Advertisement

ಗೋದಾಮಿನಲ್ಲೇ ಗ್ರಂಥಾಲಯ!

04:00 PM Oct 17, 2019 | Team Udayavani |

„ಸಿಕಂದರ ಎಂ. ಆರಿ
ನರೇಗಲ್ಲ: “ದೇವಸ್ಥಾನ ಕಟ್ಟುವುದಕ್ಕಿಂತ ಒಂದು ಗ್ರಂಥಾಲಯ ಕಟ್ಟುವುದೇ ಲೇಸು’ ಎನ್ನುತ್ತಾರೆ ಹಿರಿಯರು. ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳು. ಇಲ್ಲಿ ದೊರೆಯುವ ಪುಸ್ತಕ ಗಳಿಂದ ದೊರೆಯುವ ಜ್ಞಾನ ದೊಡ್ಡದು. ಇದಕ್ಕೆ ಉತ್ತಮ ವಾತಾವರಣವೂ ಬೇಕು. ಸ್ವತ್ಛ-ಸುಂದರ ಪರಿಸರದಲ್ಲಿ ಕುಳಿತು ಓದಿದರೆ ಜ್ಞಾನ ಸಂಪಾದನೆ ಸಾಧ್ಯ.

Advertisement

ಕೋಟುಮಚಗಿಯಲ್ಲಿರುವ ಗ್ರಂಥಾಲಯ ಇದಕ್ಕೆ ಅಪವಾದ ಎನ್ನುವಂತಿದೆ. ಗ್ರಾಮದ ದುರ್ಗಾದೇವಿ ದೇವಸ್ಥಾನ ಹತ್ತಿರವಿರುವ ಇಲ್ಲಿರುವ ಗ್ರಂಥಾಲಯ ಕಳೆದ 27 ವರ್ಷಗಳಿಂದ ಗೋದಾಮಿನಲ್ಲೇ ಕಾರ್ಯ ನಿರ್ವಹಿಸುತ್ತಿದೆ.

ಇಲ್ಲಿಯವರೆಗೂ ಸ್ವಂತ ಕಟ್ಟಡ ಹೊಂದದೇ ಇರುವುದು ಓದುಗರ ದೌರ್ಭಾಗ್ಯ. ಮಧ್ಯಾಹ್ನ ಹಾಗೂ ಸಂಜೆ ವೇಳೆ ಇಲ್ಲಿ ಜನ ಸಂಚಾರ ಕಡಿಮೆ ಇರುವುದರಿಂದ ಇಲ್ಲಿ ಅನೈತಿಕ ಚಟುಚಟಿಕೆಗಳು ನಡೆಯುವುದಕ್ಕೆ ಕಾರಣವಾಗಿರುವುದು ಪ್ರಜ್ಞಾವಂತರ ನೋವಾಗಿದೆ.

ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಕೋಟುಮಚಗಿ ಗ್ರಾಮದಲ್ಲಿ ಎರಡು ಪ್ರೌಢಶಾಲೆಗಳು, 5 ಪ್ರಾಥಮಿಕ ಶಾಲೆಗಳು, ಗ್ರಾಮ ಪಂಚಾಯಿತಿ,1 ಆಯುರ್ವೇದಿಕ್‌ ಆಸ್ಪತ್ರೆ, ಪಶು ಚಿಕಿತ್ಸಾಲಯ, ಆರೋಗ್ಯ ಕೇಂದ್ರ, 2 ಹಾಲಿನ ಡೇರಿ ಸೇರಿದಂತೆ ವಿವಿಧ ಇಲಾಖೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಲಿವೆ.

ಚಾಮರಸ ಕವಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಸೊಮೇಶ್ವರ ದೇವಸ್ಥಾನದಲ್ಲಿ “ಪ್ರಭುಲಿಂಗ ಲೀಲೆ’ ಕೃತಿ ರಚಿಸಿರುವದರಿಂದ ಈ ಗ್ರಾಮ ಸಾಕಷ್ಟು ಖ್ಯಾತಿ ಹೊಂದಿದೆ. ಇಲ್ಲಿ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು, ಇತಿಹಾಸಕಾರರು ಆಗಮಿಸುತ್ತಾರೆ. ಇಂತಹ ಊರಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ ಇಲ್ಲವೆಂದರೆ ಹೇಗೆ ಎನ್ನುವಂತಾಗಿದೆ. 4 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ: 1992ರಲ್ಲಿ ಪ್ರಾರಂಭವಾದ ಈ ಗ್ರಂಥಾಲಯದಲ್ಲಿ ಮೊದಲು ಸುಮಾರು 1000 ಪುಸ್ತಕಗಳಿದ್ದವು.

Advertisement

ನಂತರದಲ್ಲಿ ರಾಮಕ್ಕ ಪದ್ಮಕ್ಕ ಗ್ರಂಥಾಲಯದಿಂದ ಸುಮಾರು 1000 ಕ್ಕೂ ಹೆಚ್ಚು ಪುಸ್ತಕಗಳು ಬಂದವು. ಇಲಾಖೆಯಿಂದ ಆಗೊಮ್ಮೆ ಈಗೊಮ್ಮೆ ಬಂದಿರುವುದು ಸೇರಿ ಇಂದು ಸುಮಾರು 4000ಕ್ಕೂ ಹೆಚ್ಚು ಪುಸ್ತಕಗಳು ಇವೆ. ಸಾಮಾಜಿಕ, ರಾಜಕೀಯ, ಆರ್ಥಿಕ ಸೇರಿದಂತೆ ವಿವಿಧ ವಿಷಯಗಳ ಕುರಿತಾದ, ವಿದ್ಯಾರ್ಥಿಗಳಿಗೆ ಅನುಕುಲವಾಗುವಂಥ ಹಲವಾರು ಪುಸ್ತಕಗಳಿವೆ.

ಎರಡೇ ದಿನಪತ್ರಕೆ ಬರುತ್ತವೆ: ಇಲ್ಲಿ ದಿನನಿತ್ಯ ರಾಜ್ಯಮಟ್ಟದ ಎರಡು ದಿನಪತ್ರಿಕೆಗಳು ಮಾತ್ರ ಬರುತ್ತವೆ. ಇದಕ್ಕೆ ಸರ್ಕಾರದಿಂದ ಕೇವಲ ತಿಂಗಳಿಗೆ 400 ರೂ. ಮಾತ್ರ ಅನುದಾನ ಬರುತ್ತಿದ್ದು, ಉಳಿದಂತೆ ಯಾವುದೇ ವಾರಪತ್ರಿಕೆ, ಮಾಸಪತ್ರಿಕೆಗಳು ಲಭ್ಯವಿರುವುದಿಲ್ಲ. ಸದ್ಯ ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆಯಿಲ್ಲ. ಓದುಗರಿಗೆಂದು ನಿಗದಿ ಮಾಡಿರುವ ಸ್ಥಳ ಇಕ್ಕಟ್ಟಾಗಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next