Advertisement

ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ

03:17 PM Feb 14, 2020 | Naveen |

ನಾರಾಯಣಪುರ: ಸ್ವಚ್ಛ ಭಾರತ ಮಿಷನ್‌ ಅಡಿ ಕೊಡೇಕಲ್‌ ಹೋಬಳಿ ವ್ಯಾಪ್ತಿಯ ಆರು ಗ್ರಾಪಂಗಳ ಪ್ರತಿಯೊಂದು ಮನೆಯಿಂದ ಒಣ ಕಸ ಮತ್ತು ಹಸಿ ಕಸ ಸಂಗ್ರಹಿಸಿ ಅದನ್ನು ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ವಹಣೆ ಮಾಡುವ ಉದ್ದೇಶದಿಂದ ಕೊಡೇಕಲ್‌ ಗ್ರಾಮದಲ್ಲಿ ಘಟಕವೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಹೇಳಿದರು.

Advertisement

ಕೊಡೇಕಲ್‌ ಗ್ರಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ನಿರ್ವಹಣೆ ಕುರಿತು ಕೊಡೇಕಲ್‌ ವಲಯದ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು.

ಸ್ವಚ್ಛ ಭಾರತ ಮಿಷನ್‌ ಪರಿಕಲ್ಪನೆಯಿಂದ ಗ್ರಾಮಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಿ ವಿಲೇವಾರಿ ಮಾಡುವುದು ಮತ್ತು ಸಂಸ್ಕರಿಸಿ ಬೇರೆಡೆ ಸಾಗಿಸುವ ಉದ್ದೇಶದಿಂದ ಕೊಡೇಕಲ್‌ ಗ್ರಾಮದ ಹೊರ ವಲಯದಲ್ಲಿ ಘನತ್ಯಾಜ್ಯ ಸಂಗ್ರಹ ನಿರ್ವಹಣೆ ಘಟಕವೊಂದನ್ನು ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ.

6 ಗ್ರಾಪಂಗಳ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಎಲ್ಲ ಮನೆಯಿಂದ ಒಣ ಮತ್ತು ಹಸಿತ್ಯಾಜ್ಯ ಸಂಗ್ರಹಿಸಿ ಅದನ್ನು ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಾಗಿಸುವ ಮೂಲಕ ಗ್ರಾಮಗಳ ನೈರ್ಮಲ್ಯ ಕಾಪಾಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯವಿದೆ ಎಂದು ಹೇಳಿದರು.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕದ ರಾಜ್ಯ ಸಮಾಲೋಚಕ ಮಂಜುನಾಥ ಪಿ.ಎ. ಮಾತನಾಡಿ, ರಾಜ್ಯದ 6022 ಗ್ರಾಪಂಗಳಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸುವ ಉದ್ದೇಶ ಇದೆ. ಒಂದು ಗ್ರಾಪಂಗೆ 20 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಘಟಕದಲ್ಲಿ ಸಂಗ್ರಹವಾಗುವ ತ್ಯಾಜ್ಯದಲ್ಲಿನ ಲೋಹ, ಬಟ್ಟೆ, ಬಾಟಲಿ, ಪ್ಲಾಸ್ಟಿಕ್‌ ಮತ್ತು ಪೇಪರ್‌ ಇತ್ಯಾದಿಗಳನ್ನು ವಿಂಗಡಿಸಿ ಸಂಸ್ಕರಿಸಿ ವೆಂಡರಗಳ ಮೂಲಕ ಮಾರಾಟ ಮಾಡಲಾಗುವುದು. ಇದರಿಂದ ಗ್ರಾಮಗಳಲ್ಲಿ ತಲೆದೋರುವ ತ್ಯಾಜ್ಯ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಹೇಳಿದದರು.

Advertisement

ರಾಜ್ಯ ಸಮಾಲೋಚಕ ವಿವೇಕಾನಂದ ಮತ್ತು ಯಾದಗಿರಿ ಜಿಪಂ ಸಮಾಲೋಚಕಿ ಪಲ್ಲವಿ ಮಾತನಾಡಿದರು. ಸಭೆಯಲ್ಲಿದ್ದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಯಿತು. ತಾಪಂ ಸದಸ್ಯ ಮೋಹನ ಪಾಟೀಲ, ಗ್ರಾಪಂ ಅಧ್ಯಕ್ಷರಾದ ಅಯ್ಯಮ್ಮ ಮ್ಯಾಗೇರಿ, ಧೀರಪ್ಪ ರಾಠೊಡ, ಬಾಲನಗೌಡ ಪೊಲೀಸ್‌ಪಾಟೀಲ, ಹುಲಿಗೆಪ್ಪ ಎಮ್ಮೇರ, ಉಪಾಧ್ಯಕ್ಷೆ ನಿಂಬೆಮ್ಮ ಹಾವೇರಿ, ಸಂಯೋಜಕ ಸಂಗಮೇಶ, ಜಿಲ್ಲಾ ಸಂಯೋಜಕ ವೆಂಕಟೇಶ ಪವಾರ, ತಾಪಂ ಸಹಾಯಕ ನಿರ್ದೇಶಕ ಶರಣಗೌಡ ಉಳ್ಳೇಸೂಗೂರ, ವ್ಯವಸ್ಥಾಪಕ ಮಲ್ಲಿಕಾರ್ಜುನ ಕೋರಿ, ಪಿಡಿಒಗಳಾದ ಸಂಗಣ್ಣ ನಾಗೆಬೇನಾಳ, ಶರಣಬಸವ ಬಿರಾದಾರ, ಮೋಹನ ಹುಲ್ಲೂರ, ಹುಸ್ಮಾನ್‌ ಅಲಿ, ಸಂಗಣ್ಣ ಕರಬಸಪ್ನವರ, ಲಕ್ಷ್ಮಣ ನಾಯಕ, ಬಸವಂತಭಟ್‌ ಜೋಷಿ, ಆಲಿಂಪಾಶಾ ಸಯ್ಯದ್‌, ವಿಶ್ವನಾಥ ಬಾನಸಿ, ಹೊಳೆಪ್ಪ ಮ್ಯಾಗೇರಿ, ನಾಗರಾಜ ದೊಡಮನಿ ಇದ್ದರು. ರವಿ ಅಡ್ಡಿ ನಿರೂಪಿಸಿದರು. ಚನ್ನಬಸವ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next