Advertisement
ತೀರ್ಪು ವಿಧಿಸಿದ ನ್ಯಾಯಾಲಯ ಆರೋಪಿಗಳಾದ ಸಚಿನ್ ಅಂದುರೆ, ಶರದ್ ಕಳಸ್ಕರ್ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ ಅಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ವೀರೇಂದ್ರಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಾಲೇಕರ್ ಸೇರಿ ಮೂವರನ್ನು ಖುಲಾಸೆಗೊಳಿಸಿದೆ.
Related Articles
Advertisement
ಸಿಬಿಐ ತನ್ನ ಚಾರ್ಜ್ ಶೀಟ್‌ನಲ್ಲಿ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅನ್ನು ಶೂಟರ್‌ಗಳೆಂದು ಹೆಸರಿಸಿದೆ. ನಂತರ, ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಅವರನ್ನು ಬಂಧಿಸಿದರು. ನಂತರ ಸಂಸ್ಥೆಯು ವಕೀಲರಾದ ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ಬಂಧಿಸಿತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120 ಬಿ (ಪಿತೂರಿ), 302 (ಕೊಲೆ), ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಯುಎಪಿಎ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಭೋಲ್ಕರ್ ಅವರ ಹತ್ಯೆಯ ನಂತರ, ಮುಂದಿನ ನಾಲ್ಕು ವರ್ಷಗಳಲ್ಲಿ ಗೋವಿಂದ್ ಪನ್ಸಾರೆ (ಕೊಲ್ಹಾಪುರ, ಫೆಬ್ರವರಿ 2015), ಕನ್ನಡ ವಿದ್ವಾಂಸ ಮತ್ತು ಬರಹಗಾರ ಎಂ ಎಂ ಕಲ್ಬುರ್ಗಿ (ಧಾರವಾಡ, ಆಗಸ್ಟ್ 2015) ಮತ್ತು ಪತ್ರಕರ್ತೆ ಗೌರಿ ಲಂಕೇಶ್ (ಬೆಂಗಳೂರು, ಸೆಪ್ಟೆಂಬರ್ 2017) ಅವರನ್ನು ಹತ್ಯೆ ಮಾಡಲಾಯಿತು.