Advertisement

ಮತದಾನದ ಹಕ್ಕು ಕಡ್ಡಾಯ ಚಲಾಯಿಸಿ

03:27 PM Apr 20, 2019 | Naveen |

ನಾರಾಯಣಪುರ: ಮತದಾನ ಹಕ್ಕು ಹೊಂದಿರುವ
ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಚುನಾವಣೆ
ಪ್ರಕ್ರಿಯೆ ಭಾಗವಹಿಸಿ ತಮ್ಮ ಹಕ್ಕನ್ನು ಕಡ್ಡಾಯವಾಗಿ
ಚಲಾಯಿಸಬೇಕು. ಇದರಿಂದ ಪ್ರಜಾಪ್ರಭುತ್ವ
ಗೌರವಿಸಿದಂತಾಗುತ್ತದೆ ಎಂದು ಸಾಮಾಜಿಕ
ಕಾರ್ಯಕರ್ತ ಬಸವರಾಜ ಮೇಲಿನಮನಿ
ಹೇಳಿದರು.

Advertisement

ಸುಕ್ಷೇತ್ರ ದೇವರಗಡ್ಡಿ ಗ್ರಾಮದಲ್ಲಿ ಭಾರತ
ಜಾಗೃತ ಅಭಿಯಾನ ಸಂಸ್ಥೆ ವತಿಯಿಂದ ಶುಕ್ರವಾರ
ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಏ.23ರಂದು ರಾಜ್ಯದಲ್ಲಿ ಎರಡನೇ ಹಂತದ
ಮತದಾನ ನಡೆಯಲಿದೆ. ಅಂದಿನ ದಿನ ಪ್ರತಿಯೊಬ್ಬ
ಪ್ರಬುದ್ಧ ಮತದಾರರು ಮತಗಟ್ಟೆಗಳಿಗೆ ತೆರಳಿ
ಚುನಾವಣೆ ಆಯೋಗ ಸೂಚಿಸಿರುವ ಸೂಕ್ತ ದಾಖಲೆ
ತೋರಿಸಿ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು|
ಹೀಗಾಗಿ ನಿಮಗೆ ನೀಡಲಾದ ಮಹತ್ವದ ಮತದಾನ
ಹಕ್ಕು ಚಲಾಯಿಸಿ ಉತ್ತಮ ಜನನಾಯಕನನ್ನು
ಆಯ್ಕೆ ಮಾಡಲು ಸಿದ್ದರಾಗಬೇಕು. ಯಾವುದೇ
ಕಾರಣಕ್ಕೂ ಮತದಾನದಿಂದ ವಂಚಿತರಾಗದೆ ಹಾಗೂ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಧೈರ್ಯ, ನಿರ್ಭಿತಿಯಿಂದ ಮತ ಚಲಾಯಿಸಬೇಕು. ಪ್ರಜ್ಞಾವಂತ ಮತದಾರರು ತಾವು ಮತ ಚಲಾಯಿಸಬೇಕು.ಇತರರಿಗೂ ಮತ ಚಲಾಯಿಸಲು ತಿಳಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಗ್ರಾಮಸ್ಥರಿಗೆ ಭಿತ್ತಿ ಪತ್ರ ಹಂಚಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು. ಸಂಸ್ಥೆ ಕಾರ್ಯಕರ್ತರಾದ ಚನ್ನುಕುಮಾರ ದಿಂಡವಾರ, ಪುಟ್ಟು ಪಾಟೀಲ ಸೇರಿದಂತೆ ಸ್ಥಳೀಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next