Advertisement

ಮ್ಯಾನ್‌ VS ವೈಲ್ಡ್‌: 1.26 ಲಕ್ಷ ರೂ. ಆದಾಯ

12:56 AM Aug 14, 2019 | mahesh |

ಹೊಸದಿಲ್ಲಿ: ಡಿಸ್ಕವರಿ ಚಾನೆಲ್‌ನಲ್ಲಿ ಸೋಮವಾರ ಪ್ರಸಾರವಾದ ಪ್ರಧಾನಿ ಮೋದಿ ಅವರನ್ನೊಳಗೊಂಡ “ಮ್ಯಾನ್‌ ವರ್ಸಸ್‌ ವೈಲ್ಡ್‌’ ಕಾರ್ಯಕ್ರಮ ಚಿತ್ರೀಕರಣಗೊಂಡ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನಕ್ಕೆ 1.26 ಲಕ್ಷ ರೂ. ಆದಾಯ ಬಂದಿದೆ.

Advertisement

ಚಿತ್ರೀಕರಣಕ್ಕೆ ಅವಕಾಶ ಕಲ್ಪಿಸಿದ್ದಕ್ಕಾಗಿ ಡಿಸ್ಕವರಿ ಚಾನೆಲ್‌ ಈ ಮೊತ್ತವನ್ನು ಪಾವತಿಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. ಚಿತ್ರೀಕರಣಕ್ಕೆ ಅನುಮತಿ ಕೋರಿ ಕೆಲವು ತಿಂಗಳುಗಳ ಹಿಂದೆಯೇ ಚಾನೆಲ್‌ ನಮ್ಮನ್ನು ಸಂಪರ್ಕಿಸಿತ್ತು. ನಾವು ಪ್ರವೇಶ ಶುಲ್ಕ ಮತ್ತು ವಸತಿ ವ್ಯವಸ್ಥೆಗಾಗಿ ಈ ಮೊತ್ತವನ್ನು ಪಡೆಯಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next