Advertisement
ಮೈಸೂರು ಜಿಪಂ ಸಭಾಂಗಣದಲ್ಲಿ ಶುಕ್ರವಾರ ಎರಡೂ ಜಿಲ್ಲೆಗಳ ಬರ ಪರಿಸ್ಥಿತಿ ಕುರಿತು ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಸದ್ಯಕ್ಕೆ ಬರ ಮತ್ತು ಕುಡಿಯುವ ನೀರಿಗೆ ಅಂತಹ ಸಮಸ್ಯೆ ಇಲ್ಲ. ಆದರೆ, ನರೇಗಾ ಕಾರ್ಯಕ್ರಮದಲ್ಲಿ ಎರಡೂ ಜಿಲ್ಲೆಗಳಲ್ಲಿ ಮಾನವ ದಿನಗಳ ಸೃಜನೆ ತೃಪ್ತಿಕರವಾಗಿಲ್ಲ. ಹೆಚ್ಚು ಹಣ ಬಳಸಿಕೊಳ್ಳುವ ಅವಕಾಶವಿದೆ. ಇದರ ಸದುಪಯೋಗಪಡೆದುಕೊಂಡು ಬಡಜನರಿಗೆ ಉದ್ಯೋಗ ಒದಗಿಸಿಕೊಡಿ ಎಂದು ಸೂಚಿಸಿದರು.
Related Articles
Advertisement
ಬೆಂಬಲ ಬೆಲೆಯಡಿ ಭತ್ತ ಖರೀದಿಸುವ ವಿಚಾರದಲ್ಲಿ ರೈಸ್ ಮಿಲ್‌ಗಳ ಮೇಲೆ ಸರ್ಕಾರ ಸಂಪೂರ್ಣವಾಗಿ ಅವಲಂಬನೆಯಾಗುವುದು ಸರಿಯಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ. ಪರ್ಯಾಯ ಕ್ರಮಗಳ ಸಾಧ್ಯತೆ ಬಗ್ಗೆ ಆಹಾರ ಇಲಾಖೆ ಕಾರ್ಯದರ್ಶಿ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಹಣ ಬಿಡುಗಡೆ: ಕುಡಿಯುವ ನೀರು ಸರಬರಾಜಿಗಾಗಿ ನಗರಪ್ರದೇಶಗಳಿಗೆ ಒಂದು ವಾರದಲ್ಲಿ 50 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್ ಮಾದರಿಯಲ್ಲೇ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಗೂ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ತನ್ವೀರ್‌ಸೇs್, ಅಶ್ವಿನ್‌ಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಬಿ.ಹರ್ಷ ವರ್ಧನ, ಸಂಸದ ಪ್ರತಾಪ್ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಜಿಪಂ ಅಧ್ಯಕ್ಷ ಸಾ.ರಾ.ನಂದೀಶ್, ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಬರ ಪರಿಸ್ಥಿತಿ ವರದಿ ಬೇಗ ಕಳುಹಿಸಲು ಸೂಚನೆ
ಮೈಸೂರು: ಮುಂಗಾರು ಹಂಗಾಮಿನಲ್ಲಿ ಘೋಷಣೆಯಾದ ಬರ ಪ್ರದೇಶಗಳನ್ನು ಮುಂದಿನ 6 ತಿಂಗಳ ತನಕ ಬರ ಎಂದೇ ಪರಿಗಣಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಮೈಸೂರು ಜಿಪಂ ಸಭಾಂಗಣದಲ್ಲಿ ಎರಡೂ ಜಿಲ್ಲೆಗಳ ಬರ ಪರಿಸ್ಥಿತಿ ಕುರಿತು ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.ಜನವರಿ ಕೊನೆ ವಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಡಲು ತೀರ್ಮಾನಿಸಲಾಗಿತ್ತು. ಆದರೆ, ಜಿಲ್ಲಾಧಿಕಾರಿಗಳಿಂದ ವರದಿ ಬರುವುದು ತಡವಾದ್ದರಿಂದ ಕೊಡಲಾಗಿಲ್ಲ. ರಾಜ್ಯದ ಬರಪೀಡಿತ 15 ಜಿಲ್ಲೆಗಳ ಪೈಕಿ 13 ಜಿಲ್ಲೆಗಳ ಸರ್ವೆ ಮುಗಿದಿದೆ. ಮೈಸೂರು-ಚಾಮರಾಜನಗರ ಬಾಕಿ ಇದ್ದು, ಬೇಗ ಸರ್ವೆ ಕಾರ್ಯ ಮುಗಿಸಿ ವರದಿ ಕೊಡಿ. ಜಂಟಿ ಕೃಷಿ ನಿರ್ದೇಶಕರು ಕೊಟ್ಟಿರುವ ವರದಿಯ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳೇ ವರದಿ ಕಳುಹಿಸಿಕೊಡಿ ಎಂದರು.
ಮೇವು ಶೇಖರಣೆ ಮಾಡಿ: ಸದ್ಯ ಮೇವಿಗೆ ತೊಂದರೆ ಇಲ್ಲದಿದ್ದರೂ ಮುಂಬರುವ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮೇವು ಶೇಖರಣೆಗೆ ಆದ್ಯತೆ ನೀಡಿ, ಕೆಲವು ರೈತರು ಗದ್ದೆಯಲ್ಲೇ ಭತ್ತದ ಹುಲ್ಲಿಗೆ ಬೆಂಕಿ ಹಾಕುತ್ತಾರೆ. ಇದರಿಂದ ಮೇವಿನ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಅದನ್ನು ಖರೀದಿ ಮಾಡಿ ಶೇಖರಣೆ ಮಾಡಬೇಕು ಎಂದರು. ಮೈಸೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ವಿಜಯನಗರ 4ನೇ ಹಂತದಲ್ಲಿ ನಿರ್ಮಿಸಿರುವ ಟ್ಯಾಂಕ್‌ಗೆ ನೀರನ್ನು ತುಂಬಿಸುವ ಕಾರ್ಯ 15 ದಿನದ ಒಳಗೆ ಆಗಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ , ಸಂಬಂಧಿಸಿದ ಇಂಜಿನಿಯರ್‌ಗೆ ಸೂಚಿಸಿದರು.