ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಭೇರಿಯೊಂದಿಗೆ ಎರಡನೇ ಬಾರಿ ಪ್ರಧಾನಿ ಗದ್ದುಗೆ ಏರುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಮಂಗಳವಾರ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ಹಿರಿಯ ಮುಖಂಡ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಮೇ 30ರಂದು ನರೇಂದ್ರ ಮೋದಿ ಅವರು 2ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಪ್ರಣಬ್ ರನ್ನು ಭೇಟಿಯಾಗಿದ್ದು, ಅವರೊಬ್ಬ ಸ್ಟೇಟ್ಸ್ ಮನ್ ಎಂದು ಶ್ಲಾಘಿಸಿದ್ದಾರೆ.
ಪ್ರಣಬ್ ಡಾ ಅವರ ಜೊತೆ ಯಾವಾಗಲೂ ಮಾತುಕತೆ ನಡೆಸುವುದೆಂದರೆ ಅದೊಂದು ಜ್ಞಾನದ ಶ್ರೀಮಂತಿಕೆ ಹೆಚ್ಚುವುದು. ಅವರ ಜ್ಞಾನ, ಒಳನೋಟಕ್ಕೆ ಸಾಟಿಯೇ ಇಲ್ಲ. ಅವರೊಬ್ಬ ಧೀಮಂತ ನಾಯಕ, ಅವರ ಕೊಡುಗೆ ದೇಶಕ್ಕೆ ಅಪಾರ ಎಂದು ಹೊಗಳಿದರು. ಈ ಹಿನ್ನೆಲೆಯಲ್ಲಿ ಅವರ ಆಶೀರ್ವಾದ ಪಡೆಯಲಿ ನಾನಿಲ್ಲಿಗೆ ಬಂದಿದ್ದೇನೆ ಎಂದು ನಿಯೋಜಿತ ಪ್ರಧಾನಿ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಪ್ರಣಬ್ ಮುಖರ್ಜಿ ಜೊತೆಗಿನ ಚಿತ್ರಗಳನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಟೋದಲ್ಲಿ ಮಾಜಿ ರಾಷ್ಟ್ರಪತಿ ಮೋದಿ ಅವರಿಗೆ ಸ್ವೀಟ್ ತಿನ್ನಿಸುವ ಮೂಲಕ ಅಭಿನಂದಿಸುತ್ತಿದ್ದಾರೆ.