರೆ. ಅದರಂತೆ ದ.ಕ. ಕಾಂಗ್ರೆಸ್ ಅಭ್ಯರ್ಥಿಯೂ ಕೇಸರಿ ಶಾಲನ್ನು ಧರಿಸಿ ದೇವಸ್ಥಾನ ಸುತ್ತುತ್ತಿದ್ದಾರೆ. ಕಾಂಗ್ರೆಸ್ ಪಕÒವು ಡ್ರಾಮಾ ಕಂಪೆನಿಯಾಗಿದೆ. ನಾಟಕ, ಯಕ್ಷಗಾನ ಪಾತ್ರದಂತೆ ಕಾಂಗ್ರೆಸ್ ವೇಷ ಹಾಕುತ್ತಿದೆ ಎಂದು ಆರ್. ಅಶೋಕ್ ಟೀಕಿಸಿದರು. ಮಂಡ್ಯ: ಬಿಜೆಪಿ ಪ್ರಚಾರ ನಿರ್ಧಾರ ಆಗಿಲ್ಲ
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ಗೆ ಬೆಂಬಲ ಸೂಚಿಸಿರುವ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಪ್ರಚಾರ ಕೈಗೊಳ್ಳುವ ಬಗ್ಗೆ ತೀರ್ಮಾನವಾಗಿಲ್ಲ. ಹೈವೊಲ್ಟೆàಜ್ ಕಣವಾಗಿರುವ ಮಂಡ್ಯದಲ್ಲಿ ಓರ್ವ ಹೆಣ್ಣುಮಗಳನ್ನು ಸೋಲಿಸಲು ಕೌರವರ ತಂಡ ಪಣತೊಟ್ಟಿದೆ. ಕೊನೆಗೂ ಸತ್ಯಕ್ಕೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.