Advertisement

ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆಯಾಗಲಿದೆ ಪಿಎಂ ನರೇಂದ್ರ ಮೋದಿ ಸಿನಿಮಾ

04:36 PM Oct 10, 2020 | keerthan |

ಮುಂಬೈ: 2019ರಲ್ಲಿ ಬಿಡುಗಡೆಯಾಗಿದ್ದ ವಿವೇಕ್ ಒಬೆರಾಯ್ ಅಭಿನಯದ ಪ್ರಧಾನಿ ಮೋದಿ ಜೀವನಾಧಾರಿತ ‘’ಪಿಎಂ ನರೇಂದ್ರ ಮೋದಿ” ಚಿತ್ರ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

Advertisement

ಕೋವಿಡ್ ಕಾರಣದಿಂದ ಸುಮಾರು ಆರು ತಿಂಗಳ ಕಾಲ ಮುಚ್ಚಿದ್ದ ಚಿತ್ರಮಂದಿರಗಳನ್ನು ಅಕ್ಟೋಬರ್ 15ರಿಂದ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಮೊದಲ ಹಂತದಲ್ಲಿ ಯಾವುದೇ ಹೊಸ ಚಿತ್ರಗಳು ಬಿಡುಗಡೆಯಾಗಲು ಹಿಂದೇಟು ತೋರುತ್ತಿವೆ. ಹೀಗಾಗಿ ಈ ಹಿಂದೆ ಬಿಡುಗಡೆಯಾಗಿರುವ ಚಿತ್ರಗಳನ್ನು ಮರು ಬಿಡುಗಡೆ ಮಾಡಲು ಹಲವು ನಿರ್ಮಾಪಕರು ಉತ್ಸಾಹ ತೋರುತ್ತಿದ್ದಾರೆ.

ಇದನ್ನೂ ಓದಿ:50 ನರ್ಸರಿ ಪದ್ಯ ತಪ್ಪಿಲ್ಲದೆ ಹೇಳುವ 3ರ ಪೋರಿ! 6 ತಿಂಗಳಲ್ಲಿ ಕನ್ನಡ, ತುಳು ಕಲಿತ ಜಾಣೆ ಈಕೆ

ಪಿಎಂ ಮೋದಿ ಜೀವನಾಧಾರಿತ ಚಿತ್ರ 2019ರಲ್ಲಿ ಬಿಡುಗಡೆಯಾಗಿತ್ತು. ಒಮಾಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಮೋದಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸಿದ್ದರು. ಉಳಿದಂತೆ ಬೊಮಾನ್ ಇರಾನಿ, ದರ್ಶನ್ ಕುಮಾರ್, ಮನೋಜ್ ಜೋಶಿ ಮುಂತಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದರು

Advertisement

Udayavani is now on Telegram. Click here to join our channel and stay updated with the latest news.

Next