ಹೊಸಪೇಟೆ: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಾ ಕಾಯ್ದಿಟ್ಟ ಅರಣ್ಯ ವ್ಯಾಪ್ತಿಯ ಹಂದಿಗುಡ್ಡದಲ್ಲಿ ಮನರೇಗಾಯೋಜನೆಯಡಿ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೈಗೊಂಡಿರುವ ಕಾಂಟೂರ್ ಟ್ರೆಂಚ್ ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಆಯುಕ್ತರು ಹಾಗೂ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಶುಕ್ರವಾರ ಪರಿಶೀಲಿಸಿದರು.
ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರು ಮಾತನಾಡಿ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಒಳಪಡುವ ಅನೇಕ ಗುಡ್ಡಗಳು ಬರುವುದರಿಂದ ಮನರೇಗಾ ಯೋಜನೆಯಡಿ ಸದರಿ ಗುಂಡಾ ಕಾಯ್ದಿಟ್ಟ ಅರಣ್ಯ ವ್ಯಾಪ್ತಿಯ ಗುಡ್ಡಗಳ ಮಣ್ಣಿನ ಸವಕಳಿ ತಡೆಯಲುಹಾಗೂ ಹಸಿರೀಕರಣಗೊಳಿಸಲು, ಮನರೇಗಾ ಯೋಜನೆಯಡಿ 25 ಲಕ್ಷ ರೂ. ಮೊತ್ತದಲ್ಲಿ ಹಂದಿಗುಡ್ಡ ಅಭಿವೃದ್ಧಿ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ ಎಂದರು. ಇದರಿಂದ ಕಲ್ಲಹಳ್ಳಿಹಾಗೂ ರಾಜಾಪುರ ಗ್ರಾಮದ ಸುಮಾರು 300 ಕೂಲಿಕಾರರಿಗೆ ಉದ್ಯೋಗವನ್ನು ನೀಡುವುದರ ಜತೆಗೆ ಅರಣ್ಯ ಸಂರಕ್ಷಣೆ ಹಾಗೂ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಅವರು ಮನರೇಗಾ ಕೂಲಿಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕೂಲಿ ಹಣ ಎಷ್ಟು ನೀಡಲಾಗುತ್ತಿದೆ? ಸರಿಯಾಗಿ ಪಾವತಿಸಲಾಗುತ್ತಿದೆಯೇ? ಎಷ್ಟು ದಿನದಿಂದ ಕೆಲಸ ಮಾಡುತ್ತೀದ್ದೀರಿ ಎಂದು ಕಾರ್ಮಿಕರಿಗೆ ಪ್ರಶ್ನಿಸಿ ಮಾಹಿತಿ ಪಡೆದರು.
ತಾಪಂ ಇಒ ವಿಶ್ವನಾಥ್, ಮನರೇಗಾ ಸಹಾಯಕನಿರ್ದೇಶಕ ಎಂ. ಉಮೇಶ್, ಆರ್‌ಎಫ್‌ಒ ವಿನಯ್ ಕೆಸಿ, ಪಿಡಿಒ ಉಮಾ ಕಾಳೆ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಹೊಸಪೇಟೆಯಲ್ಲಿರುವ ಮುನ್ಸಿಪಲ್ ಮೈದಾನದಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಕಿಶೋರ ಕುಮಾರ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚಿಸಿದರು.