ಮಧುಗಿರಿ: ನರೇಗಾ ಯೋಜನೆಯಡಿ ರೈತರು ಜಮೀನಿನಲ್ಲಿ ಹುಣಸೆಗಿಡ ನೆಡುವ26 ಸಾವಿರ ರೂ.ನ ಕಾಮಗಾರಿ ನಡೆದು 3 ವರ್ಷ ಕಳೆದರೂ ಕೊಡಗದಾಲ ಗ್ರಾಪಂ ಫಲಾನುಭವಿ ರೈತರಿಗೆ ಹಣ ನೀಡಿಲ್ಲ ಎಂದು ಸ್ಥಳೀಯರು ಆರೋಪಿಸಿದರು.
ತಾಲೂಕಿನ ಪುರವರ ಹೋಬಳಿ ಕೊಡಗದಾಲ ಗ್ರಾಪಂನಲ್ಲಿ ರಂಗನಹಳ್ಳಿಯ ಸುನೀಲ್ ಎಂಬ ರೈತ ತನ್ನ ಜಮೀನಿನಲ್ಲಿ ಕಳೆದ3 ವರ್ಷದ ನರೇಗಾ ಯೋಜನೆಯಲ್ಲಿ ಹಿಂದೆಹುಣಸೆಗಿಡ ನೆಟ್ಟು ಕಾಮಗಾರಿಪೂರ್ಣಗೊಳಿಸಿದ್ದಾರೆ. ಆದರೆ, ಇಲ್ಲಿವರೆಗೂ ಫಲಾನುಭವಿ ರೈತರಿಗೆ ನರೇಗಾದಿಂದ ಹಣ ಸಂದಾಯವಾಗಿಲ್ಲ. ಈ ಬಗ್ಗೆ ನಡೆದ ನರೇಗಾಯೋಜನೆ ಲೆಕ್ಕ ಪರಿಶೋಧನಾ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಲಂಚ ಪಡೆದ ಕಂಪ್ಯೂಟರ್ ಆಪರೇಟರ್: ಈ ಬಗ್ಗೆ ರೈತ ಸುನೀಲ್ ಮಾತನಾಡಿ, ನಮ್ಮತಂದೆಯಿಂದ 3 ಸಾವಿರ ಹಣವನ್ನು ಎನ್ ಆರ್‌ಇಜಿ ಎಂಜಿನಿಯರ್ ಹಾಗೂ ಪಿಡಿಒಗೆಕೊಡಬೇಕೆಂದು ಹಣ ಪಡೆದ ಕಂಪ್ಯೂಟರ್‌ಆಪರೇಟರ್ ನಾಗರಾಜು ಇಲ್ಲಿಯವರೆಗೂ ನಮಗೆ ಅನುದಾನ ಕೊಡಿಸಿಲ್ಲ. ಕಂಪ್ಯೂಟರ್‌ಆಪರೇಟರ್ ನಾಗರಾಜು ಪ್ರತಿ ಕೆಲಸಕ್ಕೂ ಹಣಕ್ಕೆ ಬೇಡಿಕೆ ಇಡುತ್ತಿದ್ದು, ನರೇಗಾ ಯೋಜಞನೆಯಲ್ಲಿ ಫಲಾನುಭವಿಗಳಿಗೆ ಅನ್ಯಾಯ ವಾಗುತ್ತಿದೆ ಎಂದು ಆರೋಪಿಸಿದರು.
ಅಲ್ಲದೇ, ನಾವು ಮಾಡಿದ ಕೆಲಸಕ್ಕೆ ಹಣ ಕೊಡಿಸದಿದ್ದರೆ ಗ್ರಾಪಂ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನೂತನ ಪಿಡಿಒ ಗೋಪಾಲಕೃಷ್ಣ, ತಾನು ಈ ಪಂಚಾಯ್ತಿಗೆನೂತನವಾಗಿ ವರ್ಗವಾಗಿ ಬಂದಿದ್ದು, ರೈತರ ಸಮಸ್ಯೆ ಆಲಿಸಿದ್ದೇನೆ. ಕಾನೂನು ರೀತಿಯಲ್ಲಿನ್ಯಾಯ ಕೊಡಿಸಲು ಕ್ರಮ ಕೈಗೊಳ್ಳುವುದಾಗಿಭರವಸೆ ನೀಡಿದರು. ಅಲ್ಲದೇ, ಕಂಪ್ಯೂಟರ್ ಆಪರೇಟರ್ ಬಗ್ಗೆ ಲಿಖೀತವಾಗಿ ದೂರು ನೀಡಿದರೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.