Advertisement
ಉಳ್ಳಾಲ ಒಳಪೇಟೆ ನಿವಾಸಿ ಅಬೂಬಕರ್ ಮಿಸ್ಬಾ (24), ಸೋಮೇಶ್ವರ ಪೆರ್ಮನ್ನೂರು ನಿವಾಸಿ ಶಬ್ಬೀರ್ ಅಹಮ್ಮದ್ ಯಾನೆ ಶಬ್ಬೀರ್ (27) ಮತ್ತು ಉಳ್ಳಾಲ ಅಲೇಕಳ ನಿವಾಸಿ ಶಿಹಾಬ್ ಅಬ್ದುಲ್ ರಝಾಕ್ (27) ಬಂಧಿತರು.
ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ವಿಶೇಷ ಅಪರಾಧ ಪತ್ತೆದಳ ತಂಡವು ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತು. ಮಂಗಳೂರು ಮೂಲದ ಮೂವರು ಆರೋಪಿಗಳು ಮುಂಬ ಯಿಗೆ ತೆರಳಿ ಅಲ್ಲಿಂದ ‘ಎಂಡಿಎಂಎ’ ಮಾದಕದ್ರವ್ಯ ಖರೀದಿಸುತ್ತಿದ್ದರು. ಅದನ್ನು ಮಂಗಳೂರಿಗೆ ತಂದು ವಿದ್ಯಾರ್ಥಿಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಅಲ್ಲದೆ, ಸಾರ್ವಜನಿಕರಿಗೂ ಮಾರು ತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಬಂಧಿತರಿಂದ 80 ಸಾ.ರೂ. ಮೌಲ್ಯದ 16.55 ಗ್ರಾಂ ತೂಕದ ‘ಎಂಡಿಎಂಎ’ ಮಾದಕ ದ್ರವ್ಯ, 25 ಸಾ. ರೂ. ಮೌಲ್ಯದ ಜ್ಯುಪಿಟರ್ ಸ್ಕೂಟರ್, 2 ಸಾ.ರೂ. ಮೌಲ್ಯದ 4 ಮೊಬೈಲ್ಗಳು, 3,200 ರೂ. ವಶಕ್ಕೆ ಪಡೆಸಿದ್ದಾರೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 1,10,200 ರೂ. ಎಂದು ಅಂದಾಜಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀಗಣೇಶ್ ಮಾರ್ಗ ದರ್ಶನದಲ್ಲಿ ಉತ್ತರ ವಿಭಾಗದ ಎಸಿಪಿ ಶ್ರೀನಿವಾಸ ಆರ್. ಗೌಡ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಸಿಐ ಅಜ್ಮತ್ ಅಲಿ, ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ ಎಎಸ್‌ಐ ಮುಹಮ್ಮದ್, ಸಿಬಂದಿ ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಹಾಗೂ ಮಂಗಳೂರು ನಗರ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕ ಕಬ್ಟಾಳ್‌ರಾಜ್, ಎಎಸ್‌ಐಗಳಾದ ಮೋಹನ್ ಶೆಟ್ಟಿಯಾರ್, ಹರೀಶ್ ಮತ್ತು ಸಿಬಂದಿ ಚಂದ್ರಶೇಖರ, ಜಬ್ಟಾರ್, ರಾಜಾ, ಮಣಿ, ಯೋಗೀಶ್, ನೂತನ್ ಹಾಗೂ ವಿಶ್ವ ಪೂಜಾರಿ ಹಾಗೂ ಪಣಂಬೂರು ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬಂದಿ ಮೊದಲಾದವರು ಪಾಲ್ಗೊಂಡಿದ್ದರು.