ಕುಣಿಗಲ್: ನರೇಗಾ ಯೋಜನಡಿಯಲ್ಲಿ ದನದ ಕೊಟ್ಟಿಗೆ ನಿರ್ಮಾಣ ಸಂಬಂಧ ಪಿಡಿಒಗಳು ಪ. ಜಾತಿ, ಪಂಗಡದ ಫಲಾನುಭವಿಗಳ ಜಾಬ್ ಕಾರ್ಡ್ ಹಾಗೂ ಸಹಿ ಪಡೆದು ದನದ ಕೊಟ್ಟಿಗೆ ನಿರ್ಮಿಸಿಕೊಡದೇ, ಲಕ್ಷಾಂತ ರೂ. ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು.
ನಗರದ ಕಂದಾಯ ಭವನದಲ್ಲಿ ತಹಶೀಲ್ದಾರ್ ವಿ.ಆರ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದತಾಲೂಕು ಮಟ್ಟದ ಪ.ಜಾತಿ, ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ಪ್ರಾರಂಭವಾಗುತ್ತಿದಂತೆ ತಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಚಿಕ್ಕಣ್ಣ ನರೇಗಾ ಯೋಜನೆಯ ಬಗ್ಗೆ ಈ ರೀತಿ ಆರೋಪಿಸಿದರು.
ನರೇಗಾ ಯೋಜನಡಿಯಲ್ಲಿ ಪ.ಜಾತಿ, ಪ.ಪಂಗಡದ ರೈತರು ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು 2016-17ನೇ ಸಾಲಿನಲ್ಲಿ ತಲಾ 24 ಸಾವಿರ ರೂ. ನೀಡಲಾಗುತ್ತಿತು. ನನ್ನ ತಾಯಿ ಚಿಕ್ಕಗಂಗಮ್ಮ ಜಾಬ್ ಕಾರ್ಡ್ ಮತ್ತು ಹಲವು ದಾಖಲೆ ಪಿಡಿಒಗೆ ನೀಡಿಧನದ ಕೊಟ್ಟಿಗೆ ನಿರ್ಮಿಣಕ್ಕೆ ಮನವಿ ಮಾಡಿದರು. ಆದರೆ ಪಿಡಿಒ ದನದ ಕೊಟ್ಟಿಗೆ ನಿರ್ಮಿಸಿಕೊಡದೇ, ನಿರ್ಮಾಣ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಹಣವನ್ನು ಬೇರೆಯವರ ಖಾತೆಗೆ ಜಮಾ ಮಾಡಿದ್ದಾರೆ ಎಂದು ದೂರಿದರು.
ದಲಿತ ಮುಖಂಡ ಎಸ್.ಟಿ.ಕೃಷ್ಣರಾಜು ಮಾತನಾಡಿ, ದಲಿತ ರೈತರಲ್ಲಿ ಜಾಬ್ ಕಾರ್ಡ್ ಇದೆ. ಆದರೆ, ಕೆಲಸ ಮಾತ್ರ ಕೊಡುತ್ತಿಲ್ಲ. 2019-20ನೇಸಾಲಿನಲ್ಲಿ ಕೊಟ್ಟಿಗೆ ನಿರ್ಮಾಣಕ್ಕೆ ಸುಮಾರು 43ಸಾವಿರ ರೂ. ಕೊಡಲಾಗುತ್ತಿದೆ. ಆದರೆ, ದಲಿತಫಲಾನುಭವಿಗಳಿಗೆ 5 ರಿಂದ 10 ಸಾವಿರ ರೂ. ನೀಡಿ ಉಳಿದ ಹಣವನ್ನು ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂದು ಕಿಡಿಕಾರಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ವಿ.ಶಿವಶಂಕರ್,ದಲಿತ್ ನಾರಾಯಣ್ ಮಾತನಾಡಿ, ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದು, ಕುಡಿಯುವ ನೀರಿಗೆ ತೊಂದರೆಯಾವುದು ಸಾಮಾನ್ಯ. ದಲಿತಕಾಲೋನಿಗಳಿಗೆ ಟ್ಯಾಂಕರ್ ಮೂಲಕ ನೀರುಸರಬರಾಜು ಮಾಡಬಾರದು. ಕೊಳವೆ ಬಾವಿ ಅಥವಾ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾಳಮ್ಮ, ತೋಟಗಾರಿಗೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ, ಪುರಸಭಾ ಸದಸ್ಯ ಶ್ರೀನಿವಾಸ್, ದಲಿತಮುಖಂಡರಾದ ವರದರಾಜು, ರಾಮಚಂದ್ರಯ್ಯ, ರಾಮಲಿಂಗಯ್ಯ ಮತ್ತಿತರಿದ್ದರು.
ಪಿಡಿಒ ವಿರುದ್ಧ ಶಿಸ್ತು ಕ್ರಮ :
ಈ ಪ್ರಕರಣ ಗಂಭೀರವಾಗಿದೆ. ಈ ನಿಟ್ಟಿನಲ್ಲಿ ಇಒ ಅವರ ಸಮ್ಮುಖದಲ್ಲಿ ಮಾ.15ರಂದು ತಾಲೂಕಿನಎಲ್ಲಾ 36 ಗ್ರಾಪಂ ಪಿಡಿಒಗಳ ಸಭೆ ಕರೆಯಲಾಗುತ್ತದೆ. ತಪ್ಪು ಎಸಗಿರುವಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್‌ಮಾಡುವುದಾಗಿ ತಹಶೀಲ್ದಾರ್ ವಿ.ಆರ್. ವಿಶ್ವನಾಥ್ ಭರವಸೆ ನೀಡಿದರು.