Advertisement
ರಾಜ್ಯದಿಂದ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನ ಹೊಂದಿ ತೆರವಾಗಿದ್ದ ಸ್ಥಾನದ ಜತೆಗೆ ಇನ್ನೊಂದು ಸ್ಥಾನ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಗುಜರಾತ್, ಗೋವಾ, ಮಣಿಪುರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ರಾಜ್ಯಗಳಿಗೆ ಆದ್ಯತೆ ನೀಡುವ ಸಾಧ್ಯತೆಗಳಿವೆ. ಸರಿಯಾಗಿ ನಿರ್ವಹಣೆ ತೋರದ 6ರಿಂದ 7 ಸಚಿವರನ್ನು ಕೈಬಿಡುವ ಸಾಧ್ಯತೆಯೂ ಇದೆ. ಇಂದು ಸಂಜೆ ಪ್ರಮಾಣ ವಚನ?
ಬುಧವಾರ ಸಂಜೆ 5.30ರಿಂದ 6ರ ನಡುವೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಪ್ರಮುಖವಾಗಿ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ, ಅಸ್ಸಾಂನ ಮಾಜಿ ಸಿಎಂ ಸರ್ಬಾನಂದ ಸೋನಾವಾಲ್, ಬಿಹಾರದ ಮಾಜಿ ಡಿಸಿಎಂ ಸುಶೀಲ್ ಮೋದಿ, ಮಹಾರಾಷ್ಟ್ರದ ನಾರಾಯಣ ರಾಣೆ, ಉತ್ತರ ಪ್ರದೇಶದ ಅನುಪ್ರಿಯಾ ಪಟೇಲ್ ಸಹಿತ 20ಕ್ಕೂ ಹೆಚ್ಚು ಮಂದಿಗೆ ಮೋದಿಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ.
Related Articles
ಕರ್ನಾಟಕದ 25 ಸಂಸದರಿದ್ದು, ಪ್ರಹ್ಲಾದ್ ಜೋಷಿ ಮತ್ತು ಸದಾನಂದ ಗೌಡ ಸಚಿವರಾಗಿದ್ದಾರೆ. ಸುರೇಶ್ ಅಂಗಡಿ ನಿಧನದಿಂದ ಖಾಲಿಯಾಗಿರುವ ಸ್ಥಾನವನ್ನು ರಾಜ್ಯದ ಸಂಸದರಿಗೆ ನೀಡುತ್ತಾರೆ ಎಂಬ ವಿಶ್ವಾಸವಿದೆ. ಇನ್ನೂ 2 ಸ್ಥಾನ ರಾಜ್ಯಕ್ಕೆ ದೊರೆಯಬಹುದು ಎಂಬ ಮಾತು ಕೇಳಿ ಬರುತ್ತಿದೆ. ಮೂವರಿಗೆ ಅವಕಾಶ ಕಲ್ಪಿಸಿದರೆ ಹಾಲಿ ಇರುವ ಹಿರಿಯ ಸಚಿವರಲ್ಲಿ ಯಾರನ್ನಾದರೂ ಕೈಬಿಡುವ ಸಾಧ್ಯತೆಯಿದೆ.
Advertisement
ಇವರು ಸಂಭಾವ್ಯರುಬಿ.ವೈ. ರಾಘವೇಂದ್ರ, ಶಿವಕುಮಾರ ಉದಾಸಿ, ಭಗವಂತ ಖೂಬಾ, ಎ. ನಾರಾಯಣಸ್ವಾಮಿ, ರಮೇಶ್ ಜಿಗಜಿಣಗಿ , ಉಮೇಶ್ ಜಾಧವ್ , ಶೋಭಾ ಕರಂದ್ಲಾಜೆ, ಪ್ರತಾಪ್‌ಸಿಂಹ, ಪಿ.ಸಿ.ಮೋಹನ್. ದಿಲ್ಲಿಗೆ ಬರುವಂತೆ ನನಗೆ ಬುಲಾವ್ ಬಂದಿದೆ. ಆದರೆ ಸಂಪುಟ ವಿಸ್ತರಣೆ, ಸಚಿವ ಸ್ಥಾನದ ಯಾವ ಮಾಹಿತಿಯನ್ನೂ ನೀಡಿಲ್ಲ.
-ರಮೇಶ್ ಜಿಗಜಿಣಗಿ, ಸಂಸದ ಕೇಂದ್ರ ಸಂಪುಟ ಸೇರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಪಕ್ಷದ ಸೂಚನೆ ಮೇರೆಗೆ ದಿಲ್ಲಿಗೆ ತೆರಳುತ್ತಿದ್ದೇನೆ.
-ಎ. ನಾರಾಯಣಸ್ವಾಮಿ, ಸಂಸದ