Advertisement

ಮೋದಿ ಸುಳ್ಳಿನ ಸೌಧ ಕಟ್ಟಿದ್ದಾರೆ: ಸಂಸದ

07:58 AM Jun 01, 2020 | Lakshmi GovindaRaj |

ಚನ್ನಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ. ಸುಸ್ಥಿರ ದೇಶ ಕಟ್ಟುವ ಬದಲು ಸುಳ್ಳಿನ ಸೌಧ ಕಟ್ಟಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ಕಿಡಿಕಾರಿದರು. ತಾಲೂಕಿನ ತಿಟ್ಟಮಾನಹಳ್ಳಿಯಲ್ಲಿ ಕರೆಯಲಾಗಿದ್ದ ಕಾಂಗ್ರೆಸ್‌  ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಮಾತನಾಡಿದರು. ಕೋವಿಡ್‌ 19 ಬರುವ ಮುನ್ನವೂ ದೇಶ ದುರಾಡಳಿತದಿಂದ ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿತ್ತು.

Advertisement

ಈಗ ಕೋವಿಡ್‌ 19ದಿಂದಲೇ ಆಗಿದೆ ಎಂದು ಮಹಾಸುಳ್ಳು ಹೇಳಿದ್ದಾರೆ. ಬಡವರ ಖಾತೆಗೆ 15 ಲಕ್ಷ ರೂ., ಹಾಕುತ್ತೇನೆ ಎಂಬುದರಿಂದ ಆರಂಭವಾದ ಸುಳ್ಳು, ಇದೀಗ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ವರೆಗೂ ಬಂದು ನಿಂತಿದೆ ಎಂದು ಛೇಡಿಸಿದರು. ಜೂ.7ರಂದು ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಪದಗ್ರಹಣ  ಮಾಡಲಿದ್ದು, ಅಂದು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಜನರು ಸೇರುವಂತೆ ನೋಡಿಕೊಳ್ಳಬೇಕು.

ಕೋವಿಡ್‌ 19 ಸಂದರ್ಭದಲ್ಲಿಯೂಅಭೂತ ಪೂರ್ವ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು.  ಎಲ್ಲರೂ ಮುಂದೆ ಕಾಂಗ್ರೆಸ್‌ ಸರ್ಕಾರ ತರಲು  ಕಣ ಬದರಾಗಿ ಪ್ರಮಾಣ ವಚನ ಸ್ವೀಕರಿಸಬೇಕು ಎಂದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಸ್‌. ಗಂಗಾಧರ್‌, ಕಿಸಾನ್‌ ಕಾಂಗ್ರೆಸ್‌ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಆರ್‌. ನವ್ಯಶ್ರೀ ಮಾತನಾಡಿದರು.

ಕೆಪಿಸಿಸಿ ವೀಕ್ಷಕರಾದ ಅನಿಲ್‌ಕುಮಾರ್‌,  ಡಾ.ರಾಜು, ಅಲ್ಪಸಂಖ್ಯಾತ ಮುಖಂಡ ವಾಸಿಲ್‌ ಆಲಿಖಾನ್‌, ಮಹಿಳಾ ಘಟಕದ ಕಾವೇರಮ್ಮ ಮಾತನಾಡಿದರು. ಜಿ.ಪಂ. ಸದಸ್ಯರಾದ ಪ್ರಸನ್ನ, ವೀಣಾಕುಮಾರಿ, ಸುಗುಣ, ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಮಾದು, ಮುಖಂಡರಾದ ಶರತ್‌ಚಂದ್ರ, ಹನುಮಂತಯ್ಯ ಸೇರಿದಂತೆ ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next