Advertisement

ವಲಸೆ ತಡೆಗೆ ನರೇಗಾ ಸಹಕಾರಿ

03:28 PM Mar 23, 2022 | Team Udayavani |

ಮಾನ್ವಿ: ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಕಡಿಮೆ ಆಗುವುದರಿಂದ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು, ಕೂಲಿ ಕಾರ್ಮಿಕರಿಗೆ ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿಯೇ ಉದ್ಯೋಗ ಕಲ್ಪಿಸಲು, ಗ್ರಾಮಕ್ಕೆ ಶಾಶ್ವತ ಆಸ್ತಿ ರೂಪಿಸಲು ನರೇಗಾ ಯೋಜನೆ ಸಹಕಾರಿ ಎಂದು ತಾಪಂ ಇಒ ಸ್ಟೇಲಾ ವರ್ಗೀಸ್‌ ಹೇಳಿದರು.

Advertisement

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನ ನಿಮಿತ್ತ ಹಮ್ಮಿಕೊಂಡಿದ್ದ ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದಿಂದ ನರೇಗಾ ಯೋಜನೆಯಲ್ಲಿ ಮಾ.15ರಿಂದ ಜೂ.30ರವರೆಗೆ 100 ದಿನಗಳ ಕಾಲ ನಿರಂತರ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ಧರು, ವಿಕಲಚೇತನರು ಕೆಲಸ ಪಡೆಯಬಹುದು. ವಿವಿಧ ವಸತಿ ಯೋಜನೆಗಳ ಫಲಾನುಭವಿಗಳು, ಸಣ್ಣ ರೈತರು ವೈಯಕ್ತಿಕ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ತಾಲೂಕಿನ ಜನರಿಗೆ ನರೇಗಾ ಕುರಿತು ಮಾಹಿತಿ ನೀಡಲು ಉದ್ಯೋಗ ವಾಹಿನಿ ಜಾಗೃತಿ ರಥದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ಈ ವೇಳೆ ರೇಷ್ಮೆ ಇಲಾಖೆ ನಿರೀಕ್ಷಕರಾದ ಮಹಾಂತಮ್ಮ, ನರೇಗಾ ಯೋಜನೆ ಅಧಿಕಾರಿಗಳಾದ ವೀರೇಶ, ಲಿಂಗಪ್ಪ, ಅಶೋಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next