Advertisement

ಬಲ ತುಂಬುತ್ತಿದೆ ಕೂಲಿಗಾಗಿ ಕಾಳು ಯೋಜನೆ

07:44 PM Nov 20, 2020 | Suhan S |

ಮುಧೋಳ: ಬಡವರ ನೆರವಿಗಾಗಿ ಸರ್ಕಾರ ಜಾರಿಗತಂದಿರುವ ಮಹಾತ್ಮಾ ಗಾಂ  ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣರ ಬಾಳಿಗೆ ಬೆಳಕಾಗಿದೆ.

Advertisement

ಹಲಗಲಿ ಗ್ರಾಮದಲ್ಲಿ 3ತಿಂಗಳಿನಿಂದ ಗ್ರಾಮದ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೂಲಿ ಕೆಲಸನೀಡುತ್ತಿದ್ದು, ಸರ್ಕಾರದ ಯೋಜನೆಯಿಂದಾಗಿ ಬಡವರಆರ್ಥಿಕ ಮಟ್ಟ ಸುಧಾರಣೆಯೊಂದಿಗೆ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಳನಳಿಸುತ್ತಿದೆ ಹಾಳಪೆಂಟಿ ಕೆರೆ: ಹಲವಾರು ದಶಕಗಳಿಂದ ಗಿಡಗಂಟಿಗಳಿಂದ ತುಂಬಿಕೊಂಡಿದ್ದ ಗ್ರಾಮದ ಹೊರವಲಯದ ಹಾಳಪೆಂಟಿ ಕೆರೆ ಇದೀಗ ನಳನಳಿಸುತ್ತಿದೆ. ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರು ಕೆರೆಯಲ್ಲಿ ಹೂಳು ಎತ್ತಿ, ಗಿಡಗಂಟಿ ಹಸನು ಮಾಡಿದ್ದರಿಂದ ಕೆರೆಯ ಅಂದ ಹೆಚ್ಚಿದೆ. ಅತಿಯಾದ ಮಳೆಯಿಂದಾಗಿ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡಿದ್ದು, ದನಕರು ಹಾಗೂ ಅರಣ್ಯದಲ್ಲಿನ ಪ್ರಾಣಿ ಪಕ್ಷಿಗಳಿಗೆ ಜಲಮೂಲವಾಗಿ ಮಾರ್ಪಾಡಾಗಿದೆ.

ಕಾಲುವೆಯಲ್ಲಿನ ಕಸ ಹಸನು: ದಿನದಿಂದ ದಿನಕ್ಕೆ ನರೇಗಾ ಕೂಲಿ ಕಾರ್ಮಿಕರು ಹೆಚ್ಚಾದಂತೆ ಜಿಎಲ್‌ಬಿಸಿ ವ್ಯಾಪ್ತಿಯಲ್ಲಿ ಕಾಲುವೆ ಹಾಗೂ ಉಪ ಕಾಲುವೆಯಲ್ಲಿ ಸಂಗ್ರಹಗೊಂಡಿದ್ದ ಕಸವನ್ನು ಸ್ವಚ್ಛ ಮಾಡಲಾಗುತ್ತಿದೆ. ಇದರಿಂದ ಅನೇಕ ವರ್ಷಗಳಿಂದ ಹೂಳು ಹಾಗೂ ಕಸದಿಂದ ಕೂಡಿದ್ದ ಕಾಲುವೆಗಳು ಇಂದು ಹಸನಾಗಿ ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಿದೆ.

ಹೆಚ್ಚಿದ ಬೇಡಿಕೆ: ಸರ್ಕಾರ ಬಡವರಿಗಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಹಲವಾರು ವರ್ಷಗಳೆ ಕಳೆದರೂ ಯೋಜನೆ ಬಗ್ಗೆ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅರಿವು ಮೂಡುತ್ತಿದೆ. ಮೊದ ಮೊದಲು 20 ರಿಂದ 30ರವರೆಗೆ ಕೆಲಸಕ್ಕೆ ಹಾಜರಾಗುತ್ತಿದ್ದ ಕಾರ್ಮಿಕರು ಮೂರು ತಿಂಗಳಲ್ಲಿ 200ರ ಗಡಿ ದಾಟಿದ್ದಾರೆ. ಸಾರ್ವಜನಿಕರಲ್ಲಿ ಯೋಜನೆ ಬಗ್ಗೆ ಹೆಚ್ಚು ಅರಿವು ಮೂಡುತ್ತಿದ್ದು, ಹೆಚ್ಚಿನ ಜನರು ಕೂಲಿ ಕೆಲಸಕ್ಕೆ ಬರಲು ಉತ್ಸುಕರಾಗುತ್ತಿದ್ದಾರೆ ಎನ್ನುತ್ತಾರೆ ತಾಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯ ಸಂಯೋಜನಾ ಕಾರಿ ವಿವೇಕ ಬಿರಾದಾರ.

ನಿಗದಿತ ಸಮಯಕ್ಕೆ ಕೂಲಿ: ಕೂಲಿಕಾರ್ಮಿಕರು ಕೆಲಸಕ್ಕೆ ಹಾಜರಾದ ವಾರದೊಳಗೆ ಅವರ ಖಾತೆಗೆ ನೇರವಾಗಿ ಹಣ ಜಮಾವಣೆಯಾಗುತ್ತಿದ್ದು, ಇದರಿಂದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಬಡವರಿಗೆ ನಿಗದಿತ ಸಮಯಕ್ಕೆ ಕೂಲಿ ಕೈ ಸೇರುತ್ತಿರುವುದರಿಂದ ಯೋಜನೆ ಬಗ್ಗೆ ಸಾರ್ವಜನಿಕರು ಸಕಾರಾತ್ಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನುತ್ತಿದೆ ಅಧಿಕಾರಿ ವರ್ಗ. ತಪ್ಪಿದ ಕಮಿಷನ್‌ ಹಾವಳಿ: ಹಿಂದಿನ ದಿನಮಾನಗಳಲ್ಲಿ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಸರಿಯಾದ ಮಾಹಿತಿ ಇರದ ಕಾರಣ ಉದ್ಯೋಗ ಖಾತ್ರಿ ಯೋಜನೆ ಕಾರ್ಡ್‌ ಗಳು ಗ್ರಾಮದ ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿದ್ದವು ಎಂಬ ಮಾತುಗಳು ಹರಿದಾಡುತ್ತಿದ್ದವು. ತಮಗೆ ಬೇಕಾದ ಕಾಮಗಾರಿ ಮಾಡಿಸಿಕೊಂಡು ಅಮಾಯಕರ ಖಾತೆಗೆಹಣ ಜಮೆ ಮಾಡಿಸಿ ನಂತರ ಕಾರ್ಡ್‌ದಾರರಿಗೆ 100 ಅಥವಾ 200 ಹಣ ನೀಡಿ ಪೂರ್ಣ ಪ್ರಮಾಣದ ಹಣವನ್ನು ತಾವೇ ಬಳಸಿಕೊಳ್ಳುತ್ತಿದ್ದರು ಎಂಬ ಆರೋಪ ಹೆಚ್ಚಾಗಿ ಕೇಳಿ ಬರುತ್ತಿತ್ತು. ಆದರೆ ಈಗ ಪಂಚಾಯಿತಿ ಅಧಿಕಾರಿಗಳು ಕೈಗೊಂಡಿರುವ ಕ್ರಮದಿಂದಾಗಿ ದುಡಿದವರಿಗೆ ಸಂಪೂರ್ಣ ಪ್ರಮಾಣದ ಹಣ ಜಮೆಯಾಗುತ್ತಿರುವುದರಿಂದ ಕಮಿಷನ್‌ ಹಾವಳಿ ತಪ್ಪಿದಂತಾಗಿದೆ.

Advertisement

2020-21ರ ಗ್ರಾಮದಲ್ಲಿ 700ಜನ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ. ಈಗ 200ಕ್ಕೂ ಹೆಚ್ಚು ಜನರು ನೀಡಲಾಗಿದೆ ಮೇಲಧಿ ಕಾರಿಗಳ ಮೂಲಕ ಹೆಚ್ಚುವರಿ ಕ್ರಿಯಾಯೋಜನೆ ಮಾಡಿ ಎಲ್ಲ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಶ್ರಮಿಸಲಾಗುವುದು.  -ಮಂಜುನಾಥ ಕರಿಗೌಡರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಲಗಲಿ

 

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next