Advertisement

ಗುಜರಾತ್ ಚುನಾವಣೇಲಿ ಸೋಲುವ ಭಯದಿಂದ GST ದರ ಇಳಿಕೆ: ಶಿವಸೇನಾ

05:04 PM Nov 13, 2017 | Team Udayavani |

ಮುಂಬೈ: ಮುಂಬರುವ ಗುಜರಾತ್ ಚುನಾವಣೆಯಲ್ಲಿ ಆಡಳಿತಾರೂಢಾ ಭಾರತೀಯ ಜನತಾ ಪಕ್ಷ ಸೋಲುವ ಭಯದಿಂದಾಗಿಯೇ ಸುಮಾರು 200 ವಸ್ತುಗಳ ಜಿಎಸ್ ಟಿ ತೆರಿಗೆ ದರವನ್ನು ಇಳಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಿತ್ರಪಕ್ಷವಾದ ಶಿವಸೇನಾ ಸೋಮವಾರ ಆರೋಪಿಸಿದೆ.

Advertisement

ಜಿಎಸ್ ಟಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ದೇಶದ ಎಲ್ಲಾ ಜನರು ಜಿಎಸ್ ಟಿಯನ್ನು ಬೆಂಬಲಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದರು. ಆದರೆ ಇದೀಗ ಜನರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಬಹುತೇಕ ವಸ್ತುಗಳ ಮೇಲೆ ವಿಧಿಸಿದ್ದ ಜಿಎಸ್ ಟಿ ತೆರಿಗೆಯ ದರವನ್ನು ಕಡಿಮೆ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.

ಶಿವಸೇನಾದ ಮುಖವಾಣಿಯಾದ ಸಾಮ್ನಾದ ಸಂಪಾದಕೀಯದಲ್ಲಿ ಜಿಎಸ್ ಟಿ ಕುರಿತು ಟೀಕಿಸಲಾಗಿದೆ. ಜಿಎಸ್ ಟಿ ಬದಲಾವಣೆ ಇಲ್ಲ ಎಂದು ಬಿಜೆಪಿ ಈಗ ತನ್ನ ರಾಗ ಬದಲಿಸಿದೆ. ಗುಜರಾತ್ ನಲ್ಲಿ ಭಾರೀ ವಿರೋಧ ಎದುರಿಸುವಂತಾಗಿದೆ. ಹಳ್ಳಿ, ಹಳ್ಳಿಯಲ್ಲೂ ಬಿಜೆಪಿಯನ್ನು ವಿರೋಧಿಸುವ ವಾತಾವರಣ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಭಂಗ ತಪ್ಪಿಸಿಕೊಳ್ಳಲು ಜಿಎಸ್ ಟಿ ತೆರಿಗೆ ದರ ಇಳಿಕೆ ಮಾಡಿರುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next