Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಬಂಡೀಪುರ ಭೇಟಿಗೆ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಟೀಕೆ ಮಾಡುವುದು ಬಿಟ್ಟರೆ ಕಾಂಗ್ರೆಸ್ ನವರಿಗೆ ಏನು ಗೊತ್ತಿದೆ. ಹುಲಿ ಕಾಣಲಿಲ್ಲ ಅಂದರೂ ಒಂದು ಟೀಕೆ. ಅಕಸ್ಮಾತ್ ಹುಲಿ ಬಂದರೂ ಒಂದೇ ಹುಲಿ ಬಂತು ಎಂದು ಟೀಕೆ. ಟೀಕೆಯಲ್ಲೇ ಅವರ ಜೀವನ ಕಳೆದುಕೊಂಡು ಬಿಟ್ಟರು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಶ್ನೆ ಉದ್ಘವವಾಗದು. ಹಾಗಾಗಿಯೇ ಅವರು ಎಲ್ಲರನ್ನು ಟೀಕೆ ಮಾಡುತ್ತಿದ್ದಾರೆ ಎಂದರು.
Related Articles
Advertisement
ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ರಾಜ್ಯದ 224 ಕ್ಷೇತ್ರಕ್ಕೂ ಅಭ್ಯರ್ಥಿ ಹಾಕುತ್ತಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಕ್ಕೂ ಮೂರು- ನಾಲ್ಕು ಜನರ ಹೆಸರು ಕಳುಹಿಸಲಾಗಿದೆ. ನಿನ್ನೆ ಮೊನ್ನೆ ಕೇಂದ್ರದ ನಾಯಕರು, ಚುನಾವಣಾ ಸಮಿತಿ ಕುಳಿತು ಚರ್ಚೆ ಮಾಡಿದ್ದಾರೆ. ಈಗಾಗಲೇ ನಮ್ಮ ನಾಯಕರಾದ ಯಡಿಯೂರಪ್ಪ ಅವರು ಹೇಳಿದ್ದಾರೆ. ಇವತ್ತು ಸಂಜೆ 170-180 ಕ್ಷೇತ್ರಗಳಿಗೆ ಅಭ್ಯರ್ಥಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಯಾವುದೇ ಗೊಂದಲ ಇಲ್ಲದೇ, ಪಕ್ಷದ ಪಟ್ಟಿ ಬಿಡುಗಡೆಯಾಗುತ್ತದೆ. ಕಾರ್ಯಕರ್ತರ ಅಪೇಕ್ಷೆಯಂತೆ ಅಭ್ಯರ್ಥಿ ಹಾಕಲಿದ್ದು, ಪೂರ್ಣ ಬಹುಮತ ಬರುತ್ತದೆ ಎಂದರು.
ಆಯನೂರು ಮಂಜುನಾಥ್ ಕಛೇರಿ ಆರಂಭ ವಿಚಾರವಾಗಿ ಮಾತನಾಡಿ, ಯಾರು ಬೇಡ ಅಂತಾರೆ. ಎಲ್ಲರೂ ಮಾಡ್ಕೋಬಹುದು, ನೀವು ಮಾಡಿಕೊಳ್ಳಿ. ಅಫೀಸ್ ಮಾಡುವುದನ್ನು ತಡೆಯಲು ಆಗುತ್ತದೆಯೇ? ಪ್ರಜಾಪ್ರಭುತ್ವ ಇರುವುದೇ ಅದಕ್ಕೆ ಎಂದರು.