ಮುಂಬಯಿ: ನಮ್ಮ ಅಸ್ಮಿತೆಯನ್ನು ನಾವು ಮುಕ್ತವಾಗಿ ಪ್ರದರ್ಶಿಸಿದಾಗ ಮತ್ತು ಸಾಂಘಿ ಕವಾಗಿ ತೋರ್ಪಡಿಸಿದಾಗ ಮಾತ್ರ ಸ್ವಸಮಾಜದ ಸಶಕ್ತೀಕರಣ, ಸ್ಥಿರತೆ ಸಾಧ್ಯವಾಗುವುದು. ಜಾಗತೀ ಕರಣದ ಈ ಕಾಲಘಟ್ಟದಲ್ಲಿ ಸ್ವಸಮಾಜ, ಸಮುದಾಯದ ನಮ್ಮತನ ನಾವು ಮರೆಯದೆ ನಮ್ಮ ಅಸ್ಮಿತೆಯನ್ನು ಮುಚ್ಚುಮರೆಯಿಲ್ಲದೆ ಹೆಮ್ಮೆಯಿಂದ ಗುರುತಿಸಿಕೊಳ್ಳುವುದು ಅತ್ಯವಶ್ಯ. ಬ್ರಹ್ಮಶ್ರೀ ನಾರಾಯಣಗುರು ಅವರ ಆದರ್ಶ, ಜೀವನಶೈಲಿ ರೂಢಿಸಿಕೊಂಡು ಮಾದರಿಯಾಗು ವಂತಿರಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರು ಐಕ್ಯತಾ ವೇದಿಕೆ ಸಮನ್ವಯಕ ರಾಘವೇಂದ್ರ ಹುಯಿಲ್‌ಗೊಲ್ ಕೊಪ್ಪಳ ತಿಳಿಸಿದರು.
ಜ. 18ರಂದು ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನಕ್ಕೆ ಭೇಟಿ ನೀಡಿ ಭವನದಲ್ಲಿನ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ನಮಿಸಿ ಅವರು ಮಾತನಾಡಿದರು.
ಭವನಕ್ಕೆ ಭೇಟಿ ನೀಡಿದ ನಿಯೋಗದಲ್ಲಿ ಹುಯಿಲ್‌ಗೊಲ್ ಅವರ ಜತೆಗೆ ಈಡಿಗ ಸಮಾ (ಕನ್ಯಾಕುಮಾರಿ), ಕರ್ನಾಟಕ ರಾಜ್ಯ ಸಂಯೋಜಕ ಸೋಮಶೇಖರ್ ಪುಟ್ಟಣ್ಣ ಬೆಂಗಳೂರು, ಭಾರ ತೀಯ ಕಲೂcರಿ ಜೈಸ್ವಲ್ ಸಂವರ್ಗೀಯ ಮಹಾಸಭಾ ಅಧ್ಯಕ್ಷ ಲಾಲ್‌ಚಂದ್ ಗುಪ್ತ, ಅಖೀಲ ಭಾರತ ಭಂಡಾರಿ ಸಮಾಜ ಅಧ್ಯಕ್ಷ ನವೀನ್ ಭಾಂದಿವುಡೆಕರ್ ಉಪಸ್ಥಿತರಿದ್ದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರು ಹಾಗೂ ಭಾರತ್ ಬ್ಯಾಂಕ್‌ನ ಕಾರ್ಯಾ ಧ್ಯಕ್ಷರಾಗಿದ್ದು ಇತ್ತೀಚೆಗೆ ಅಸ್ತಂಗತರಾದ ಬಿಲ್ಲವ ಕುಲಶಿರೋಮಣಿ ಜಯ ಸಿ. ಸುವರ್ಣ ಅವರ ಭಾವಚಿತ್ರಕ್ಕೆ ನಿಯೋಗದಲ್ಲಿದ್ದ ಮಹನೀ ಯರು ನಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಅಂತೆಯೇ ಅಸೋಸಿಯೇಶನ್‌ನ ಮುಖವಾಣಿ ಅಕ್ಷಯ ಮಾಸಿಕದ ಗೌರವ ಸಂಪಾದಕರಾಗಿದ್ದು, ಅಗಲಿದ ಎಂ.ಬಿ. ಕುಕ್ಯಾನ್ ಅವರ ನಿಧನಕ್ಕೂ ಸಂತಾಪ ವ್ಯಕ್ತಪಡಿಸಿದರು. ಅಸೋಸಿಯೇಶನ್ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಎ. ಶಾಂತಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಅಸೋಸಿಯೇಶನ್‌ನ ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯದರ್ಶಿ ಕೇಶವ ಪೂಜಾರಿ ನಿಯೋಗದಲ್ಲಿನ ಗಣ್ಯರನ್ನು ಬರಮಾಡಿ ಸ್ವರ್ಗೀಯ ಜಯ ಸುವರ್ಣ ಅವರಿಗೆ ಅರ್ಪಿತ ಅಕ್ಷಯ ಮಾಸಿಕವನ್ನಿತ್ತು ಗೌರವಿಸಿದರು.
ಇದನ್ನೂ ಓದಿ:ಮಹಾರಾಷ್ಟ್ರ: ಖಾಡ್ಕಿ ಘಾಟ್ ನಲ್ಲಿ ಪ್ರಪಾತಕ್ಕೆ ಬಿದ್ದ ವಾಹನ: 6 ಸಾವು, 18 ಮಂದಿ ಗಾಯ
ಸಂಜೆ ನಿಯೋಗವು ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ಮಾಜಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಮೀಡಿಯಾ ನ್ಪೋರ್ಟ್ಸ್ ಅಕಾಡೆಮಿ ಮಹಾರಾಷ್ಟ್ರ ಅಧ್ಯಕ್ಷ ಜವಾಹರ್ ನಾಡರ್ ಅವರನ್ನು ಭೇಟಿಯಾಗಿದ್ದು, ಬಳಿಕ ದಕ್ಷಿಣ ಮರ ನಾಡರ್ ಸಂಘಂ ತಿರುನೆಲ್ವೆಲಿ ಮುಂಬಯಿ ಶಾಖೆಯ ಧಾರಾವಿಯಲ್ಲಿನ ಕಾಮರಾಜರ್ ಮೆಮೋರಿಯಲ್ ವಿದ್ಯಾಲಯದ ಪದ್ಮಶ್ರೀ ಡಾ| ಬಿ. ಸಿವಂಥಿ ಅಡಿತನಾರ್ ವಿದ್ಯಾ ಸಂಕುಲಕ್ಕೆ ಭೇಟಿ ನೀಡಿ ಅಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಸ್ವಾತಂತ್ರÂ ಹೋರಾಟಗಾರದಿ| ಕುಮಾರಸ್ವಾಮಿ ಕಾಮರಾಜ್ ಪ್ರತಿಮೆಗೆ ಹಾರಾರ್ಪಣೆಗೈದು ಸಭೆಯಲ್ಲಿ ಪಾಲ್ಗೊಂಡರು.
ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾ| ನಿಲೇಶ್ ಪವಸ್ಕರ್, ನ್ಯಾ| ಗೌರವ್ ನಿಕರ್ಜೆ, ಮರನಾಡರ್ ಸಂಘಂ ತಿರುನೆಲ್ವೆಲಿ ಮುಂಬಯಿ ಶಾಖೆಯ ಕಾರ್ಯದರ್ಶಿ ಎಂ.ಎಸ್. ಕಾಶಿಲಿಂಗಮ್, ವಿ. ಮೈಕಲ್, ಡಿ.ಎಂ ರೆಮ್‌ಜಿಸ್, ಸಿ.ಕೆ ಪನ್ ರಾಜ್, ಕೆ. ವಚಿರಲ್ ಮತ್ತಿತರ ಗಣ್ಯರು ನಿಯೋಗ ದಲ್ಲಿನ ಗಣ್ಯರಿಗೆ ಶಾಲು ಹೊದೆಸಿ ಗೌರವಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್