ನಾರಾಯಣಪುರ: ಚೆಕ್ ಪೊಸ್ಟ್ ಬಳಿಯ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಲ್ಲಿ ಬಿದ್ದು ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಆ.6ರ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ತಿಳಿದು ಬಂದಿದೆ.
ಲಿಂಗಸೂಗರು ತಾಲೂಕಿನ ತೇಜಸ್ ಯಲ್ಲಪ್ಪ ಹಲಕಾವಟಗಿ (22) ನೀರುಪಾಲಾದ ಯುವಕ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಯುವಕನ ಕುಟುಂಬದವರು ಮಂಗಳವಾರ ಸಂಜೆಯೇ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಯುವಕನ ಶೋಧಕ್ಕಾಗಿ ಆಣೆಕಟ್ಟು ಅಧಿಕಾರಿಗಳಿಗೆ ಕಾಲುವೆ ನೀರು ಹರಿಸುವ ಪ್ರಮಾಣ ಕಡಿಮೆ ಗೊಳಿಸಲು ಮನವಿ ಮಾಡಿದ್ದರು.
ಯುವಕನ ಕಡೆಯವರು ಆ.7ರ ಬುಧವಾರವೂ ಕಾಲುವೆಯಲ್ಲಿ ಶೋಧ ಕಾರ್ಯ ಮುಂದುವರೆಸಿದ್ದರೂ ಇನ್ನು ಪತ್ತೆಯಾಗಿಲ್ಲಾ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಸ್ಥಳೀಯ ಪೋಲಿಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.