Advertisement

ಶೈಕ್ಷಣಿಕ ಅಭಿವೃದ್ಧಿಗೆ ಇಲಾಖೆಯೊಂದಿಗೆ ಕೈ ಜೋಡಿಸಿ

04:55 PM Feb 01, 2020 | Naveen |

ನಾರಾಯಣಪುರ: ಎಸ್‌ಡಿಎಂಸಿ ಸದಸ್ಯರು ಶೈಕ್ಷಣಿಕ ಅಭಿವೃದ್ಧಿಗಾಗಿ ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಸಿಆರ್‌ಪಿ ಶರಣು ಬಿರಾದಾರ ಹೇಳಿದರು. ಮೇಲಿನಗಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾರಾಯಣಪುರ ಕ್ಲಸ್ಟರ್‌ ಮಟ್ಟದ ಎಸ್‌ಡಿಎಂಸಿ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಾಲೆಗಳು ಸರ್ವಾಂಗೀಣ ಅಭಿವೃದ್ಧಿಯಾಗುವಲ್ಲಿ ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪಾತ್ರ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಸದಸ್ಯರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಬಗ್ಗೆ ಅರಿತುಕೊಳ್ಳುವ ಉದ್ದೇಶದಿಂದಲೇ ಶಿಕ್ಷಣ ಇಲಾಖೆ ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ತರಬೇತಿ ಹಮ್ಮಿಕೊಂಡಿದೆ. ಎಲ್ಲ ಸದಸ್ಯರು ತರಬೇತಿ ಸದುಪಯೋಗ ಪಡೆಯಬೇಕು ಮತ್ತು ಗ್ರಾಮೀಣ ಭಾಗದ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳು ಮತ್ತು ಸರ್ಕಾರ ರೂಪಿಸಿರುವ ಪ್ರತಿಯೊಂದು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಶಿಕ್ಷಕ ವಿಜಯಕುಮಾರ ಎಸ್‌ಡಿಎಸ್‌ಂಸಿ ಕರ್ತವ್ಯಗಳ ಕುರಿತು ತರಬೇತಿ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಕುಪ್ಪಣ್ಣ ಬಾರಿಕಾರ ಅಧ್ಯಕ್ಷತೆ ವಹಿಸಿದ್ದರು. ಸಿದ್ದಯ್ಯ ಶಿವಯ್ಯ ಗಣಾಚಾರಿ, ಲಾಲಸಾಬ್‌ ಚವನಬಾವಿ, ಹುಲಗಪ್ಪಗೌಡ, ಹಣಮಂತ ವಡಗೇರಿ, ಶಿವಯ್ಯಸ್ವಾಮಿ, ಗಂಗಪ್ಪ ಬಡಿಗೇರ, ಕೃಷ್ಣಾ ಬಿಜಾಸ್ಪೂರ, ಹಾಜಿಮಲ್ಲಿಂಗ, ಮಕ್ತುಂಸಾಬ್‌ ಕೊಟ್ಟೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next